ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾನು ಮಗ್ಗದ ಲಾಳಿ…

ಮುರುಳಿ ಮೋಹನ್ ಕಾಟಿ


ನಾನು
ಮಗ್ಗದ ಲಾಳಿ
ಪ್ರತಿ ಏಟಿಗೂ
ಆ ಕೊನೆಯಿಂದ ಈ ಕೊನೆಗೆ
ಪ್ರತಿ ಬಾರಿ ನಾನೇ ನಾನಾಗೆ ನಿಂತಾಗ
ಮತ್ತೊಂದು ಏಟು ಕೊಡಲು
ಸಿದ್ದವಾಗಿರುತ್ತಾರೆ.
ನನ್ನ ಎರಡು ತುದಿಯ ಮೊನಚು
ಚೂಪುಗೊಳಿಸುತ್ತಲೇ ಹಳ್ಳ ಹಿಡಿಸುತ್ತಾರೆ
ಎಳೆಗಳ ಮೇಲಾಟದ ಮಧ್ಯೆ
ಓಡಾಡುವ, ಹಾರಾಡುವ ನಾನು
ಹೊರಗು ಹೊಗಲಾರೆ, ಒಳಗೂ ನುಗ್ಗಲಾರೆ
ನಾನು ಬಿಡಿಸುವ ಚಿತ್ತಾರದೊಳಗೆ
ಕಳೆಯುವೆ, ಕೊಳೆಯುವೆ, ಕಳೆದುಕೊಳ್ಳುವೆ
ಬಣ್ಣದ ಬದುಕ.

‍ಲೇಖಕರು G

25 May, 2013

1 Comment

  1. ಜಿ.ಎನ್ ನಾಗರಾಜ್

    ಸುಂದರ ಸೀರೆ ನೇಯುತ್ತಾ ನೇಯುತ್ತಾ ಬದುಕು ಸವೆಸುತ್ತಿರುವ ನೇಕಾರರ ಸಂಕಟಗಳು ನೇಕಾರ ಕಾಯಕದ ಉಪಮೆ ರೂಪಕಗಳಲ್ಲಿ ಚಂದ ಮೂಡಿದೆ. ಸಮಾಜ ನೀಡುವ ಪೆಟ್ಟುಗಳಿಗೆ ಹಣ್ಣಾಗುವ ಎಲ್ಲರ ಬದುಕಿನ ರೂಪಕವಾಗಿಯೂ ಕಾಣುತ್ತದೆ.
    ” ಉಂಕೆಯ ನಿಗುಚಿ ಸರಿಗೆಯ ಸಮಗೊಳಿಸಿ ಸಮಗಾಲನ್ನಿಟ್ಟು ಅಣಿಯೇಳ ಮೆಟ್ಟಿದ ” ” ಸೀರೆಯ ನೆಯ್ದವ ನಾನೋ ನೀನೋ ರಾಮನಾಥ ” ಎಂದ ಜೇಡರ ದಾಸಿಮಯ್ಯನ ನೆನಪು ಬರುತ್ತಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading