ಪಿ ಪಿ ಉಪಾಧ್ಯ
ನುಡಿದಂತೆ ನಡೆಯಬೇಕೆನ್ನುವುದೊಂದು ನೀತಿ.
ಅದರರ್ಥ ತಿಳಿಯದವರೇ ಬಹು ಮಂದಿ…
ನುಡಿದಂತೆ ನಡೆವುದೇ ನಡೆದಂತೆ ನುಡಿವುದೇ?
ಇನ್ನು ಕೆಲವರ ಕೇಳಿ…
ನಡೆವುದೋ ಕಾಲಿನಲಿ ನುಡಿವುದದು ಬಾಯಲ್ಲಿ
ಎತ್ತಣಿಂದೆತ್ತ ಸಂಬಂಧವಯ್ಯಾ!!!
ಮುಂದುವರಿಸಿರಿ ನಿಮ್ಮ ಕೇಳುವಿಕೆಯನ್ನು
ನಾಲಿಗೆಗೂ ಕಾಲಿಗೂ ಅದೆಷ್ಟು ದೂರ
ಸಂಬಂಧವದು ಹೇಗೆ ಬೆಸೆಯುವುದೋ ಕಾಣೆ.

ಮಾನವನ ಪೃಕೃತಿ (ವಿಕೃತಿ)ಯೇ ಹಾಗೆ
ಆಚಾರ ವಿಚಾರಗಳ ನಡುವೆ ಗಾವುದ ದೂರ
ಅವೆರಡರ ನಡುವಿನ ಸಂಬಂಧ ಕನಸು ನನಸುಗಳ ಅನುಬಂಧ
ವಿಚಾರವೊಂದಿರೆ ಆಚಾರವೇ ಮತ್ತೊಂದು
ಬದುಕಿನಲಿ….
ಪರರಿಗೆ ಹೇಳಲು ವಿಚಾರಗಳು
ಆದರೆ ನಾವೇ ನಡೆವುದು ಆಚಾರ!
ನುಡಿದವರೆಷ್ಟೋ ನಡೆದವರೆಷ್ಟೋ
ಸಂಬಂಧಗಳನು ಮರೆತವರೆಷ್ಟೋ
ಚಾಚೂ ತಪ್ಪದೆ ಹೆಜ್ಜೆಯನಿಟ್ಟೂ
ಎಡವಿದವರೆಷ್ಟೋ…
ಹಿಂದಿನ ಹೆಜ್ಜೆಯ ನೆನಪೇ ಉಳಿಯದೆ
ಮುಂದಡಿಯಿಡುವವರೆಷ್ಟೋ ಮಂದಿ
ಆದರೂ ಮತ್ತೆ ನುಡಿದಾರು ನಿಲ್ಲದೆ ಮುಂದೆ ನಡೆದಾರು
ಮನದಿಚ್ಛೆಯಂತೆ…
ನಡೆ ನುಡಿ ನಡುವಿನ ಸಂಬಂಧವೇ ಹಾಗೆ
ನುಡಿದಂತೆ ನಡೆಯಲು ತಿಳಿಯದ ಮಂದಿ,
ತಿಳಿಯಲು ಬಯಸದ ಮಂದಿಯ
ನಡೆಯೇ ಹಾಗೆ!






0 Comments