ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎದೆಗೆ ಬಿದ್ದ ಅಕ್ಷರ, ಭೂಮಿಗೆ ಬಿದ್ದ ಬೀಜ

ಎದೆಗೆ ಬಿದ್ದ ಅಕ್ಷರ ಎಂದಿಗೂ ಫಲಕೊಡದೇ ಇರಲಾರದು…

ನಾಗರಾಜ ಹರಪನಹಳ್ಳಿ
ಅಂಕೋಲಾದ ಯುವಕ ಕೆ. ರಮೇಶ್.  ಈತ ‘ಸಂಗಾತಿ’ ಎಂಬ ರಂಗತಂಡ ಕಟ್ಟಿಕೊಂಡು ಅಂಕೋಲಾದ ಸಾಂಸ್ಕೃತಿಕ ವಲಯವನ್ನು ಜೀವಂತವಾಗಿಡಲು ಯತ್ನಿಸುತ್ತಿದ್ದಾನೆ. ಮನುಷ್ಯ ಪ್ರಜ್ಞೆಯನ್ನು ಪಿ.ಲಂಕೇಶ್ ಮೂಲಕ ಎಚ್ಚರವಾಗಿಡಲು ಕಳೆದ ಹದಿನೈದು ವರ್ಷಗಳಿಂದ ಪ್ರಯತ್ನಿಸುತ್ತಲೇ ಇದ್ದಾನೆ. ಮಾನವೀಯ ಚಟುವಟಿಕೆಗಳನ್ನು ಮುಂದುವರಿಸಿದ್ದಾನೆ.
ಅಂಕೋಲೆಯಲ್ಲಿ ಇತ್ತೀಚೆಗೆ ಬೇಂದ್ರೆ ನೃತ್ಯವೈಭವ ಕಾರ್ಯಕ್ರಮ ಏರ್ಪಡಿಸಿದ್ದ. ಬೇಂದ್ರೆಯನ್ನು, ಅವರ ಕವಿತೆಗಳನ್ನು ಮಕ್ಕಳ ಮನಸ್ಸಿಗೆ ಬಿತ್ತುವ ಪ್ರಯತ್ನ ಅದಾಗಿತ್ತು. ವೇದಿಕೆಯಲ್ಲಿ ನನ್ನ ಪ್ರೀತಿಯ ಕತೆಗಾರ ಡಾ.ರಾಮಕೃಷ್ಣ ಗುಂದಿ ಇದ್ದರು.
ಕನ್ನಡ ಸಾಹಿತ್ಯ ಜೀವಪರ ಪರಂಪರೆ ಬಲ್ಲ ಕುಮಟಾದ ಸಹಾಯಕ ಕಮಿಷನರ್ ಬಿ. ಶೋಭಾ , ವಿದ್ಯಾ ನಾರ್ವೇಕರ್ ಅವರ ಪುತ್ರ , ಹಿರಿಯ ನ್ಯಾಯವಾದಿ ಸುಭಾಷ್ ನಾರ್ವೇಕರ್ ಸಹ ಇದ್ದರು. ಅವರ ಜೊತೆ ವೇದಿಕೆ ಹಂಚಿಕೊಂಡ ಖುಷಿ ಸಹ ನನಗೆ ಇತ್ತು.
ಅಂದಹಾಗೆ ಕೆ. ರಮೇಶ್ ಪದವಿ ಕಲಿಯುವಾಗ ನನ್ನ ವಿದ್ಯಾರ್ಥಿ. ಸದಾಶಿವಗಡ ಪದವಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕನಾಗಿದ್ದಾಗ ಆತನಿಗೆ ಪಿ.ಲಂಕೇಶ ಅವರ ಗುಣಮುಖ ನಾಟಕ ಕಲಿಸುವ ಅವಕಾಶ ನನಗೆ ಬಂದಿತ್ತು. ಅಂದು ರಮೇಶ್ ಎದೆಯಲ್ಲಿ ನಾನು ಬಿತ್ತಿದ ಪಿ.ಲಂಕೇಶ್ ಅವರು ಇಂದು ಮರವಾಗಿ ಬೆಳೆದಿದ್ದಾರೆ.
ಎದೆಗೆ ಬಿದ್ದ ಅಕ್ಷರ, ಭೂಮಿಗೆ ಬಿದ್ದ ಬೀಜ ಎಂದೂ ವಿಫಲವಾಗುವುದಿಲ್ಲ ಅನ್ನುವುದು ಇದಕ್ಕೇ ಇರಬೇಕು.

‍ಲೇಖಕರು Admin

16 January, 2016

1 Comment

  1. ಟಿ.ಕೆ.ಗಂಗಾಧರ ಪತ್ತಾರ.

    ನನಗೆ ತುಂಬಾ ಇಷ್ಟವಾಗಿ ಮತ್ತೆ ಮತ್ತೇ ಓದಿಸಿಕೊಂಡ ಪುಸ್ತಕಗಳು
    1.ಚಂದ್ರಕಾಂತ ಒಡ್ಡು ಸಂಪಾದಿತ-“ಅಮ್ಮನ ನೆನಪು”
    2.ರಹಮತ್ ತರೀಕೆರೆಯವರ-“ನೇತು ಬಿದ್ದ ನವಿಲು”
    3.ರಹಮತ್ ತರೀಕೆರೆಯವರ-“ಅಮೀರಬಾಯಿ ಕರ್ನಾಟಕಿ”
    4.ಕುವೆಂಪುರವರ-“ಸಮಗ್ರ ಕಾವ್ಯ”
    5.ಕೆ.ವಿ.ಅಯ್ಯರ್ ರವರ-“ಶಾಂತಲಾ”
    6.ಮೃತ್ಯುಂಜಯ ರುಮಾಲೆರವರ-“ಲೋಕರಂತೆ ಬಾರರು”
    7.ಚೆನ್ನವೀರ ಕಣವಿಯವರ-“ಸುನೀತ ಸಂಪದ”
    8.ತ.ರಾ.ಸು.ರವರ-“ಹಂಸಗೀತೆ”
    9.ಅ.ನ.ಕೃ.ರವರ-“ಸಂಧ್ಯಾರಾಗ”
    10.ಎಂ.ಕೆ.ಇಂದಿರಾರವರ-“ಫಣಿಯಮ್ಮ”

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading