ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಧ್ವನಿ ಸುರುಳಿಯೂ ಹೋಯಿತು, ಸಿ ಡಿ ಯೂ ಇಲ್ಲ!

na karantha peraje

ನಾ ಕಾರಂತ ಪೆರಾಜೆ 

ಒಂದು ಕಾಲಘಟ್ಟದಲ್ಲಿ ಧ್ವನಿಸುರುಳಿಗಳನ್ನು ಸಂಗ್ರಹಿಡಿಸುವುದು ನನಗೆ ಅಭ್ಯಾಸ. ಹಲವಾರು ನಾಟಕ, ಹಾಡುಗಳು.. ಹೀಗೆ.

ಈಚೆಗೆ ಯಕ್ಷಗಾನ ಕಾರ್ಯಕ್ರಮವೊಂದರಲ್ಲಿ ‘ಕಲಾಭಿಮಾನಿ’ ಒಬ್ಬರ ಪರಿಚಯವಾಯಿತು. ಅವರ ಹೆಸರನ್ನು ಮೊದಲೂ ಕೇಳಿದ್ದೆ.

ಒಂದಿವಸ ಮನೆಗೆ ಬಂದರು. ಸುಮಾರು ಐವತ್ತರಷ್ಟು ಹಳೆಯ ಯಕ್ಷಗಾನ ಧ್ವನಿಸುರುಳಿಗಳನ್ನು ಆಯ್ದು, ‘ಇದನ್ನು ಕೊಂಡೋಗ್ಗೇನೆ. ಪ್ರತ್ಯೇಕ ರೆಕಾರ್ಡ್ ಮಾಡಿ ಸಿಡಿಯಲ್ಲಿ ನಿಮಗೆ ಒಂದು ಪ್ರತಿ ಕೊಡ್ತೇನೆ’ ಎಂದು ಬಿನ್ನವಿಸಿಕೊಂಡರು.

yakshagana1ಸುಮಾರು ಮೂರ್ನಾಲ್ಕು ತಿಂಗಳು ಕಳೆದಿತ್ತು. ನನ್ನಿಂದ ಒಯ್ದ ಧ‍್ವನಿಸುರುಳಿಯೂ ಇಲ್ಲ, ಅವರು ಕೊಡುತ್ತೇನೆಂದ ಸಿಡಿಯೂ ಇಲ್ಲ!

ಈಚೆಗೆ ಒಂದು ಕಾರ್ಯಕ್ರಮದ ಮಳಿಗೆಯಲ್ಲಿ ಯಕ್ಷಗಾನ ತಾಳಮದ್ದಳೆಯ ಸಿಡಿ ದೊರಕಿತು. ಅದನ್ನು ಖರೀದಿಸಿದೆ. ಅದರಲ್ಲಿ ಸುಮಾರು ನಲವತ್ತರಷ್ಟು ಪ್ರಸಂಗಗಳಿದ್ದುವು. ಬಹುತೇಕ ನನ್ನಿಂದಲೇ ಒಯ್ದ ಧ್ವನಿಸುರುಳಿಗಳಿಂದ ಇರಬೇಕು ಎಂದು ಪ್ರಸಂಗವನ್ನು ಕಂಡಾಗ ಗುಮಾನಿ ಹುಟ್ಟಿತು.

ವಿಚಾರಿಸಿದಾಗ ಸತ್ಯ ಹೊರಬಂತು. ನನ್ನಿಂದ ಧ್ವನಿಸುರುಳಿಗಳನ್ನು ಒಯ್ದ ‘ಕಲಾಭಿಮಾನಿ’ಗೆ ಇದು ದಂಧೆ. ಬೇರೆ ಬೇರೆ ಕಡೆಗಳಿಂದ ಧ್ವನಿಸುರುಳಿ, ಲೈವ್ ತಾಳಮದ್ದಳೆಗಳನ್ನು ಸಂಗ್ರಹಿಸಿ, ಅದನ್ನು ನಕಲು ಮಾಡಿ ಮಾರುವುದು. ಅವರು ನೀಡಿದ ಸಂಪರ್ಕ ಸಂಖ್ಯೆಗೆ ರಿಂಗ್ ಮಾಡಿದಾಗ ‘ಎಲ್ಲಾ ಹಾದಿಗಳು ಬ್ಯುಸಿಯಾಗಿವೆ’ ಎಂದು ಮರುತ್ತರ ಬರಲು ತೊಡಗಿ ತಿಂಗಳು ಕಳೆಯಿತು.

ಧ್ವನಿಸುರುಳಿಯೂ ಹೋಯಿತು. ಸಿ ಡಿ ಯೂ ಇಲ್ಲ!

ನಿಮ್ಮಲ್ಲಿಗೆ ಇಂತಹ ‘ಕಲಾಭಿಮಾನಿ’ಗಳು ಬಂದಾರು, ಸಂಪರ್ಕಿಸಿಯಾರು. ಯೋಚಿಸಿ. ಯಕ್ಷಗಾನದ ಗಂಧಗಾಳಿಯೂ ಇಲ್ಲದ, ತಾನೊಬ್ಬ ಅಪ್ಪಟ ವಿಮರ್ಶಕರೆಂದು ಫೋಸ್ ಕೊಡುವ ಇಂತಹವರ ಕುರಿತು ಜಾಗ್ರತೆ.

‍ಲೇಖಕರು Admin

14 July, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading