ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೂರುಲ್ಲಾ ತ್ಯಾಮಗೊಂಡ್ಲು ಕವಿತೆ- ಅವ್ವ…

ನೂರುಲ್ಲಾ ತ್ಯಾಮಗೊಂಡ್ಲು

ಅವ್ವ,
ಎಲ್ಲಕ್ಕೂ ಅವ್ವಲ್ಲಿನ ಹೆಸರು
‘ಗಂಡು’ ಭಾವ ‘ಅಪ್ಪ’ನಾಗುವ
ಹೊತ್ತಿಗೆ
ಹಲವು ವಿಸ್ಮಿತ ಸ್ಥಿತ್ಯಂತರ

ಸೃಷ್ಟಿಯೇ ಅವ್ವಳ ಸ್ವರೂಪ,
ಅಪ್ಪಾ ಕೇವಲ ನಿಮಿತ್ತ, ಪಾತ್ರ ;
ಮಣ್ಣ ಒಂದು ಜೀವ ಕೃತಿ

ಪ್ರಶ್ನೆ
?!…!?…!?
ಒಂದು ಅವ್ಯಕ್ತತೆಯ,
ಅಮೂರ್ತತೆಯ
ಅನಾವರಣ, ಬೆರಗು, ಬೆಡಗು

ಇರ್ವರ ನಡುವೆ
ಅದೆಷ್ಟೋ ದೂರ, ನಡುವಿನ ಸಂಗಮ
ಯುಗ, ಯುಗಗಳ ಪರಿತಾಪ,
ಅಸ್ಮಿತ ಪ್ರೀತಿಯಷ್ಟೇ

ಒಂದು ಅನನ್ಯ, ಅದ್ಭುತ, ವಿಲಾಸಿತ-
ಪ್ರೀತಿ ಮತ್ತು ಬದುಕು

ಅವ್ವ
ಹೆತ್ತು ಕೊಟ್ಟ ಜೀವ ಚೈತನ್ಯ
ಒಂದು ಅದ್ಭುತ ಆಕಾರ; ಅದರ ಫಲ
ನಾನು ಮತ್ತು ನನ್ನ ಸುಂದರ ಮೂರ್ತತೆ

ಮನುಷ್ಯ… ಮನುಷ್ಯ…
ಹ್ಞಾ ಕೇವಲ ಮನುಷ್ಯ…

‍ಲೇಖಕರು avadhi

24 January, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading