ಸರೋಜಿನಿ ಪಡಸಲಗಿ
ಯಾಕೆ ಈ ನೋವು ನಿಟ್ಟುಸಿರು ಗೆಳೆಯಾ
ಧ್ವನಿಸೀತು ಆ ನೋವು ಅವಳ ಮನದಂಗಳದಿ ಗೆಳೆಯಾ
ಅವಳ ನಗುವಿನ ರಿಂಗಣ ನಿನ್ನ
ಭಾವಲೋಕದಲ್ಲಿ
ಅವಳ ಕನಸು ನಿನ್ನ ತುಂಬಿ ನಿಂದ
ಕಂಗಳಲ್ಲಿ
ಈ ಬಾಳೇ ಒಂದು ಕನಸು ಎಂದಾಗ
ಅದಕೆಲ್ಲಿ ಇಹುದು ಕೊನೆ ಅದು
ಅನವರತವಯ್ಯಾ
ಅವಳಿಗಿಡಲ್ಲ ಮೊರೆ ಕರೆಯಲ್ಲ ಅವಳ
ಎಂಬೆ ನೀನು
ಸುಮ್ಮನಿರಬಲ್ಲಳವಳು ಅಂದು ಕೊಂಬೆಯಾ
ನೀನು
ನಿನ್ನ ದುಃಖ ನಿನ್ನ ನಗು ಅವಳೆದೆಯ
ಗುಂಜನವೊ
ನಾ ಹೇಗೆ ಅದ ಹೇಳಲಿ ಹೇಗೆ ತಿಳಿಸಲಿ
ನೀ ಹೇಳಲಾರೆಯಾ
ಬೇಡ ಈ ಅಳಲು ಬೇಡ ಬಿಸಿಯುಸಿರು
ಅವಳಿಹಳು ನಿನ್ನ ನೆನಪಿನ ಹಂದರದಿ
ಹೂವಾಗಿ
ನಿನ್ನೆದೆಯ ಬಾಂದಳದ ಬೆಳ್ಳಿ ತಾರಕೆಯಾಗಿ
ಮನದುಂಬಿ ನಂಬಿದನ ನಿನ್ನೊಲವು
ಅವಳು
ಅಳು ನುಂಗಿ ನಗು ಒಮ್ಮೆ .ನಕ್ಕಾಳು
ಅವಳಲ್ಲಿ
ಆ ನಗು ತಾನ ಹುಟ್ಟಿಸೀತು ಪ್ರತಿ ಗಳಿಗೆ
ಯಲೆಯಲ್ಲಿ
ಜೀವರಾಗ ಝೇಂಕರೀಸೀತು ನಿನ್ನ ಹೃದಯ
ವೀಣೆಯಲ್ಲಿ
ನಾನೇ ಭಾಗ್ಯವಂತೆ ಅಂದಾಳು ಆಗ
ಅವಳಲ್ಲಿ





ಮನ ಮುಟ್ಟುವ ಭಾವಗಳನ್ನು ಅಭಿವ್ಯಕ್ತಿ ಮಾಡಿದ ಕವನ. ನೋವು-ನಗು ಎರಡನ್ನೂ ಅರಿತವರಷ್ಟೇ ಬರೆಯಬಲ್ಲರು ಇಂಥ ಕವಿತೆಯನ್ನ! ಧನ್ಯವಾದಗಳು.
ಧನ್ಯವಾದಗಳು ಶ್ರೀವತ್ಸ ದೇಸಾಯಿಯವರೇ. ಕವನ ಮನ ಮುಟ್ಟಿತು ಅಂದಾಗ ಕವಿ ಹೃದಯ ತುಂಬಿ ಬರುತ್ತದೆ.ನಿಜ ನೋವು ನಲಿವು ಬಾಳಿನ ಎರಡು ಮುಖ ತಾನೆ? ನೋವಿಗೇ ಭಾವನೆಗಳ ಉಬ್ಬರ ಜಾಸ್ತಿ ಅನ್ಸುತ್ತೆ.