ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾನು ಮಲಗಿದ ಕ್ಷಣ, ನಿನ್ನ ಕಣ್ಣು ಮುಚ್ಚಿಕೊಳ್ಳುತ್ತವೆ

ನೆರುಡಾನ ಒಂದು ಪ್ರೇಮ ಪದ್ಯ

-ಅಲೆಮಾರಿ

ಉಪ್ಪಿನ ನೆಲದಲ್ಲಿ ಬೆಳೆದ ಗುಲಾಬಿ,
ಪುಷ್ಯರಾಗ, ಬೆಂಕಿಹೂ ನೀನೆಂದು
ನಾನು ನಿನ್ನನ್ನು ಪ್ರೀತಿಸುವುದಿಲ್ಲ,
ನಾನು ನಿನ್ನನ್ನು ಪ್ರೀತಿಸುತ್ತೇನೆ,
ನೆರಳು ಮತ್ತು ಆತ್ಮದ ನಡುವೆ ರಹಸ್ಯವಾಗಿ ಪ್ರೀತಿಸುವ ಗಾಢ ಸಂಗತಿಗಳ ಹಾಗೆ.
ನಾನು ನಿನ್ನ ಪ್ರೀತಿಸುತ್ತೇನೆ,
ಅರಳಿಸದಿದ್ದರೂ, ತನ್ನ ಹೂಗಳ ಬೆಳಕನ್ನು
ಬಚ್ಚಿಟ್ಟುಕೊಂಡ ಗಿಡದ ಹಾಗೆ,
ನಾನು ಋಣಿ,
ನನ್ನೊಳಗೆ ಬೆರೆತ
ನೆಲದಿಂದೇಳುವ ದಟ್ಟ ವಾಸನೆಯಂಥ
ನಿನ್ನ ಪ್ರೀತಿಗೆ.
ಹೇಗೆ ಅಥವಾ ಎಲ್ಲಿ ಅಥವಾ ಎಲ್ಲಿಂದ
ಎಂಬುದ ತಿಳಿಯದೇ ನಿನ್ನ ಪ್ರೀತಿಸುತ್ತೇನೆ,
ಸಮಸ್ಯೆ, ಗರ್ವಗಳಿಲ್ಲದೆ, ಸುಮ್ಮನೆ
ನಿನ್ನನ್ನು ಪ್ರೀತಿಸುತ್ತೇನೆ:
ನಾನು ನಿನ್ನನ್ನು ಹೀಗೇ ಪ್ರೀತಿಸುತ್ತೇನೆ
ಏಕೆಂದರೆ ನನಗೆ ಬೇರೆ ರೀತಿ ಗೊತ್ತಿಲ್ಲ.
ನಾನು ಅಥವಾ ನೀನು ಇಲ್ಲದ ಇದು
ತುಂಬಾ ಆಪ್ತ,
ನನ್ನ ಎದೆಯ ಮೇಲೆ ನಿನ್ನ ಕೈ,
ನನ್ನದೇ ಕೈ
ತುಂಬಾ ಆಪ್ತ,
ನಾನು ಮಲಗಿದ ಕ್ಷಣ, ನಿನ್ನ ಕಣ್ಣು ಮುಚ್ಚಿಕೊಳ್ಳುತ್ತವೆ.

‍ಲೇಖಕರು avadhi

14 February, 2013

5 Comments

  1. Kiran Shetty

    waw..nice

  2. D.Ravivarma

    ಹೇಗೆ ಅಥವಾ ಎಲ್ಲಿ ಅಥವಾ ಎಲ್ಲಿಂದ
    ಎಂಬುದ ತಿಳಿಯದೇ ನಿನ್ನ ಪ್ರೀತಿಸುತ್ತೇನೆ,
    ಸಮಸ್ಯೆ, ಗರ್ವಗಳಿಲ್ಲದೆ, ಸುಮ್ಮನೆ
    ನಿನ್ನನ್ನು ಪ್ರೀತಿಸುತ್ತೇನೆ:
    ನಾನು ನಿನ್ನನ್ನು ಹೀಗೇ ಪ್ರೀತಿಸುತ್ತೇನೆ
    ಏಕೆಂದರೆ ನನಗೆ ಬೇರೆ ರೀತಿ ಗೊತ್ತಿಲ್ಲ……manamuttuva…hosa baavukate huttuhaakuva kaavya…..nanage tumbaa istavaaytu….

  3. Jayalaxmi Patil

    ಮೊದಲ ಪ್ಯಾರಾ ಅಂತೂ ತುಂಬಾ ಚೆಂದ.
    ಚೆಂದದ ಅನುವಾದ.

  4. Prasad V Murthy

    ನೆರೂಡ ನನ್ನನ್ನು ಬಹಳವಾಗಿ ಕಾಡುವ ಕವಿ ತನ್ನ ಸೂಕ್ಷ್ಮ ದೃಷ್ಟಿಕೋನವುಳ್ಳ ಕವಿತೆಗಳ ಮೂಲಕ. ಅನುವಾದ ಕೂಡ ಚೆನ್ನಾಗಿದೆ.
    – ಪ್ರಸಾದ್.ಡಿ.ವಿ.

  5. ishwar H.B

    ಹೇಗೆ ಅಥವಾ ಎಲ್ಲಿ ಅಥವಾ ಎಲ್ಲಿಂದ
    ಎಂಬುದ ತಿಳಿಯದೇ ನಿನ್ನ ಪ್ರೀತಿಸುತ್ತೇನೆ,
    ಸಮಸ್ಯೆ, ಗರ್ವಗಳಿಲ್ಲದೆ, ಸುಮ್ಮನೆ
    ನಿನ್ನನ್ನು ಪ್ರೀತಿಸುತ್ತೇನೆ:
    ನಾನು ನಿನ್ನನ್ನು ಹೀಗೇ ಪ್ರೀತಿಸುತ್ತೇನೆ
    ಏಕೆಂದರೆ ನನಗೆ ಬೇರೆ ರೀತಿ ಗೊತ್ತಿಲ್ಲ.
    manavannu bighididhida kavana…..adbuta

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading