ಗೊಲ್ಲಹಳ್ಳಿ ಪ್ರಭಾಕರ್
ನಾವೆಲ್ಲ “ಒಂದೇ?” ಎನ್ನುವ ನಿಮ್ಮ ಕೂಗು
ಹೊರಗಿರುವ ನಮ್ಮ ಕೇರಿಗೆ ಕೇಳಿಸದು ಹೋಗು
ನಿಮ್ಮ ದೇವರ ಮಹಿಮೆ ಸಂಪ್ರದಾಯಗಳ ಸುಳಿಯಲ್ಲಿ
ನಿಮ್ಮವರಾದ ನಮಗೆ ಜಗವಿಲ್ಲದಿರುವ ದೇಗುಲಗಳಲ್ಲಿ
ನಮ್ಮ ನೋವಿನ ಹಾಡು, ಕ್ರಾಂತಿಯ ಜಾಡು
ನಿಮ್ಮ “ಒಂದೇ?” ಕೂಗಿನಲ್ಲಿಲ್ಲ ನೋಡು…
ಹೊರಗಿನವರಿಂದ ದೇಶ ರಕ್ಷಣೆಗೆ
ಅದೆಂತಹದ್ದೋ ತಾಂತ್ರಿಕತೆಯ
ಹುಡುಕಾಟ
ದೇಶದೊಳಗೆ ಇದ್ದೇವೆ ನಾವು,
ನಮ್ಮ ಹಕ್ಕಿಗಾಗಿ ನೂರಾರು ವರ್ಷಗಳಿಂದ
ಹುಡುಕಾಟ, ತಡಕಾಟ..
ನಾವೇನು ನೀವಲ್ಲ ಎರೆಡೆರಡು
ಮುಖ ನಮಗಿಲ್ಲ
ನಮ್ಮ ಮಾತಿನಲ್ಲಿ ಹುಟ್ಟಿತು ಒರಟುತನ
ಕಾರಣ
ನಿಮ್ಮ ಅವಮಾನವೀಯ
ನಡೆಯ ಜಾಣತನ..
0 Comments