ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಮ್ಮ ಕಾಲಕೆ ಎಲ್ಲ ಕಂಡಂತಾಯ್ತು..

ಕೊರೊನಾ ಯುಗ ಮಗ್ಗಲು ಬದಲಿಸಿತು..

ಡಾ. ಪ್ರಕಾಶ ಗ ಖಾಡೆ

ಪುರಾತನ ಪಳೆಯುಳಿಕೆಗಳು
ಜೀವ ಪಡೆಯುತ್ತಿವೆ
ಹಸಿಮಣ್ಣು ಒಣಗಿದರೂ
ಹಸಿರ ಚಿಗುರು ಏಳುತ್ತಿವೆ.

ಗೊತ್ತಿಲ್ಲ,
ಅಜ್ಜ ಇವತ್ತೇ ಕನಸಿಗೆ ಬಂದು
ಪಟ್ಟಾಂಗ ಕುಳಿತಿದ್ದಾನೆ.

ಅಂಗಳ ರಂಗೋಲಿ
ಬಿಡಿಸುವ ಅಜ್ಜಿ
ಅದೆಂಥೊ ಚೆಂದಾನ ಚೆಲುವೆ.

ಆಡಿ ಬಿಸಾಡಿ ಮುರಿದಿಟ್ಟ
ಬಾಲ್ಯದ ಆಟಿಕೆಗಳು
ಈಗಷ್ಟೇ ಹೊಸದಾಗಿ ತಂದಂತಿವೆ.

ಬತ್ತಿದ ಕೆರೆ ಹಳ್ಳ ಬಾವಿಗಳು
ತಿಳಿ ನೀರ ತುಂಬಿ
ಬಣ್ಣ ಬಣ್ಣದ ಮೀನುಗಳು ಈಜಾಡಿದಂತಿದೆ

ದಾರಿ ಬದಿಗೆ
ಬಿದ್ದ ಕೊರಡು ಜೀವ ಪಡೆದು
ಹಸಿರ ಹೊದ್ದಿದೆ.

ಹಾಡ ಕಟ್ಟಿ ಬೆಳಗು ಹರಿಸುವ
ಜನಪದರು ಗೆಜ್ಜೆ ಕಟ್ಟಿ
ಕುಣಿಯುತ್ತಿದ್ದಾರೆ.

ಕಾಣದ ಕೊರವಂಜಿ
ಕರಡಿ ಕುಣಿತ,ಗರದಿ ಗಮ್ಮತ್ತು
ಬಹುರೂಪಿಗಳು ,ಕುಣಿದು ಕುಪ್ಪಳಿಸಿ
ಬಣ್ಣದ ಕನಸುಗಳ ಹರಿಬಿಟ್ಟಿದ್ದಾರೆ.

ಶುಭ್ರ ಆಗಸದಲ್ಲಿ
ಕಾಣದ ಚುಕ್ಕೆ,ನಕ್ಷತ್ರಗಳು
ಕಣ್ಣ ಹೊಳಪಿಗೆ ಸಾಕ್ಷಿಯಾಗಿವೆ.

ಗುಡ್ಡೆ ಬಿದ್ದ ಆಧುನಿಕ ಕಸ
ತೊಳೆದಂತೆ ಎಲ್ಲ,
ಗುರುತಿಗೆ ಉಳಿದಿಲ್ಲ.

ನಮ್ಮ ಕಾಲಕೆ ಎಲ್ಲ ಕಂಡಂತಾಯ್ತು
ಕೊರೊನಾ ಯುಗ ಮಗ್ಗಲು ಬದಲಿಸಿತು.

‍ಲೇಖಕರು avadhi

27 April, 2020

3 Comments

  1. Sharada

    Super lines

  2. H m Ankalaiah

    Super

  3. Mantheshakumar. B.N.

    Really superb poetry sir

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading