ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ನಿನ್ನ ನೆನಪೇ ಸಾಕು, ಸಾಕು ಈ ಪರಿಪರಿ ಪ್ರೀತಿ' – ಎಚ್ ಎನ್ ಆರತಿ ಕವನ

ಮರುಹುಟ್ಟಿನ ಕ್ಷಣಗಳು

ಎಚ್. ಎನ್. ಆರತಿ

ನಿನ್ನ ಪ್ರಶ್ನೆಗಳ ಮಡಿಲಲ್ಲೇ
ನನ್ನ ಉತ್ತರವಿದೆ ನೋಡಿಕೋ
ಮತ್ತೆ ಕೆದಕದೇ ನನ್ನೊಡನೆ
ನಿಟ್ಟುಸಿರ ತೋಡಿಕೋ.
ಹಲವು ರಾತ್ರಿಗಳ ಕಳೆದ
ವಿರಹದುರಿಯೊಡನೆ,
ಕಳೆಯಲಾಗದ ಕಾಲದಂಚಿಂದ ಎದ್ದ
ಅಂಚು ಅಂಚಿನ ನಿನ್ನ ನೆನಪುಗಳಲಿ
ಎಷ್ಟೊಂದು ನೋವುಗಳು
ಹೇಳಲಾಗದು, ನೀನೇ
ಬಾಚಿ ತಬ್ಬಬೇಕು, ತಿಳಿಯಬೇಕು

ನಿನ್ನ ಪಕ್ಕದಲ್ಲಿ ಒತ್ತಿ ಹರಡಿದ
ಹಂಬಲವು ಹಂಬುಗಳಂತೆ
ಬೆಳೆಯುತ್ತವೆ. ನಾನೂ

ನಕ್ಷತ್ರ ಎಣಿಸುತ್ತಾ

ಎಣಿಕೆ ಮೀರಿದ ನಿರೀಕ್ಷೆಗಳಲ್ಲಿ.
ಪ್ರತಿಯೊಂದು ಪಲ್ಲವಿಯೂ
ಧ್ವನಿ ಭಾರದ ಬಾರದ
ಹಾಡುಗಳಾಗಿ ಸರಾಗ
ರಾಗ ಹರಿಯದೇ ನಟ್ಟ
ನಡುವಿನಲ್ಲಿ ಕೈಬಿಟ್ಟಂತೆ.
ನಿನ್ನ ನೆನಪೇ ಸಾಕು
ಸಾಕು ಈ ಪರಿಪರಿ ಪ್ರೀತಿ
ನಿನ್ನ ನೆನಪಿಂದ ಬಿಡಿಸಲು ನನ್ನ
ನಾನು ಮತ್ತೊಮ್ಮೆ ಹುಟ್ಟಿ ಬಂದಂತೆ !
ನಿನ್ನ ನೋಟವೇ ಹಾಗೆ
ದೂರವಾದರೇ ಅದರಿಂದ
ನಾನು ಜೀವ ಸಮಾಧಿಯಾದಂತೆ…
 

‍ಲೇಖಕರು avadhi

16 February, 2014

11 Comments

  1. nagraj.harapanahalli

    ಚೆಂದ ಕವಿತೆ

  2. Vithal Dalawai

    virahaduriyali benda kavite

  3. smitha Amrithraj

    istavayitu kavite-smitha

  4. syed faizulla

    ಚಿಂತನೀಯ ಪದ್ಯ
    -ಫೈಜ್ನಟ್ರಾಜ್

  5. ಟಿ.ಎಸ್.ಗೊರವರ

    ಚೊಲೋ ಇದೇ ಮೇಡಂ ಪದ್ಯ

  6. mmshaik

    nice..very nice poem..

  7. Uma Rao

    Nice!

  8. ananya

    abhinandane..

  9. narayan raichur

    modala naalku saalugale kavanakke bhadra peethikeyannodagisive ; ” dhwani bharada baarada …saraaga raagaad ” kooda istavadavu – GOOD !!

  10. Anonymous

    ista aytu
    girish k

  11. H.B.Madangowda

    so…sweet…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading