ಈಟೀವಿ ಕನ್ನಡ ವಾಹಿನಿಯಲ್ಲಿ ವಾವ್ ! ಕಾರ್ಯಕ್ರಮದಲ್ಲಿ ವಿಶೇಷ ಅನ್ನಿಸಿದ್ದು ಹಾಸ್ಯ ಕಲಾವಿದರ ಹಾಗೆನ್ನುವುದಕ್ಕಿಂತ ಮನೋಲ್ಲಾಸ ಹೆಚ್ಚಿಸುವ ಕಲಾವಿದರ ಕಾರ್ಯಕ್ರಮ. ನಾಗರಾಜ ಕೋಟೆ, ಮಿಮಿಕ್ರಿ ಪ್ರೊಫೆಸರ್ ದಯಾನಂದ್ ಕಾರ್ಯಕ್ರಮ ವಾವ್ ಅನ್ನುವಂತೆ ಇತ್ತು. ಮುಖ್ಯವಾಗಿ ಸಾಮಾನ್ಯವಾಗಿ ನಾಗರಾಜ್ ಕೋಟೆ ಅವರ ಹಾಸ್ಯ ಹನಿಗವನ ನನಗೆ ತುಂಬಾನೆ ಇಷ್ಟ. ಅವರು ಎಫೆಮ್ ಒಂದರಲ್ಲಿ ಮಾಡುವ ಪಟೇಲನ ಜೋಕ್ ಸಿಕ್ಕಾಪಟ್ಟೆ ಖುಷಿ ಕೊಡುತ್ತದೆ. ಅಂತಹುದೇ ಹಾಸ್ಯದ ಖುಷಿ ಸಾಯಿ ಕುಮಾರ್ ಅವರ ಕಾರ್ಯಕ್ರಮದಲ್ಲಿ ಹಂಚಿದರು. ಕೋಟೆಯವರ ಮಾತಿನ ಶೈಲಿ ಕಂಡು ಸಾಯಿ ಎಮಿಟೇಮಿಟೊ ಎಂದು ಮೌನವಾಗಿ ಎಂಜಾಯ್ ಮಾಡಿದರು 🙂
ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..
ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]



0 Comments