ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೀಲಮೇಘ

ಅಪೂರ್ವ ಜ್ಞಾನ್

ಸರಿದ ಸೂರ್ಯ ಪರಿಧಿಯಲ್ಲಿ
ಚಂದ್ರನಿರದ ಇರುಳ ಮೌನ
ರತ್ನ ಹಣತೆ ಬೆಳಕನುತ್ತಿ
ಸೋತ ಕಣ್ಣ ಹೊಳಪು ಹೊತ್ತಿ
ನೀಲಮೇಘ ಕರಗಿ, ಒರಗಿ ತಾಯಿ ಮಡಿಲಲಿ

ತಾರೆಗಳನು ಎಣಿಸಿ, ಸರಿಸಿ
ಕಣ್ಣನೀರ ಒರೆಸಿ, ಮರೆಸಿ
ಕೊಳಲ ದನಿಗೆ, ಲಾಲಿ ಹೊಸೆದು
ಕೊರಳ ಬಳಸಿ, ಹರೆಯಸರಿಸಿ
ಮಾಧವನು ಸಿರುತಾಕಿ ಜಗದ ಪರಿವೆ ಮರೆತಳು

ಇರುಳು ಕರಗಿ, ಕಾಲಮರಳಿ
ಮೃದು ಮಧುರ ಹರ್,
ಚಿತ್ತ ವರ್ಷಧಾರೆ.
ಅಮ್ಮ ನೊಡಲ ತೊಟ್ಟಿಲಲಿ
ಬೇಗೆ ಹರಿದು, ಮರೆವ ಮರೆತು
ನೀಲಮೇಘ ಕರಗಿ, ಒರಗಿ ಮಡಿಲಲಿ

‍ಲೇಖಕರು Avadhi

15 June, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading