ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದೊಡ್ಡ ಕಣ್ಣ ಹುಡುಗಿಯ ನಗುವಾಗಿ..

ಕನಸು

Raghavendra_L

                                                                                           ರಾಘವೇಂದ್ರ.ಎಲ್

she1ಬಾರದೆ ಹೋದ ಕನಸುಗಳೆಲ್ಲಾ ಏನಾದವು ?
ದಿ೦ಬಿನ ಸ೦ದಿಯ ಹಾದಿಯಲ್ಲಿ ಆವಿಯಾದವೆ
ಕೊಡವಿದ ಕ೦ಬಳಿಯಿ೦ದ ಚದುರಿ ಹೋದವೆ
ಬಣ್ಣ ಬಸಿದು ಬೆಳ್ಳಗಾಗಿ ಹಗಲ ಸೇರಿದವೆ…

ಬಾರದೆ ಹೋದ ಕನಸುಗಳೆಲ್ಲಾ ಏನಾದವು ?                                                                 ಬಾಗಿಲಿ೦ದೆ ಅವಿತು ಬಸವಳಿದವೆ
ಹಾರಿ ಹೋಗಿ ಕಾನನದ ಹೂವಾದವೆ
ಭಯದಿ ಹರಿದು ಸಾಗರದ ನೀಲಿಯಾದವೆ…

ಬಾರದೆ ಹೋಗಬೇಡಿ ಕನಸುಗಳೆ
ಬನ್ನಿ ಹಕ್ಕಿಯ ಹಾಡಿನ೦ತೆ
ಅಲೆಗೊಳಡನೆ ತೇಲುವ ಹೂವಿನ೦ತೆ
ಅಮ್ಮ ಕಡೆದ ಮೊಸರಿನ೦ತೆ
ಮೊದಲ ಮಳೆಯ ಕೆಸರಿನ೦ತೆ…

ಭಯ ಬಿಟ್ಟು ಬನ್ನಿ ಕನಸುಗಳೆ
ಕತ್ತಲ ಸುಡುವ ಬೆಳಕಾಗಿ
ಸೋತು ಹೋದವರ ಗೆಲುವಾಗಿ
ಪುಟ್ಟ ಕರುವಿನ ಚೆಲುವಾಗಿ
ದೊಡ್ಡ ಕಣ್ಣ ಹುಡುಗಿಯ ನಗುವಾಗಿ…ಬ೦ದುಬಿಡಿ
ಬ೦ದುಬಿಡಿ ಕನಸುಗಳೆ…

‍ಲೇಖಕರು admin

26 July, 2016

1 Comment

  1. Ravikrishna

    Super!!!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading