ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನನ್ನ ಪ್ರೀತಿಯನ್ನು ನಾನೇ ಹೊತ್ತು ತಿರುಗುತ್ತಿದ್ದೇನೆ..

ಪ್ರೀತಿ ದೇವರು…

ದೀಪ್ತಿ ಭದ್ರಾವತಿ

ಯಾರಿಗೂ ಬೇಡದ ನನ್ನ ಪ್ರೀತಿಯನ್ನು
ನಾನೇ ಹೊತ್ತು ತಿರುಗುತ್ತಿದ್ದೇನೆ…
ಮಣ ಭಾರ, ಋಣ ಭಾರ
ಸುತ್ತಿಕೊಂಡ ಕಾಂಕ್ರೀಟಿನ ಕನಸು
ಬೆನ್ನ ಮೂಳೆಯ ಕಣ್ಣ ನೂಲನು
ಚುಚ್ಚಿ ನೋಯಿಸುತಿದೆ.

love picklesಥತ್! ಯಾರಿಗೆ ಬೇಕಿತ್ತು
ಪ್ರೀತಿಸುವ ಉಪರಾಟೆ
ಮುಚ್ಚಿದ ಬಾಗಿಲ ಎದುರು
ದೀಪ ಹಚ್ಚಿಡುವ ಗಮಟು ಖಯಾಲು?

ಎತ್ತಿ ಬಿಸುಡಬೇಕೆಂದುಕೊಳ್ಳುತ್ತೇನೆ…
ಕಳವಳದ ಮಗುವೊಂದು ಏರಿದ
ಜ್ವರದ ತಾಪಕ್ಕೆ ಬೆವರಿ ಕಿಟಾರನೆ
ಕಿರುಚುತ್ತದೆ.

ಹೊತ್ತು ನಡೆಯುತ್ತೇನೆ…
ಹೊರಲಾರದ ಪರಿತಾಪದಲ್ಲಿ
ಅರಸಿದ ಜಾಡಿನ ತಿರುವುಗಳು
ನಿರ್ಲಿಪ್ತ ಬಳ್ಳಿಗಳಿಗೆ ಕಾಲ ತೊಡರಿಕೊಳ್ಳುತ್ತ
ಜೋಲಿ ಹೊಡೆಯುತ್ತವೆ.

ಮತ್ತೆ ಮತ್ತೆ ಮುಗ್ಗರಿಸುತ್ತೇನೆ…
ನನ್ನ ರಗಳೆಗಳ ನೋಡಿದ
ತಿಳಿದವರು ಹೇಳುತ್ತಾರೆ
ಥೂ ಬುದ್ಧಿಗೇಡಿ.

ಪ್ರೀತಿ ದೇವರು ಹೊತ್ತು ನಡೆ
ಸವೆಯುವುದು ದಾರಿ ಮಾತ್ರ
ಹಂಚಿಸವೆ.
ನನಗೋ ಏನೂ ಮನಸ್ಸಿಲ್ಲ
ಆದರೂ ಹೆಗಲಿಗೇರಿಸಿ ಅಲೆಯುತ್ತಿದ್ದೇನೆ
ಬಯಸದ ಬಸಿರಿನ
ಅನಾಥ ತಾಯಿಯಂತೆ
ದೇವರ ಹೆಣದೊಂದಿಗೆ ಆಗೀಗ
ಮಾತನಾಡುತ್ತ.

‍ಲೇಖಕರು Admin

14 September, 2016

1 Comment

  1. 'ಶ್ರೀ' ತಲಗೇರಿ

    ತುಂಬಾನೇ ವಿಷಯಗಳನ್ನು ಹುದುಗಿಸಿಕೊಂಡ ಕವಿತೆ ಜೀ 🙂 ಬಹಳ ಚೆನ್ನಾಗಿದೆ 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading