ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾನೂ ತುಳಿಯುವೆ ನಿನ್ನನ್ನು… ಮುಚ್ಚಿದಾಗ ನೀನು ಕಣ್ಣು…

ಎರಡು ‘ಕಬೀರ ದೋಹೆ’ಗಳು…

ಗೋಪಾಲ ವಾಜಪೇಯಿ

ಕನ್ನಡದ ಜಾಯಮಾನಕ್ಕೆ ಒಗ್ಗುವಂತೆ, ಅರ್ಥವ್ಯತ್ಯಾಸವಾಗದ ಹಾಗೆ, ಹಾಡಲು ಸುಲಭವಾಗಲೆಂಬ ಉದ್ದೇಶದಿಂದ ಮಾಡಿದ ಸರಳ ಅನುವಾದಗಳಿವು
1
ಮಾಯೆ ಸಾಯಲಿಲ್ಲ, ದೇಹದ ಮೋಹ ಸಾಯಲಿಲ್ಲ –
ಮರುಮರುಗಿ ಮರಣವನು ಅಪ್ಪಿತು ಮನುಜನ ಈ ಶರೀರ…
ಆಸೆ ಸಾಯಲಿಲ್ಲ, ಮನದ ದಾಹ ಸಾಯಲಿಲ್ಲ –
ಹೀಗೇ ಹೇಳುತ ಹಾಡುತ ಪಾಡುತ ಸಾಗಿದ ತಾನು ಕಬೀರ…
(ಮೂಲ ಹಿಂದಿ :
ಮಾಯಾ ಮರಿ ನಾ ಮನ ಮರಾ, ಮರ ಮರ ಗಯೇ ಶರೀರ
ಆಶಾ ತೃಷ್ಣಾ ನಾ ಮರಿ, ಕಹ ಗಯೇ ದಾಸ ಕಬೀರ…)

2
ಎಷ್ಟು ತುಳೀತಿ ತುಳೀ ತುಳೀ… ಅಂದಿತು ಕುಂಬಾರಗೆ ಮಣ್ಣು…
ಕೇಳೋ ಒಂದಿಲ್ಲೊಂದು ದಿನ, ನಾನೂ ತುಳಿಯುವೆ ನಿನ್ನನ್ನು…! ಮುಚ್ಚಿದಾಗ ನೀನು ಕಣ್ಣು…
(ಮೂಲ ಹಿಂದಿ :
ಮಾಟಿ ಕಹೇ ಕುಮ್ಹಾರ ಸೆ, ತೂ ಕ್ಯಾ ರೌಂದೆ ಮೋಯ್…?
ಏಕ ದಿನ ಐಸಾ ಆಯೇಗಾ, ಮೈ ರೌಂದೂಂಗಿ ತೋಯ್…!)
 

‍ಲೇಖಕರು avadhi

4 April, 2013

6 Comments

  1. ಹರಿ

    ವ್ಹಾವ್!!! ಅದ್ಭುತ ಸಾಲುಗಳು….
    ಧನ್ಯವಾದಗಳು ಗೋಪಾಲ ವಾಜಪೇಯಿಯವರಿಗೆ.

  2. samyuktha

    thanks sir!

  3. harish shetty,shirva

    ಅದ್ಭುತ ಸರ್ ,
    ಸರ್ ನಾನೂ ಕೆಲವು ಕಬೀರ ದೋಹೆಗಳ ಅನುವಾದ ಮಾಡಿದ್ದೇನೆ, ಒಮ್ಮೆ ನನ್ನ ಬ್ಲಾಗ್ ಭೇಟಿ ನೀಡಿ ನೋಡಿ ಸರ್.
    http://www.harishshettyshirva.blogspot.com

  4. ಕೆ.ಎಂ.ವಿಶ್ವನಾಥ

    ಅತ್ಯಂತ ಅರ್ಥಪೂರ್ಣವಾದ ಮಾತುಗಳು ಸರ್
    ಪ್ರತಿಯೊಬ್ಬ ಮನುಷ್ಯ ತಿಳಿಯಬೇಕಾದ ಅವಶ್ಯಕತೆಯಿದೆ

  5. ಗಣನಾಥ

    ಸುಂದರ , ಬಹಳ ಸುಂದರ. ಇನ್ನಷ್ಟು ಬೇಕೆನಿಸುತ್ತಿದೆ.

  6. Sathish Naik

    ಆ ದಿನ ಪುಸ್ತಕ ಬಿಡುಗಡೆ ಸಮಾರಂಭದ ಸಂಧರ್ಭದಲ್ಲೇ ಇವುಗಳ ರುಚಿ ಸವಿದು ವಾವ್ ಅನ್ನಿಸಿತ್ತು. ಅದನ್ನ ಮತ್ತೆ ದಕ್ಕಿಸಿ ಕೊಟ್ರೀ.. ಚೆಂದದ ಅನುವಾದಗಳು. ದೊರಕಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸಾರ್.. 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading