ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಮ್ಮ ಚಿತ್ರ – ನಿಮ್ಮ ಕವನ!

ಸೃಜನ್ ರವರ ಚಿತ್ರ ಕ್ಕೆ ಕವನ ನಾವು ಕೇಳಿದ್ದು , ಅದಕ್ಕೆ ಬ೦ದ ಪ್ರತಿಕ್ರಿಯೆ ನಾವು ಊಹಿಸದ್ದು!!

ಈ ಪ್ರಯತ್ನ ಹೊಸ ಕವನಗಳ ಜೊತೆ ಕೊಸ ಕವಿಗಳಿಗೂ ಸ್ಪೂರ್ತಿಯಾದರೆ ನಮ್ಮ ಪ್ರಯತ್ನ ಸಾರ್ಥಕ!

ಮೊದಲ ಕವನ ಇ೦ದು ನಿಮ್ಮ ಮು೦ದೆ, ಇನ್ನು ನೀವು೦ಟು, ಈ ರೇಖಾ ಕವನ ಉ೦ಟು!!

ನಿರೀಕ್ಷೆ

– ಸಾವಿತ್ರಿ.ವೆಂ.ಹಟ್ಟಿ(ಲಕ್ಕುಂಡಿ)

ಅವನು ದಾರಿಯ ತಿರುವಿನಲ್ಲಿ

ಸರಿದು ಹೋದ ನೆನಪು ಇನ್ನೂ

ಹಾಗೇ ಇದೆ, ಕತ್ತಲೆ ಉಳಿಸಿ

ಹೋದನೇ ಎಂದು ಕುಸಿದು

ಕುಳಿತವಳಿಗೆ ಕಾಣಿಸಿದ್ದು

ಕಾರ್ಮೋಡದೊಡಲಲ್ಲಿ ಬೆಳ್ಳಿ ಚಂದಿರ!

ಬಿರುಮುಡಿಯ ಬಿಟ್ಟು ನಿರೀಕ್ಷಿಸುತ್ತಿರುವುದು

ಬೆನ್ನು ತಿರುವಿ ಹೋದವನಿಗಲ್ಲ, ಆದರೆ

ಅವನೆ ಬಿತ್ತಿ ಹೋಗಿರುವ ಬೆಳಕ ಬೀಜ

ಚಿಗುರುವುದಕ್ಕಾಗಿ ನಿರೀಕ್ಷಿಸದೇ ಇರಲ್ಹೇಗೆ?!

ಆಸೆ, ಮಮತೆಯ ನೀರೆರೆದು

ಕಾಯುತ್ತಿದ್ದೇನೆ ಬಾಲ ಚಂದಿರಗಾಗಿ!!

]]>

‍ಲೇಖಕರು G

1 May, 2012

1 Comment

  1. ವಿಜಯ ಪ್ರತಾಪ ರಾಣಾ

    ಶ್ಲಾಘನೀಯ ಕಾರ್ಯ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading