ಅನಂತ ಕುಣಿಗಲ್
ಅವ್ವ ಕ್ಷಮಿಸು,
ನನ್ನ ತಮ್ಮನಿಗಿಂತ
ಹೆಚ್ಚು ಮೊಲೆಯಾಲು ಉಂಡಿದ್ದರೆ
ಅಪ್ಪಾ ಕ್ಷಮಿಸು,
ಮಲಗಿದ್ದಾಗ ಕನಸ್ಸಿನಲ್ಲಿ ಒದ್ದಿದ್ದರೆ
ಮತ್ತು ಆಡುವಾಗ ನಿನ್ನ ಕೆನ್ನೆ ಕಚ್ಚಿದ್ದರೆ
ಗುರುವೇ ಕ್ಷಮಿಸು,
ಇಲ್ಲದ ಸುಳ್ಳು ಹೇಳಿ
ಹೋಂ ವರ್ಕ್ ಇಂದ ತಪ್ಪಿಸಿಕೊಂಡಿದ್ದರೆ
ಭಾರತ ಮಾತೆ ಕ್ಷಮಿಸು,
ಧರ್ಮಕ್ಕೆ ವಿರುದ್ಧವಾಗಿ ನಡೆದಿದ್ದರೆ
ಹಾಗೂ ಸತ್ಯ, ನ್ಯಾಯಕ್ಕಾಗಿ ಹೋರಾಡದಿದ್ದರೆ
ಕನ್ನಡಮ್ಮ ಕ್ಷಮಿಸು
ಪ್ರತಿಷ್ಠೆಗಾಗಿ ನಿನ್ನನ್ನು ಮರೆತು
ಕಾಲನಿಯಮದಲ್ಲಿ ನಿನ್ನನ್ನು ಗುರುತಿಸದಿದ್ದರೆ
ಯಾಶಿ ಕ್ಷಮಿಸು,
ನಿನ್ನ ಕಲ್ಪನೆಯಲ್ಲಿ ಅತಿಶಯೋಕ್ತಿ ಇದ್ದರೆ
ಅಥವಾ ನನ್ನ ಪ್ರೀತಿ ಸುಳ್ಳಾಗಿದ್ದರೆ
ಓದುಗರೇ ಕ್ಷಮಿಸಿ
ನೀವು ಬಯಸಿದ್ದನ್ನು
ಜವಾಬ್ದಾರಿಯುತವಾಗಿ ಬರೆಯದಿದ್ದರೆ
0 ಪ್ರತಿಕ್ರಿಯೆಗಳು