ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೀನು ಮುತ್ತು ಸುರಿಸಿದಷ್ಟು ಸಲೀಸಾಗಿ ನಾನು ಪದ ಹೆಣೆಯಲಾರೆ..

ಸತ್ಯಾ ಗಿರೀಶ್

ನೀನು ಮುತ್ತುಗಳ
ಸುರಿಸಿದಷ್ಟು ಸಲೀಸಾಗಿ
ನಾನು ಪದಗಳನ್ನು
ಹೆಣೆಯಲಾರೆ ಕಣೊ ಚೆಲುವ!!

ಆದರಿದು ನಿನ್ನ ಗಮನದಲ್ಲಿರಲಿ
ನಿನಗಾಗಿ ಸುರಿದ ಪ್ರತಿಅಕ್ಷರವನ್ನೂ
ತುಟಿಯಂಚಿಗೆ ತಾಕಿಸಿಯೇ
ಮುಂದುವರಿಯುತ್ತೇನೆ!!

ಕೊನೆಯ ಸಾಲನ್ನು
ತಲುಪುವಷ್ಟರಲ್ಲಿ
ನಿನ್ನ ತುಂಟತನದ ನೆನಪಾಗಿ
ಆ ಹಳೆಯ ಸಾಲಿಗೆ ಹೊಸದೊಂದು
ತಿರುವು ಕೊಟ್ಟುಬಿಡುತ್ತೇನೆ,
ತುಟಿಯಲ್ಲಿನ ಸಣ್ಣ ನೋವೊಂದು
ಮಾತ್ರ ಮೆಲ್ಲಗೆ ಇಣುಕಿ ನೋಡಿ
ನನ್ನನು ಅಣಕಿಸುವುದ ಮರೆಯುವುದೇ ಇಲ್ಲ!!

‍ಲೇಖಕರು Avadhi GK

4 April, 2018

6 Comments

  1. Anand

    Liked the way of depicting love in real form

    • Sathya Girish

      Thank you

      • ಷಕೀಬ್ ಎಸ್ ಕಣದ್ಮನೆ

        ಚಂದ ಇದೆ

  2. Nagaraja

    ತುಂಬಾ ಚಂದದ ಕವಿತೆ

    • Sathya Girish

      Thank you Sir

  3. ದೊಡ್ಡಕಲ್ಲಹಳ್ಳಿ ನಾರಾಯಣಪ್ಪ

    ಸತ್ಯ ಮೇಡಂ, ಕವಿತೆ ತುಂಬ ಚನ್ನಾಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading