ನಾನು ಆಗಲೂ ಒಂಟಿ, ಈಗಲೂ ಒಂಟಿ…
ಪುಟಗಳ ಮಧ್ಯೆ ಇರುವ ನವಿಲುಗರಿಯಂತೆ, ಆಲದೆಲೆಯಂತೆ ಕ್ಷಣಕಾಲ ನೀ ಬಂದೆ….
ಪುಟ ತಿರುವಲು, ಉಳಿದದ್ದು one ಟೀ…
ನಾನು ಆಗಲೂ ಒಂಟಿ,ಈಗಲೂ ಒಂಟಿ…
ಅರವಿಂದ ಕುಪ್ಳೀಕರ್
ಒಮ್ಮೊಮ್ಮೆ ಹೀಗೆ.. ಆಗುವುದು
ಕೆಂಬೂತದ ಗೆಟಪ್ಪಿಗೆ
ನವಿಲೂ ಯಾಮಾರುವುದು😈
ಪಿ ಮಹಮದ್
ಕವಿತೆ ಬರೆಯಲು ಹೊರಟು
ಅಲೆಮಾರಿಯಾದೆ ನಾನು
ಜೀವಂತ ಪದಗಳ ಹೆಕ್ಕಿ ತಂದು
ರೆಕ್ಕೆ ಪುಕ್ಕ ಕಟ್ಟಿ
ಮನಸುಗಳ ಗೂಡಿಗೆ ಹಾರಿ ಬಿಟ್ಟು
ಚಂದವ ನೋಡುವೆ ನಾನು.
ಬಿದಲೋಟಿ ರಂಗನಾಥ್
ಕಂಡ ಕನಸಿಗೂ ಹಂಬಲಿಸುತ್ತದೆ ಮನ
ಕಾಣದ ಕಡಲಿಗಷ್ಟೇ ಅಲ್ಲ
ಮಳೆ ಬಂತೆಂದು ಕೊಡೆ ಹಿಡಿದರೆ
ಕಾಮನಬಿಲ್ಲು ಮೂಡಿದ್ದು ಕಾಣುವುದಿಲ್ಲ
ಮುಚ್ಚಿದ ಬಾಗಿಲ ತೆರೆಯದಿದ್ದರೆ
ಶತ್ರುಗಳಷ್ಟೇ ಅಲ್ಲ ಮಿತ್ರರೂ ಒಳಬರುವುದಿಲ್ಲ
ಚಟಕ್ಕೆ ಬಿದ್ದ ಮನ ರಚ್ಚೆ ಹಿಡಿದ ಮಗು
ಕಾಲ ಮರೆಸಿದ್ದನ್ನೂ ಮರೆಯಗೊಡುವುದಿಲ್ಲ
ನೋವಿಗೆ ಕಲ್ಲಾದ ಮನದಲ್ಲಿ
ನಗೆಯ ಹೂ ಕೂಡ ಅರಳುವುದಿಲ್ಲ
ಕಾವ್ಯಶ್ರೀ ಎಚ್





0 Comments