ಮಾಧ್ಯಮ ಜಗತ್ತಿನಲ್ಲಿ ಈಗ ಹೊಸ ಚಡಪಡಿಕೆ ಆರಂಭವಾಗಿದೆ..

ಜಿ ಎನ್ ಮೋಹನ್ 

jugaricross.com

ಜಿ ಆರ್’ ಎಂದೇ ನಮಗೆಲ್ಲಾ ಪರಿಚಿತರಾಗಿರುವವರು ಡಾ ಜಿ ರಾಮಕೃಷ್ಣ.  ಜಿ ರಾಮಕೃಷ್ಣ ಅವರು ಅಧ್ಯಾಪನ, ಜನಪರ ಚಳವಳಿಯಲ್ಲಿ ಇದ್ದದ್ದು ಬಹುತೇಕ ಎಲ್ಲರಿಗೂ ಗೊತ್ತಿರುವ ವಿಷಯ. ಅವರ ಅಧ್ಯಯನದ ಆಸಕ್ತಿಯ ಹರಹು ಎಷ್ಟು ದೊಡ್ದದಿತ್ತೆಂದರೆ ಅವರು ಅನೇಕ ವಿಷಯಗಳ ಬಗ್ಗೆ ಆಳವಾಗಿ ಚರ್ಚಿಸಬಲ್ಲವರಾಗಿದ್ದರು. ಇದು ನನ್ನ ಅರಿವಿಗೆ ಬಂದದ್ದು ಜಿ ಆರ್ ಅವರು ಸ್ವಾತಂತ್ರ್ಯದ ಸುವರ್ಣ ಮಹೋತ್ಸವದ ಅಂಗವಾಗಿ ರೂಪಿಸಿದ ಮಾಲೆಯ ಪುಸ್ತಕಗಳಿಗೆ ಬರೆಯುತ್ತಿದ್ದ ಕಣ್ಣೋಟ ಲೇಖನಗಳಲ್ಲಿ.

GRಮಾಧ್ಯಮದ ಬಗ್ಗೆಯೂ ಸಾಕಷ್ಟು ಖಚಿತ ನೋಟ ಅವರಿಗಿತ್ತು ಎನ್ನುವುದು ನನಗೆ ಅವರ ಬಗೆಗಿನ ಗೌರವ ಇನ್ನಷ್ಟು ಹೆಚ್ಚಾಗಲು ಕಾರಣವಾಯಿತು. ಏಕೆಂದರೆ ಮಾಧ್ಯಮ ಎನ್ನುವುದು ಏನು ಎನ್ನುವುದು ಮಾಧ್ಯಮದ ಒಳಗಿರುವವರಿಗೂ ಅಪರಿಚಿತ. ಜಿ ಆರ್ ಅವರು ಪ್ರಧಾನ ಸಂಪಾದಕರಾಗಿದ್ದ ಮಾಲಿಕೆಗೆ ನಾನು ೫೦ ವರ್ಷಗಳ ಮಾಧ್ಯಮ ಬೆಳವಣಿಗೆಯನ್ನು ಗುರುತಿಸುವ ಹೊಣೆ ಹೊತ್ತುಕೊಂಡೆ. ‘ಮಾಧ್ಯಮ ಮತ್ತು ಸ್ವಾತಂತ್ರ್ಯ‘ ಕೃತಿಗೆ ಜಿ ಆರ್ ಅವರು ಬರೆದ ನಾಂದಿ ಮಾತುಗಳು ಈಗಲೂ ಅವರ ಓದಿನ ಮಹತ್ವವನ್ನು ಸಾರುತ್ತದೆ.

sangati GRಜಿ ಆರ್ ನವಕರ್ನಾಟಕ ಪ್ರಕಾಶನ ಹೊರ ತರುತ್ತಿರುವ ‘ಹೊಸತು ಮಾಸಿಕ ಪತ್ರಿಕೆಯ ಗೌರವ ಸಂಪಾದಕರೂ ಹೌದು. ನಾನು ಮಂಗಳೂರಿನಲ್ಲಿ ಪ್ರಜಾವಾಣಿಯ ವರದಿಗಾರನಾಗಿದ್ದಾಗ ‘ಹೊಸತು’ ಪತ್ರಿಕೆಯ ವಾರ್ಷಿಕೋತ್ಸವವನ್ನು ಅಲ್ಲಿ ಹಮ್ಮಿಕೊಳ್ಳಲಾಯಿತು. ಜಿ ಆರ್ ಮಾಡಿದ ಭಾಷಣ ನನ್ನನ್ನು ಇನ್ನಷ್ಟು ಮಾಧ್ಯಮದ ಬಗ್ಗೆ ಯೋಚಿಸಲು ಕಾರಣವಾಯಿತು. ಆ ವೇಳೆಗಾಗಲೇ ಮಾಧ್ಯಮದ ಸೂತ್ರಗಳು ಬದಲಾಗಬೇಕಾದ ಅನಿವಾರ್ಯತೆಯನ್ನು ಮನಗಾಣುತ್ತಿದ್ದ ನಾನು ಜಿ ಆರ್ ಮಾತಿನಿಂದ ಪ್ರೇರಿತನಾಗಿ ಬರೆದ ಟಿಪ್ಪಣಿ ಇಲ್ಲಿದೆ.

ಈ ಬರಹ ಜಿ ಆರ್ ರಾಮಕೃಷ್ಣ ಅವರಿಗೆ ಅರ್ಪಿಸಿದ ಗೌರವ ಗ್ರಂಥ ಸಂಗಾತಿಯಲ್ಲಿ ಪ್ರಕಟವಾಗಿದೆ

ಲೇಖನ ಓದಲು ಇಲ್ಲಿ ಕ್ಲಿಕ್ಕಿಸಿ- jugaricross.com

‍ಲೇಖಕರು Admin

May 3, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Shama, Nandibetta

    “ಓದುತ್ತಿರುವ ಸುದ್ದಿಗೂ, ಓದಬೇಕಾಗಿದ್ದ ಸುದ್ದಿಗೂ ವಿಪರೀತ ಅಂತರ.”

    “ಪ್ರಶ್ನೆಗಳನ್ನು ತಾನೇ ಒಡ್ಡಿಕೊಳ್ಳುತ್ತಾ, ಬರೆಯುತ್ತಾ ಹೋದಂತೆ ದಾರಿಗಳು ಸ್ಪಷ್ಟವಾಗಲಿವೆ. ಕತ್ತಲಿನ ಕೋಣೆಯಿಂದ ಬೆಳಕಿಗೆ ದಾರಿಗಳು ಹುಟ್ಟಿಕೊಳ್ಳಲಿವೆ.”

    ಹೊಸ ಹೊಳಹಿನ ಮಾಧ್ಯಮ ಹೀಗೆ ಉದಯವಾದರೆ ಎಂಬ ಯೋಚನೆಯೇ ವಿಸ್ಮಯ ತರುತ್ತದೆ. ಪ್ರತಿ ಸಲ ಓದಿದಾಗಲೂ ಅಬ್ಬಾ ಅನಿಸೋದು ಬರಹದ ಹಿಂದಿನ ಆಗಾಧ ಓದಿನ ಹರಹು, ವಿಸ್ತಾರದ ಬಗ್ಗೆ !!! ತುಂಬ ಶ್ರದ್ಧೆಯಿಂದ ಅಕ್ಷರ ಮೋಹಿಸಿ ಓದಿದವರು ಮಾತ್ರ ಹೀಗೆ interlink ಮಾಡಿ ಬರೆಯಲು ಸಾಧ್ಯ. Thank you sir.

    ಮಾಧ್ಯಮ ಜಗತ್ತಿನಲ್ಲಿ ಈಗ ಹೊಸ ಚಡಪಡಿಕೆ ಮಾತ್ರವಲ್ಲ ಬೆರಗು ಬೆಳಕು ಎರಡೂ ಆಗಬಹದಾದ್ದು !!! ಆಗಬೇಕು ಕೂಡ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: