ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾನು ಮತ್ತು ನನ್ನ ಕ್ಯಾಡ ಫೈಲು…

ದತ್ತು ಕುಲಕರ್ಣಿ

ವರ್ಕ್ ಫ್ರಂ ಹೋಮ್ ನ
ಒಂದು ದಿನ
ನನ್ನ ಲ್ಯಾಪ್ ಟಾಪ್ ನಲ್ಲಿ
ಕ್ಯಾಡ ಫೈಲ್ ತೆಗೆದು ಕೆಲಸ ಶುರುವಿಟ್ಟುಕೊಂಡೆ
ಉದ್ದ ಅಗಲ ದಪ್ಪ ಅಳತೆ ಕೊಟ್ಟು
ಮಾಡೆಲ್ ಮಾಡಿದರೆ
ಅರೆ ಇದೇನಿದು.. ?
ನನ್ನದೆ ರೂಪ
ಮುಖ, ಮೂಗು, ಕಣ್ಣು
ಕಾಲು ಕೈ ಹಾಗೂ ಚರ್ಮದ ಬಣ್ಣ
ಥೇಟ್ ನನ್ನಂತೆ.
ಸ್ಕೆಲ್ ನ ಪ್ರಮಾಣ ಹತ್ತಕ್ಕೆ ಒಂದು ಇಳಿಸಿದರೆ
ಚಿಕ್ಕ ಟೊಣಪನ ಗಾತ್ರ
ಹಿಂಜಿ ಎಳೆದು ಪ್ರಮಾಣ ಒಂದಕ್ಕೆ ಹತ್ತು ಏರಿಸಿದರೆ
ಉದ್ದ ನರಪೇತಲನ ಚಿತ್ರ

ಇರಲಿ ಎಂದು ನನ್ನ ಫೈಲ್ ಮೇಲೆಯೆ
ವೈರಸ್ ಚೆಕ್ ಓಡಿಸಿದರೆ
ಕರೋನಾ ಬಂದಿರಬೇಕೆ. ?
ನೋಡು ನೋಡುತ್ತಿದ್ದಂತೆಯೆ
ಕಂಪುಟರ್ ತುಂಬಾ ಪಾಪ್ ಅಪ್ ಮೆಸೇಜುಗಳು
ನೀವು ಹೊರಗೆ ಹೋಗುವ ಹಾಗಿಲ್ಲ.
ಯಾರೊಂದಿಗೂ ಬೆರೆಯುವ ಹಾಗಿಲ್ಲ
ಒಂಟಿ ಫೋಲ್ಡರ್ ನ ಮೂಲೆಯಲ್ಲಿ
ಕುಳಿತುಕೊಳ್ಳಬೇಕು.
ಅರೆ ಇದೇನಾಗಿಹೋಯಿತು.
ಸಾವಿನ ಹೊಸ್ತಿಲಲ್ಲಿ ನಿಲ್ಲುವ ದೆಂದರೆ
ಇದೆ ಇರಬೇಕು
ಡಿಲೀಟ ಮಾಡಿದ ಫೈಲನ್ನು
ವಾಪಸ್ಸು ರಿಸ್ಟೋರ್ ಮಾಡಲಾಗುವಾದಿಲ್ಲ
ಪರಂಧಾಮದ ಸಂಚಾರ
ಏಕಮುಖ ಮಾತ್ರ
ಉದ್ದ ಅಗಲ ದಪ್ಪಗಳೆಂಬೊ ಅಳತೆಗಳು
ಸೊನ್ನೆಗಳಾಗಿ
ಮೂಲ ಕೇಂದ್ರ ಬಿಂದುವಿಗೆ ಮೋಕ್ಷ ಸಿಕ್ಕಂತಹ
ಅನುಭವ
ಅಬ್ಬಾ ಸಾಕು..
ಈಗ ಎಂಟಿ ವೈರಸ್ ನ್ನ
ಮಾಡೆಲ್ ಮೇಲೆ ಓಡಿಸಬೇಕು.
ಮೈ-ಮನಗಳು ಮತ್ತೆ ಗಟ್ಟಿಯಾಗಬೇಕು.

ವಿಚಿತ್ರ ಆದರೂ ಸತ್ಯ
ಅಷ್ಟರಲ್ಲಿ
ಲ್ಯಾಪ್ ಟಾಪ್ ಮೇಲಿನ ಮಾಡೆಲ್
ಅಲ್ಲಿಂದ ಜಿಗಿದು ಹೊರಬಂದು
ನನ್ನ ಸೇರಿಕೊಂಡಿತು
ಇದ್ದು ಇಲ್ಲದಂತಿರುವ ಎರಡು ಆಯಾಮಿನ
ಈ ಮಾಡೆಲ್ ಮಾಯೆಗೆ
ಶೂನ್ಯ ಸಂಪಾದನೆಯ ಭಯ
ಹಾಗೆ ನನಗೂ ಕೂಡ!

‍ಲೇಖಕರು Admin

3 March, 2022

1 Comment

  1. T S SHRAVANA KUMARI

    ಚೆನ್ನಾಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading