ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿಶ್ಯಬ್ಧ…ಬುದ್ಧನಿದ್ದಾನೆ…

ವಸು ವತ್ಸಲೆ

ನಿಶ್ಯಬ್ಧ,…. ಬುದ್ಧನಿದ್ದಾನೆ
ಗೋಡೆ ಗೋಡೆಯಲ್ಲಿ,
ಕಛೇರಿ ಕಪಾಟುಗಳಲ್ಲಿ
ಮನೆಯ ಉಡುಗೊರೆಯ ಪೆಟ್ಟಿಗೆಗಳಲಿ
ಅಂಗಡಿಗಳ ದುಬಾರಿ ಗೊಂಬೆಗಳ ಸಾಲಿನಲ್ಲಿ,
ಬಂಡವಾಳಶಾಹಿಗಳ ಮುಷ್ಠಿಯಲ್ಲಿ,
ದೇಶವ ಕೊಳ್ಳೆಗೈವವರ ಕೈ ಗಡಿಯಾರದಲ್ಲಿ
ಅರೆಗಣ್ಣ ತೆರೆದು ಜಗವ ನೋಡುತ
ನಗುತಾ, ತನ್ನ ಬೊಧನೆಗಳ ಬಿಕರಿಗಿಟ್ಟ
ನಮ್ಮ ನಡುವೆ ಬುದ್ಧನಿದ್ದಾನೆ ನಿಶ್ಯಬ್ಧ….

ಮನದ ಮಲ ಕಶ್ಮಲಗಳ ಶುದ್ಧಿಸದ ನಾವು
ಅವನನ್ನು ತುಕುಡೆ ಹಳೆಯ ಬಟ್ಟೆಯಲ್ಲೊರಸಿ
ಬಣ್ಣಗಳೆಯದಂತೆ ಕಾಪಿಟ್ಟಿದ್ದೇವೆ…
ಅವನ ಧರ್ಮವ ಭಸ್ಮಗೊಳಿಸಿಯೂ,
ಕಪಾಟುಗಳಲ್ಲಿ ಅವನನ್ನು ಉಳಿಸಿಕೊಂಡಿದ್ದೇವೆ….
ಇದೆಲ್ಲವ ಒಳಗಣ್ಣಿನಿಂದ ನೋಡುತ್ತಲೇ
ಬಿಕ್ಕಳಿಸಿ ಬುದ್ಧ ನಕ್ಕಿದ್ದಾನೆ…
ವಿಭ್ರಾಂತುಗಳಲ್ಲಿ ವಿಕೃತಗೊಳ್ಳುತ್ತಿರುವ ಜಗವ
ನೋಡಿ ಕನಿಕರಿಸಿ ಮೂಕವೇದನೆಯಿಂದ
ನರಳಿದ್ದಾನೆ …..ನಿಶ್ಯಬ್ಧ ಬುದ್ಧನಿದ್ದಾನೆ.

‍ಲೇಖಕರು Admin

15 October, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading