ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನನ್ನ ಮನಸ್ಸನ್ನು ತಟ್ಟಿತು..

r g halli nagaraj

ಆರ್ ಜಿ ಹಳ್ಳಿ ನಾಗರಾಜ್ 

‪#‎ಹೊಸ‬ ಓದಿಗೊಂದು ಸೃಜನೇತರ ಕೃತಿ

*ಕುವೆಂಪು ವಿವಿಯಲ್ಲಿ ಪ್ರಾಧ್ಯಾಪಕನಾಗಿರುವ ಗೆಳೆಯ ಡಾ. ಕೇಶವಶರ್ಮ ಕೆ, ಗಂಭೀರ ಚಿಂತನೆಯ ವಿಮರ್ಶಕ. ಈಚೆಗೆ ಅವನದ್ದೊಂದು ಅಧ್ಯಯನಪೂರ್ಣ ಸೃಜನೇತರ ಚಿಂತನೆಯ ಕೃತಿ “ಮಾರ್ಕ್ಸ್ ವಾದಿ ಮೀಮಾಂಸೆ” ಹೊರಬಂದಿದೆ. “ಮಾರ್ಕ್ಸ್ ವಾದವೆಂದರೆ ಬೇಕಾಬಿಟ್ಟಿಯಾಗಿ ಬಳಸಬಹುದಾದ ಒಂದು keshava sharma book1ಅರಾಜಕ ಸಿದ್ಧಾಂತವಲ್ಲ. ಈ ವಾದದ ತಿಳುವಳಿಕೆಯನ್ನು ತಿರುಚುವುದೂ ಕೂಡ ಅಪಾಯಕಾರಿಯೇ ಆಗಿದೆ” ಎಂದು ತನ್ನ ಮುನ್ನುಡಿ ರೂಪದ ಬರಹದಲ್ಲಿ ದಾಖಲಿಸಿದ್ದಾನೆ. ಸಾಹಿತ್ಯ ಹಾಗೂ ಸಾಹಿತ್ಯೇತರ ವಿದ್ಯಾರ್ಥಿಗಳು, ಓದುಗರು ಈ ಕೃತಿಯನ್ನು ಅಧ್ಯಯನ ಮಾಡಬೇಕು. ಇದರಲ್ಲಿ ಮಾರ್ಕ್ಸ್ ವಾದದ ನಿಲುವುಗಳ ನೋಟವಿದೆ.

“ಇದನ್ನು ಬರೆಯಲು ಏಕಾಂತ ಸಿಕ್ಕಿತು. ಬರೆಯುವುದರ ಮೂಲಕವೇ ಸಾಮಾಜಿಕ ಸಂಬಂಧ ಸ್ಥಾಪಿಸಿಕೊಂಡೆ. ಬರೆಯುವುದು ಎಂದರೆ ಖಾಲಿ ಜಾಗವನ್ನು ಭರ್ತಿಮಾಡಿಕೊಳ್ಳುವುದು…… ನನಗೆ ಇದುವೇ ಬಾಗಿಲು. ಇದು ಬಿಟ್ಟರೆ ಬೇರೆ ದಾರಿ ಇಲ್ಲ….” ಎಂದಿರುವ ಕೇಶವಶರ್ಮನ ಮಾತು ನನ್ನ ಮನಸ್ಸನ್ನು ತಟ್ಟಿತು. ನಿಜ, ನಮ್ಮ ಓದಿನ ಜ್ಞಾನ ಕ್ಷಿತಿಜದ ಕಕ್ಷೆ ಹಿಗ್ಗಿದರೆ ಮಾತ್ರ ಇಂಥ ಕೃತಿಯ ಚಿಂನೆಗಳೂ ಮನದೊಳಗೆ ನಾಟಲು ಸಾಧ್ಯ.

ಗೆಳೆಯ ಕೇಶವಶರ್ಮ ಕೆ, ಈ ಬೃಹತ್ ಕೃತಿ ಕಳುಹಿಸಿಕೊಟ್ಟು, ನಾಲ್ಕಾರು ದಿನ ನಿದ್ರೆ ಕಿತ್ತುಕೊಂಡು ಓದುವಂತೆ ಪ್ರೇರಣೆ ನೀಡಿದ್ದಕ್ಕೆ ಧನ್ಯವಾದ.

* ಈ ಹಿಂದೆ ನಮ್ಮ ಅನ್ವೇಷಣೆ ಪ್ರಕಾಶನದಿಂದ ಈ ಗೆಳೆಯನ “ಕ್ರಿಯೆ ಪ್ರತಿಕ್ರಿಯೆ”, “ಸ್ತ್ರೀವಾದಿ ವಿಮರ್ಶೆ ” ಎಂಬ ಕೃತಿಗಳನ್ನು ಪ್ರಕಟಿಸಿದ ಹೆಮ್ಮೆಯಿದೆ.

* ಪುಟ 556, ಬೆಲೆ ರೂ. 300/- ಪ್ರಕಾಶಕರು: ಗೀತಾಂಜಲಿ ಪುಸ್ತಕ ಪ್ರಕಾಶನ, ಶಿವಮೊಗ್ಗ 577 204.
* ಡಾ. ಕೇಶವಶರ್ಮ ಸಂಪರ್ಕ : 94487 30611.

‍ಲೇಖಕರು Admin

4 May, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading