ತೇರ್‌ಳಿ ಶೇಖರ್ ಅನುವಾದಿಸಿದ ‘ಮರೆತಿಟ್ಟ ವಸ್ತುಗಳು’

ತೇರ್‌ಳಿ ಎನ್‌ ಶೇಖರ್

ಪ್ರಿಯ ಆತ್ಮೀಯರೆ, ಮಲಯಾಳಂನ ಮಹತ್ವದ ಕವಿ ಹಾಗೂ ಮಲಯಾಳ ಆಧುನಿಕ ಕಾವ್ಯದ ನಿರ್ಮಾಪಕರಲ್ಲಿ ಒಬ್ಬರಾದ ಶ್ರೀ ಕೆ. ಸಚ್ಚಿದಾನಂದನ್ ಅವರ ‘ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ’ ‘ಮರನ್ನುವೆಚ್ಚ ವಸ್ತುಕಳ್’ ಎಂಬ ಮೂಲ ಮಲಯಾಳಂ ಕೃತಿಯ ನನ್ನ ಕನ್ನಡ ಅನುವಾದ ‘ಮರೆತಿಟ್ಟ ವಸ್ತುಗಳು’ ಎಂಬ ಕವನ ಸಂಕಲನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಕಟಿಸಿದ್ದು, ಆಕರ್ಷಕ ಮುಖಪುಟ ವಿನ್ಯಾಸದೊಂದಿಗೆ ಇದೀಗ ಮಾರುಕಟ್ಟೆಯಲ್ಲಿ ಲಭ್ಯವಿದೆ.

ಭಾರತ ಅನೇಕ ಕಾಲಘಟ್ಟಗಳಲ್ಲಿ ಎದುರಿಸಿದ ಮಹತ್ವದ ಪಲ್ಲಟಗಳನ್ನೂ ತಲ್ಲಣಗಳನ್ನೂ ಅವುಗಳ ದುರಂತ ಪರಿಣಾಮಗಳನ್ನೂ ಅನುಭವಿಸಿದ ಇತಿಹಾಸ ದಾಖಲಿತ ಅಂಶಗಳನ್ನೂ ಈ ಕೃತಿ ಒಳಗೊಂಡಿದೆ. ಬದುಕನ್ನೂ ಪ್ರಕೃತಿಯನ್ನೂ ಸಾವನ್ನು ಕುರಿತ ಧ್ಯಾನಸ್ಥ ಮನಸ್ಥಿತಿ ಇಲ್ಲಿದೆ. ವರ್ತಮಾನದ ಕ್ರೌರ್ಯಗಳ ಕುರಿತು ಪ್ರತಿಭಟನೆಯಿದೆ. ತೀಕ್ಷ್ಣ ವ್ಯಂಗ್ಯ ಪ್ರತಿಕ್ರಿಯೆ, ವಿಷಾದ ತುಂಬಿದೆ. ಕಾಲದೊಂದಿಗೆ ತೀವ್ರತರವಾಗಿ ಪ್ರತಿಕ್ರಿಯಿಸುವ ಇಲ್ಲಿಯ ಕವಿತೆಗಳು, ಯಾವತ್ತಿಗೂ ಯಾವುದೇ ಭಾಗದಿಂದಾದರೂ ಬಂದೆರಗಬಹುದಾದ ಅನ್ಯಾಯಗಳಿಗೆ ಮಿಕಗಳಂತೆ ಗುರಿಯಾಗುವವರ ಪರವಾಗಿ ದೃಢನಿಲುವು ತಾಳುತ್ತವೆ.

ಸೃಷ್ಟಿ ಮತ್ತು ಸಾವಿನ ರಹಸ್ಯ ಹುಡುಕುವ ನಮ್ಮ ಕಾಲದ ಸಾಕ್ಷಿಪ್ರಜ್ಞೆಯಾಗಿರುವ ಶಕ್ತ ಕವಿಯೊಬ್ಬನ ಅಂತರಂಗವನ್ನು ಪರಿಚಯಿಸುತ್ತದೆ. ತಮ್ಮ ‘ಬದುಕು ಮತ್ತು ಕಾವ್ಯ’ ಕುರಿತು ಕವಿಯ ಮಹತ್ವದ ಬರಹವೂ ಈ ಸಂಕಲನದಲ್ಲಿದೆ. ಇದು ಕನ್ನಡ ಕಾವ್ಯಾಸಕ್ತರು ಮತ್ತು ಸಹೃದಯ ಓದುಗರು ಅಗತ್ಯವಾಗಿ ಓದಬೇಕಾದ ಕಾವ್ಯಕೃತಿ.

ಪ್ರತಿಗಳಿಗಾಗಿ ಸಂಪರ್ಕಿಸಿರಿ :
ಸಾಹಿತ್ಯ ಅಕಾಡೆಮಿ
ದಕ್ಷಿಣ ವಲಯ ಪ್ರಾದೇಶಿಕ ಕಚೇರಿ
ಸೆಂಟ್ರಲ್ ಕಾಲೇಜ್ ಕ್ಯಾಂಪಸ್
ಡಾ. ಬಿ. ಆರ್. ಅಂಬೇಡ್ಕರ್ ವೀಧಿ
ಬೆಂಗಳೂರು-560 001
919482706418, 080-23443525, 080-22130870.

ನುಡಿ ಪ್ರಕಾಶನ : 91 8073321430

‍ಲೇಖಕರು Admin

November 11, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: