೧೬/೧೨…
ಎಂ ಎಂ ಶೇಕ್
ಅಮ್ಮೀ ಈ ಬೂಟು
ಕಿತ್ತು ಹೋಗಿದೆ ..
‘ನಾಳೆ’ ನನಗೆ ಹೊಸ
ಬೂಟು ಕೊಡಿಸು ..
ಸರಿ ಬೇಟಾ ಹೊತ್ತಾಯಿತು
ಈ ‘ಕೊನೆ’ ತುತ್ತು ತಿನ್ನು ..
ಬೇಗ ನಡೆ ಅಬ್ಬು
ಮಿಸ್ ಬೈತಾರೆ ..
ಧಾವಂತದಲ್ಲಿ ಹಾಕಿದ
ಆ ಹೆಜ್ಜೆಗಳು ..
ಮರಳಿ ಬರಲಿಲ್ಲ ……

ಕಾದ ಕಣ್ಣುಗಳು
ದಿಗಂತಕ್ಕೆ ಬೆನ್ನಟ್ಟಿದ್ದವು ..
ಅಗೋ ಅಲ್ಲಿ ..
ನೇತು ಹಾಕಿದ ಆ ಚೀಲ
ನಿನ್ನೆ ಜಿದ್ದು ಮಾಡಿ ಕೇಳಿದ್ದು
ಆ ಧ್ವನಿ ಕಿವಿಯಲ್ಲಿದೆ ..
ಅತ್ತು ರಂಪಾಟ ಮಾಡಿ
ಕೆನ್ನೆಯಲ್ಲಿ ಇದ್ದ
ಗುಲಾಬಿಗೆಲ್ಲಾ
ಕೆಂಪು ಬಳೆದರಲ್ಲಾ …..
ನನಗೀಗ ಎಲ್ಲವೂ ಕೆಂಪು
ಈ ಉಡಿ ಕೆಂಪು ..
ಕಣ್ಣೀರು ಕೆಂಪು ..
ಹೃದಯದ ಖಾಲಿತನ
ತುಂಬಿ ಕೊಡುತ್ತಿದೆ
ಜಗತ್ತೆಲ್ಲಾ ಉರಿಸಿದ
ಮೇಣದ ಬತ್ತಿಗಳು ..
ಆದ್ರೆ,
ನನ್ನ ಜಗತ್ತು ಕಾಲಿಯಾಯ್ತು ಬೇಟಾ ..
ಕೇಳುವೆ ಪ್ರಶ್ನೆ
ನನ್ನ ಸೀರೆಯ
ಅಂಚು ಅನಾಥವಾಗಿಸಿದ
ನಿನ್ನ ಧರ್ಮ ಯಾವದದು..?
ನಿನ್ನ ಕೋವಿಗೆ
ಕಲಿಸಿದ್ದು ಅದಾವ ಭಾಷೆ ..?
ದೇವ್ರು ಮೆಚ್ಚಿ ನಿಂಗೆ
ಜನ್ನತ್ ನೀಡುವದಾದ್ರೆ
ಕೇಳು, ನಾ ಅವನನ್ನೇ
ಒಲೆಯಲಿಡುವೆ ….!!!!!!!






Mana kalaki kannanchu thevagondithu..
ಪದ್ಯ ಓದಿ ನೋವಾಯಿತು.ಅಷ್ಟೊಂದು ಗಾಢವಾಗಿದೆ, ಭಾವ.
nanage Ballad of Burmingham nenapaguttide. Taayiye maguvannu balavanthadinda church ge kaluhisuttale. Adare alli bomb explode aaguttade. Taayi Where is my Baby. Here is the shoe. endu tundaada kaalannu hididu aluttale.
ಕವನ ಬಲು ಗಾಢ, ಈ ತಾಯಿಯ ಆಕ್ರೋಶದ ಮುಂದೆ ಭೂಮಿಯೇ ಸ್ಫೋಟಿಸಿದರೂ ಸೋಜಿಗವೆನಿಸದು.. ದುಷ್ಟರಿಗೆ ಶಿಕ್ಷೆಯಾಗಲೇಬೇಕು. ಅಂದಾಗ ಮಾತ್ರ ಮನುಕುಲ ತುಸುವಾದರೂ ನೆಮ್ಮದಿಯಿಂದ ಇದ್ದೀತು.ಆದರೂ ಕಳೆದುಕೊಂಡದ್ದು ಮರಳಿ ಬರುವುದೇ ಇಲ್ಲವಲ್ಲ, ಜಗತ್ತಿನಲ್ಲಿ ಮಗುವನ್ನು ಕಳೆದುಕೊಂಡ ತಾಯಿಗೆ ಸಾಂತ್ವನ., ಮಕ್ಕಳ ಜೀವಗಳನ್ನು ಯಾವ ದೇವರೂ ತಂದುಕೊಡುವುದಿಲ್ಲ. ಬರ್ಬರ ಕ್ರೂರತೆಗೆ ಮನುಕುಲದ ಧಿಕ್ಕಾರವಿರಲಿ.
Bhaavenegalu melaisida kavitege aenendu abhipraya helali….
ಮೆಡಂ ವಂದನೆಗಳು
ನಿನ್ನ ಕೋವಿಗೆ ಕಲಿಸಿದ್ದು ಅದ್ಯಾವ ಭಾಷೆ ಒಂದು ಮನ ಕಲಕುವ ಕವನ. ಯಾಕೋ ಗೊತ್ತಿಲ್ಲ ಕವನ ಓದುತ್ತಿದ್ದ ಹಾಗೆ ನನಗೆ ನೆನಪಿಗೆ ಬಂದದ್ದು ನಮ್ಮ ನೆರೆ ರಾಷ್ಟ್ರದಲ್ಲಿ ನಡೆದ ಮಕ್ಕಳ ನರಮೇದ, ಬಹಳ ವಸ್ತುನಿಷ್ಟ ಮತ್ತು ಪ್ರಸ್ತುತವೆನಿಸುವ ಕವನ.
prtikriyisida sahrudayavantarige dhnyavaadagaLu…