ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿಯತ್ತು

ಲಲಿತಾ ಸಿದ್ಧಬಸವಯ್ಯ

murty11.jpg

ತತ ಜರುಗಬ್ಯಾಡ, ಮಗು ಮಲಗೈತೆ
ಅತ್ತೂ ಅತ್ತೂ ಈಗಿನ್ನ ಹಂಗೆ ಕಣ್ಣು ಮುಚ್ಚೈತೆ
ತೋ, ಬಿಡು ಎದೆ, ನಂದಿನ್ನಾ ಕುಡಿಯೋ ಮಗು
ಕಿರುಚಬ್ಯಾಡ, ಬೇಕಾದ್ರಿರು ಬ್ಯಾಡದಿದ್ರೆ ಎದ್ದೋಗು
ಏನಂದೆ, ಉಪವಾಸ ಬೀಳ್ತಿಯೇ ಬೋಸುಡಿ ಅಂದಾ
ಹೊಸದಲ್ಲ, ಕಂಡಿದೀನಿ ಹೋಗು ಹುಟ್ಟಿದಾಗಿನಿಂದ
ಜಂಬೂ ಸವಾರಿ ತೋರಿಸ್ತಾರಾ, ನಿನ್ನಿಪ್ಪತ್ತು ರೂಪಾಯ್ಗೆ
ಹಾಲಿನ ಪುಡಿ ಅರ್ಧ ಡಬ್ಬ ಬರಲ್ಲ ನನ್ನ ಮಗೀಗೆ
ಏನಂದೆ, ಒಂದಿನದ ಪೂರ್ತಿ ಕೂಲಿ ಇಷ್ಟೇ ಕಣೆ ಅಂದಾ
ತೋತ್ತರಿಕೆ, ಹೋಗ್ಲಿ ಬಿಡತ್ತ, ಇವತ್ತು ಕಾಸೇನು ಬ್ಯಾಡ
ಅಂಗಂತ ನೋಡು, ಅಗಲಗಲ ಇಲ್ಲಿಗೇ ಬರಬ್ಯಾಡ
ವೊಟ್ಟೆಪಾಡು ನಂದೂ ಮಗಿಂದೂ ನಡೀಬೇಕಲ್ಲವಾ
ಯಾಕ್ ಸುಮ್ನಾದೆ, ಪುಗಸಟ್ಟೆಗೆ ಮನಸೊಪ್ಪತಾ ಇಲ್ಲವಾ
ನಿಯತ್ತುಗಾರ, ಓಗ್ಲಿ ಮುಂದಿನ್ಸಾರಿ ಮಗೀಗೊಂದು ಬೊಂಬೆ ತಗಂಬಾ.

ಚಿತ್ರ: ಎಂ ಎಸ್ ಮೂರ್ತಿ

‍ಲೇಖಕರು avadhi

15 October, 2007

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading