ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನವಿರಾದ ನನ್ನ ರೋಮದಿಂದ ನೀವಿದ ಆನಂತರವು..

ಅವ್ವ

ತಮಿಳು ಮೂಲ : ಸುಕೀರ್ತರಾಣಿ

aranakatte manjunath

ಕನ್ನಡಕ್ಕೆ :ಆರನಕಟ್ಟೆರಂಗನಾಥ.

 

ಜೀವವೆ ಮೈದುಂಬಿದ
ಕೊರಳ ದನಿಯಲ್ಲಿ
ಅವ್ವನ ಕರೆವೆ

ಕೊಯ್ದ ಹೂವಿನಂತೆ
ಉಲ್ಲಾಸದಿ ಅರಳಿದ್ದ
ಕೆನ್ನೆಗಳ ಹಟವನ್ನು
ಕಾನುವಿನ ನಿನಾದದಂತೆ
ಮೌನದಿ ಕಾದುಕೊಂಡಿರುವ
ನಿನಗೆ
ರಕ್ತದ ಮುಡುವಿನಲ್ಲಿ ಕೊಸರಾಡುವ
ನನ್ನ ಮೊದಲ ಕವಿತೆಯನ್ನು
ಕಾಲಡಿಯಿರಿಸುವೆ

ಬಿರಿದು ರಕ್ತ ಒಸರುವ ಪಾದಗಳನ್ನು
ನವಿರಾದ ನನ್ನ ರೋಮದಿಂದ
ನೀವಿದ ಆನಂತರವು
ಮುದುಡಿಕೊಳ್ಳುವುದರ ಅರಿವಿದೆ
ನಾನು ಕಸವಾಗಿಸಿದ್ದ
ನಿನ್ನಂತರಂಗದ ಕನಸುಗಳನ್ನು
ನೀನು ಚಹಾ ತಯಾರಿಸುವುದು
ಫಲಹಾರಗಳನ್ನು ಸವಿಯುವುದು
ಅಂತೆಯೆ
ಬರವಣಿಗೆಯು ಕಾಯಕವಾಗಿದೆ

ಒಡಲಿಗೆ ಪೂಸಿರುವ ಮಕರಂಧಗಳ
ಜಾಡಿಸಿ ಬಿಸಾಡಿ ನಡೆವ ವಾಸ್ತವದೊಡನೆ
ಮಲೆಗಳಿಂದ ಆವರಿಸಿದ ಊರಿನೊಡನೆ
ನಿನ್ನನ್ನೂತೊರೆದು ನಡೆದಿರಲು
ಎಲ್ಲಿಯೋ
ನಿನ್ನದೆ ದನಿಯ ಹಕ್ಕಿಯೊಂದು ರೋಧಿಸುತ್ತಿದೆ.

‍ಲೇಖಕರು Admin

16 January, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading