ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿನ್ನ ದನಿ ಸೇರಿದ ನನ್ನ ಹೆಸರು..

ನನ್ನೊಲವು

ಶಿಲ್ಪ. ಕೆ

ಅರೆಕ್ಷಣ ಮಿಂಚಿ ಮಾಸುವ ನಿನ್ನ

ಮುಗುಳ್ನಗುವೇ ಉಡುಗೊರೆ ಈ ಬದುಕಿಗೆ…

ಒಂದೊಮ್ಮೆ ನೋಡಿ ಮರೆಮಾಚುವ

ನೋಟವೇ ಸುಂದರ…

ನಿನ್ನ ದನಿ ಸೇರಿದ ನನ್ನ ಹೆಸರು

ಇನ್ನಷ್ಟು ಮುದ್ದು ಹೇಳಲಾಗದು ಖುಷಿಯ…

 

ಹುಡುಕ ಹೊರಟಿದೆ ಮನವೀಗ ನಗುವೊಂದನು…

ನನ್ನದೇ ನಗುವೊಂದನು …

ತುಸು ದೂರದ ಹಿಂದೆ

ಪೂರ್ಣವಾಗಿದ್ದ ಕನಸೊಂದು

ಇದೋ ನೋಡು ಛಿದ್ರ ಛಿದ್ರ

ಇತ್ತ ತಿರುಳೂ ಇಲ್ಲ …

ಅತ್ತ ಅಸ್ತಿತ್ವವೂ ಇಲ್ಲ

ಆದರೂ ಚದುರಿಹೋಗಿಹ ಕನಸಿನ ತುಣುಕನ್ನು

ಮೆಲುಕು ಹಾಕುತ್ತಾ  ಓಡುತಿದೆ ಬದುಕು

ಅದೇ ಪುರಾತನ ನಗುವ ಹುಡುಕುತ್ತಾ…

 

‍ಲೇಖಕರು Avadhi

19 October, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading