
ನಾಗೇಶ್ ಹೆಗಡೆ
ಖ್ಯಾತ ಅಂಕಣಕಾರರು / ವಿಜ್ಞಾನ ಬರಹಗಾರರು
ಫ್ಲೆಕ್ಸ್ ಕುಂಡದಲ್ಲಿ ಅರಳಿದ ಹೂಗಳು:
ಬೆಂಗಳೂರಿನಲ್ಲಿ ಫ್ಲೆಕ್ಸ್ ಭಿತ್ತಿಪತ್ರಗಳನ್ನು ಕೀಳುವ ಅಭಿಯಾನ ಸರಿಯಾಗಿ ಒಂದು ತಿಂಗಳ ಹಿಂದೆ ಆರಂಭವಾಯಿತು. ಆ ದಿನಗಳಲ್ಲಿ ನಗರದ ಹೊರವಲಯದಲ್ಲಿ ಎಲ್ಲೆಂದರಲ್ಲಿ ಅವುಗಳನ್ನು ರಾಶಿ ಹಾಕಿ ಸುಟ್ಟು ಕಮಟು ಹೊಗೆ ಹಾರುತ್ತಿತ್ತು.
ನಾನು ಮತ್ತು ಪತ್ನಿ ರೇಖಾ ಅಂಥ ಕೆಲವನ್ನು ತಂದು ತೊಳೆದು, ಕತ್ತರಿಸಿ ಹೊಲಿದು…ಈಗ ಅವು ನಮ್ಮ ಟೆರೇಸ್ ಮೇಲೆ ಹೂ ಅರಳಿಸಿ, ತಂಗಾಳಿಗೆ ತಲೆದೂಗುತ್ತ ನಿಂತಿವೆ.
ಈ ಚಿತ್ರಗಳನ್ನು ಇಂದು ಇಲ್ಲಿ ಪ್ರಕಟಿಸಲು ಕಾರಣ ಏನೆಂದರೆ ಇಡೀ ರಾಜ್ಯದಲ್ಲಿ ಫ್ಲೆಕ್ಸ್ ಕೀಳಿಸುವ ಬಗ್ಗೆ ನ್ಯಾಯಾಧೀಶರು ಮಾತಾಡಿದ್ದಾರೆ. ಅವನ್ನೆಲ್ಲ ಸುಡುವ ಬದಲು ಬೇರೆ ಯಾವ ಯಾವ ರೀತಿಯಲ್ಲಿ ಬದಲೀ ಬಳಕೆ ಮಾಡಬಹುದೆಂಬ ಬಗ್ಗೆ ಗೆಳೆಯರು ತಮ್ಮ ಸಲಹೆ ನೀಡಬಹುದೆ?










ಅದ್ಭುತ ಆಲೋಚನೆ. ಪ್ರಕೃತಿ ಮಿತ್ರರಾದಿರಿ. ಅಭಿನಂದನೆಗಳು
Sir can be sent to factories for recycling