ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೀಲುಗಾಗಿ ಹಂಬಲಿಸುತಾ, ಹಿಂಬಾಲಿಸುತಾ ಹೋದಾಗ …

– ವಿದ್ಯಾಶಂಕರ ಹರಪನಹಳ್ಳಿ

-೧-
ಹರೆಯದಲಿ
ತುಂಬಾ ಮೋಹ ಉಕ್ಕಿಸಿದವ
ನನ್ನ ತುಂಬಾ ಕಾಡಿ, ಕಂಗೆಡಿಸಿದವ
ಹಲವು ವರ್ಷಗಳ ಬಳಿಕ
ಮೊನ್ನೆ ಮಾರ್ಕೆಟಲ್ಲಿ ಸಿಕ್ಕಿದ್ದ
ಅವನ ನೆರೆಗೂದಲು,
ಬಾಗಿದ ಬೆನ್ನು, ಸುಕ್ಕಾದ ಚರ್ಮ
ಅವನ ವಿನಯ, ಹಾಗೆ ಕೊಂಚ ಅಸಹನೆ…
ಕ್ಷಮಿಸಿ!
ಯಾಕೋ…
ಮನೆಗೆ ಬಂದು ಮನಸಾರೆ ನಕ್ಕು ಬಿಟ್ಟೆ
ಉಕ್ಕಿದ ಕಣ್ಣೀರಿನ ನಡುವೆ…
-೨-
ರಾತ್ರಿ ನಕ್ಷತ್ರ ಕಿತ್ತು ಕೊಡುವ ಮಾತಾಡಿ
ಮುಂಜಾನೆ ಬಿಡಿಗಾಸಿಗೆ ಕೈ ಚಾಚುವ
ನನ್ನವನು, ಉಕ್ಕಿಸುವ ಪ್ರೀತಿ
ಯಾವ ರಾಜ್ಕುಮಾರನೂ ಹುಟ್ಟಿಸಲಾರ!
-೩-
ಯಾವ ಪವಾಡವ ನಂಬದ
ಕ್ರಾಂತಿಕಾರಿ ಹುಡುಗಿಯಾಗಿದ್ದೆ ನಾನು
ಸಪಾಟಾದ ನನ್ನ ಎದೆ
ಹರಯದಲಿ ಮೋಹಕವಾಗಿ ಬೆಳದಿದ್ದು ಕಂಡು
ಲೌಕಿಕದಲಿ ಮುಳಗಿಹೋದೆ!
-೪-
ಏನೂ ಸಾಧಿಸದಿದ್ದರೂ
ಇನ್ನೂ ಕನಸ ಕಾಣಬಲ್ಲೆ
ಎಂಬ ವಿ-ಶ್ವಾಸದಲೇ
ಇನ್ನೂ ಉಸಿರಾಡುತ್ತಿರುವೆ
-೫-
ಜೋಗಿ, ಜಂಗಮರು, ಫಕೀರರು
ಹೇಳಿದ್ದನ್ನು ಪೂರ್ತಿ ನಂಬದಿದ್ದರಿಂದ
ನಾನಿನ್ನೂ ಸ್ಥಾವರವಾಗಿಲ್ಲ!
 

‍ಲೇಖಕರು avadhi

12 April, 2013

7 Comments

  1. laxmikant mirajakar

    Oh!nice super lines.tunba khishiyayitu odi.thank you.

  2. Rj

    ಜೋಗಿ, ಜಂಗಮರು, ಫಕೀರರು
    ಹೇಳಿದ್ದನ್ನು ಪೂರ್ತಿ ನಂಬದಿದ್ದರಿಂದ
    ನಾನಿನ್ನೂ ಸ್ಥಾವರವಾಗಿಲ್ಲ!
    * Ahaa…Yavaaga barediri ivannella? 🙂

  3. Vinay Bharadwaj

    Tumbaa ishta aaytu VS 🙂

  4. Praveen Kumar Danagoudra

    ಏನೇನೋ ಮಾಡಬೇಕು ಅಂದುಕೊಂಡಿದ್ದೆ ,
    ಬೇಕಾಗುವ ಸಮಯ ಲೆಕ್ಕೆಸಿದೆ ..
    ೩೦೦ ವರ್ಷ ಬೇಕಾಗಾಬೇನೋ ಅನ್ನಿಸತೊಡಗಿತು …
    ೩೦ ವರ್ಷ ಬದುಕುವುದೇ ಖಾತರಿ ಇಲ್ಲ ಅಂತ ….
    ಎಲ್ಲಾ ಬಿಟ್ಟು ತಿರುಕುನ ಕನಸ ನೆನಪಿಸಿಕೊಂಡೆ ;

  5. Anjali Ramanna

    Very Good 🙂

  6. Mohan V Kollegal

    ಚೆನ್ನಾಗಿವೆ… ಎಲ್ಲಾ… 🙂

  7. mmshaik

    nice..sir

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading