ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಂದಿನಿ ಹೆದ್ದುರ್ಗ ಹೊಸ ಕವಿತೆ – ಹೃದಯಾದಾಕಾರದ ಪುಟ್ಟ ಮುಗಿಲು…

ನಂದಿನಿ ಹೆದ್ದುರ್ಗ

ಕತ್ತರಿಸಿಟ್ಟ
ಆಕಾಶದ
ತುಣುಕು ನೀನು
ನಿಟ್ಟುಸಿರಿಟ್ಟರೆ
ದಟ್ಟೈಸುತ್ತದೆ ಅಲ್ಲಿ
ಹೃದಯಾದಾಕಾರದ
ಪುಟ್ಟ
ಮುಗಿಲು

ಬಿಕ್ಕಿದಾಗೆಲ್ಲ
ಕೈಬಟ್ಟಲೊಡ್ಡಿ
ಇದು ಕಡಲೆನ್ನುವ
ನಿನ್ನ ಹುಚ್ಚು ಮೋಹಕ್ಕೆ
ಬೆಳಗುವ ನನ್ನ
ಈ ಲೋಕ
ಅಚ್ಚರಿಯಲ್ಲಿ
ನೋಡುತ್ತಿದೆ

ನಿನ್ನ ಬಿಡಿಬಿಡಿ
ಮುತ್ತುಗಳ
ನಡುವೆ
ಸಂಪಿಗೆ
ಎಸಳಿಟ್ಟು ಕಟ್ಟಿ
ತುರುಬಿಗೆ ಸುತ್ತಿದ್ದೇನೆ

ಗೊತ್ತೇ ನಿನಗೆ?

ಬೆರಗು ಮತ್ತು
ಬೆಳಕು
ಈ ಹಗಲನ್ನು
ಮಧುರವಾಗಿಸಿದೆ

‍ಲೇಖಕರು Admin

5 July, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading