ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ ನಗುವಿನ ಮುಖವಾಡ ಹೊತ್ತ ನೋವಿನ ಹೂವುಗಳಿಗೆ…’ – ರಶ್ಮಿ ಕಾಸರಗೋಡು ಕವಿತೆ

ಕಾಲ ಕವಿತೆ

ರಶ್ಮಿ ಕಾಸರಗೋಡು

ಕೆಂಡದ ಮೇಲೆ ನಡೆದ ಕವಿಯೊಬ್ಬನ
ಕವಿತೆಗಳಲಿ ಬೆಂಕಿಯಂಥಾ ಸಾಲುಗಳು
ಮನಸಿನ ಹೂದೋಟದಲ್ಲಿ
ನಗುವಿನ ಮುಖವಾಡ ಹೊತ್ತ
ನೋವಿನ ಹೂವುಗಳಿಗೆ
ರಕುತದ ಬಣ್ಣವಿದೆ
 
ನೆತ್ತಿಯಲ್ಲಿ ಧಗಧಗಿಸುವ
ಸೂರ್ಯ, ಬೆವತು ಸೋತು ಹೋದ
ಪದಗಳನ್ನು ಹೆಕ್ಕಿ
ಕುಲುಮೆಯಲ್ಲಿಟ್ಟು ಮತ್ತೊಮ್ಮೆ ಕಾಯಿಸಿ
ಬಡಿದು ಹದ ಬರಿಸಿದ

ಕಾಲ ಚಕ್ರದ ಚರಕದಲ್ಲಿ
ಸುತ್ತುತ್ತಿವೆ ಜೀವನದ
ದಾರಗಳು ಸಿಕ್ಕು ಸಿಕ್ಕಾಗಿ
ಸಮುದ್ರದ ನೀರಿಗಿಂತಲೂ
ಉಪ್ಪುಪ್ಪಿನ ಕಣ್ಣೀರು
ಮೂಕ ವೇದನೆಯ ಸುಳಿಯಲ್ಲಿ
ಸಿಲುಕಿ ಅಲೆಯೆಬ್ಬಿಸಿವೆ
 
ಎಂದೋ ಬಿತ್ತಿದ ಕವಿತೆಯ ಬೀಜವೊಂದು
ಈಗ ಮೊಳಕೆಯೊಡೆದಿದೆ
ಅವಮಾನದ ನೋವು, ತುಳಿತದ ಬೇನೆಗೆ
ಬಾಗಿದ ಬೆನ್ನು ಹೊಸ ಸೃಷ್ಟಿಯ
ಕಂಡು ತಲೆಯೆತ್ತಿ ನೋಡಿದಾಗ
ನಿರೀಕ್ಷೆಯ ಗಿಡದ ಬುಡಕ್ಕೆ
ಯಜಮಾನನ ನಾಯಿ ಕಾಲೆತ್ತಿ
ಉಚ್ಚೆ ಹೊಯ್ದು ಓಡಿತು.
 
-ರಶ್ಮಿ ಕಾಸರಗೋಡು
 
 

‍ಲೇಖಕರು G

8 November, 2013

4 Comments

  1. nagraj.harapanahalli

    ನೆತ್ತಿಯಲ್ಲಿ ಧಗಧಗಿಸುವ
    ಸೂರ್ಯ, ಬೆವತು ಸೋತು ಹೋದ
    ಪದಗಳನ್ನು ಹೆಕ್ಕಿ
    – ಈ ಸಾಲುಗಳು ಇಷ್ಟವಾದವು .

  2. mmshaik

    good one..

  3. na.. damora shetty

    yajamaanana naayi kaaletti uchche hoydite?
    abba!

  4. nageshgubbi

    teevra samveedaneya anubhaava geeteyantide. antaryadolage ayktha noovide. padya chanaagide. olitaagali.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading