ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೆನಪೇ ನೀನದೆಷ್ಟು ಸುಂದರ

ಸರೋಜಿನಿ ಪಡಸಲಗಿ

ತಲೆ ತುಂಬ ಗೋಜಲು ಗೊಂದಲ
ಎದೆ ತುಂಬ ನೆನಪುಗಳ ನೆರವಿ||
ಕಣ್ಣಂಚಲಿ ಕಂಡೂ ಕಾಣದ ತೇವು
ತುಟಿಯಂಚಲೊಂದು ಹೂ ನಗು||
ಮನದಿ ಮೌನ ರಾಗದ ಆಲಾಪ
ನೆನಪೇ ನೀನದೆಷ್ಟು ಸುಂದರ||

ನಡೆವ ದಾರಿಯಲಿ ಎಡರುತ್ತ ತೊಡರುತ್ತ
ಏನೋ ಅರಸುತ್ತ ಅತ್ತ ನೋಡುತ್ತಾ
ಥಟ್ಟನೇ ಸಿಹಿ ನೀರಿನ ಊಟೆ ಚಿಮ್ಮಿ
ಎದೆತುಂಬ ಅರಳಿ ನಿಂದ ಹೂದೋಟ
ಮನದಿ ಮೌನ ರಾಗದ ಆಲಾಪ
ನೆನಪೇ ನೀನದೆಷ್ಟು ಸುಂದರ ||1||

ಕೊಳದ ನೀರು ಅಲುಗಿ ಅಲೆಯಾಗಿ
ಚಿತ್ತದಲಚ್ಚೊತ್ತಿದ ನೆನಪ ಬಿಂಬ ಮೂಡಿ
ಕಣ್ಣ ಎವೆ ಬಾಗಿ ಆ ಬಿಂಬ ಕಾಪಿಟ್ಟಾಗ
ಭಾವಗಳ ಗೊಂಚಲು ತೂಗಿ ಎದೆ ಬಿರಿದು
ಮನದಿ ಮೌನ ರಾಗದ ಆಲಾಪ
ನೆನಪೇ ನೀನದೆಷ್ಟು ಸುಂದರ||2||

ಕೈಗೆ ಸಿಗದಂತೆ ಓಡುತಿರುವ ಸಮಯ
ತುಳಿದ ದಾರಿ ತುಳಿಯೆನೆನ್ನುವ ನಿಶ್ಚಯ
ಏನು ಎತ್ತ ತಿಳಿಯದೇ ಅಯೋಮಯ
ನೆನಪ ಬೆಳಕ ಕೋಲಿಗೆ ಜೀಕುವ ಜೀವ
ಮತ್ತೆ ಮನದಿ ಮೌನ ರಾಗದ ಆಲಾಪ
ನೆನಪೇ ನೀನದೆಷ್ಟು ಸುಂದರ
ನೀನದೆಷ್ಟು ಸುಂದರ||3||

‍ಲೇಖಕರು Avadhi

6 March, 2021

2 Comments

  1. Shrivatsa Desai

    ಬಹಳ ಸುಂದರ ಕವಿತೆ. ಸರಳವಾಗಿ ಓದಿಸಿಕೊಂಡು ಹೋಗುತ್ತದೆ. ಎಲ್ಲರೂ ಒಮ್ಮಿಲ್ಲೊಮ್ಮೆ ಅನುಭವಿಸಿದ ಸ್ಥಿತಿಯ ಲ್ಲವೆ, ಇದು?

  2. Sarojini Padasalgi

    ಖಂಡಿತಾ ಹೌದು ! ಧನ್ಯವಾದಗಳು ಶ್ರೀವತ್ಸ ದೇಸಾಯಿ ಯವರೇ.ಪ್ರಕಟಿಸಿದ ಅವಧಿ ಗೂ ಧನ್ಯವಾದಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading