ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿನ್ನ ಮೇಲಿನ ಪ್ರೀತಿಗೆ..

ಮಾಲತಿ ಗೋರೆಬೈಲ್

**

1

ನಿನ್ನ ಮೇಲಿನ ಪ್ರೀತಿಗೆ

ಸಾಕ್ಷಿಯಾಗಿವೆ

ನನ್ನ ಕಣ್ಣುಗಳು.

         2

ಕಣ್ಣ ಹನಿಗಳನ್ನು

ಜತನದಿಂದ ಉಳಿಸಿಕೋ.

ಬೇಕಾಗಬಹುದು

ತೀವ್ರ ಬರಗಾಲವಿದೆ.

           3

ಜ್ವರದ ಕಾವು ಇಳಿಯಲು

ಸುರಿಯಬೇಕು

ಪ್ರೀತಿಯ ಮಳೆ

           4

 ಇಷ್ಟೊಂದು ಬೇಗೆಯಲ್ಲೂ

ತಣ್ಣಗಿರುವ ನೀನು 

ಇರಬಹುದು

ಮಡಿಕೆಯ ಸಹಚಾರಿ !

           5

ಅರಿವಿರದಂತೇ

ಸೆಳೆಯುವದು

ಒಲವ ರೀತಿ…

        6

ನಿನಗೆ ಅಲ್ಲಿ ಚಡಪಡಿಕೆ ಜೋರಾಗಿದೆ

ಎಂದರೆ ನಾನಿಲ್ಲಿ

ಶೂನ್ಯವಾಗಿರುತ್ತೇನೆ..

           7

ನನ್ನದೆಯ ನವಿಲು ಗರಿಬಿಚ್ಚಿದರೆ

ನೀನು ಸೋನೆ ಮಳೆಯಾಗಿಬಿಡುವೆ..

           8

ಕಾಡು ಸುಮದ ಘಮಕೆ

ಹೆಸರಿನ ಮೊಹರು ಬೇಕಿಲ್ಲ..

           9

ತಂಗಾಳಿಯಾಗಿ ಬಾ,

ಬೆವರು ಬದುಕಾಗಿಬಿಡುತ್ತದೆ!

           10

ಕಾರಣವಿಲ್ಲದೆ ಕಮರುವ ಪ್ರೀತಿಗೂ

ಚಿಗಿಯುವ ತವಕ!

‍ಲೇಖಕರು Admin MM

27 April, 2024

1 Comment

  1. Lingraj sottappanavar

    ತುಂಬಾ ಆಪ್ತ ಸಾಲುಗಳು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading