ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿವೇದಿತಾ ಎಚ್ ಕವಿತೆ – ನಾವು… ಸ್ತ್ರೀಯರು…

ನಿವೇದಿತಾ ಎಚ್

ನಮ್ಮ ಬದುಕು ಹೀಗೆಯೇ ಅಲ್ಲವೇ?
ನಿತ್ಯ ವಿನೂತನ, ನಡಿಗೆ ಚಿರಂತನ
ತ್ರಿಶಂಕು ಸ್ವರ್ಗದಲ್ಲಿ ನಮ್ಮ ರಾಜ್ಯಭಾರ
ಭ್ರಮಾ ಸಾಮ್ರಜ್ಯದಲ್ಲಿ ಸಡಗರ

ವಿಶಾಲ ಅಂಬರದ ಕೆಳಗೆ
ನೆಲವಲ್ಲದ ನೆಲ
ಅಟ್ಟಣಿಗೆಯ ಮೇಲೆ ನಾಜೂಕಿನ ಪಥಸಂಚಲನ
ಆಯ ತಪ್ಪಿದರೆ ಎಲ್ಲ ನೀರುಪಾಲು

ನಮ್ಮ ಬಿಂಬ ಸ್ಪಷ್ಟವೇ
ಆದರೆ ಚಂಚಲ ಪ್ರತಿಬಿಂಬದ
ಬಳುಕುವ ಅಸ್ಮಿತೆಯೇ
ಆರೋಪಿಸಲಾಗಿ ನಾವಿಂದಿಗೂ
ಅಸ್ಪಷ್ಟ, ಅಶಕ್ತ,

ಆದರೆ,
ಕೇಳಿಸಿಕೊಂಡುಬಿಡಿ
ನಾವು ನೀರಿನಂತೆ ಆಕಾಶದಂತೆ ಹಸುರಿನಂತೆ
ಜೀ+
ವಂತ, ಅನಂತ, ಆಹ್ಲಾದಕರ
ಕನಸ ಗರ್ಭಹೊತ್ತ
ಕಾಲನ ಕಲಾದೇವತೆಗಳು

‍ಲೇಖಕರು Admin

8 March, 2022

1 Comment

  1. T S SHRAVANA KUMARI

    ಚೆನ್ನಾಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading