ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದೇವರಾಜ ಹುಣಸಿಕಟ್ಟಿ ಕವಿತೆ – ರೋಜ್ ಗೊಂದು ವಿದಾಯ…

ದೇವರಾಜ ಹುಣಸಿಕಟ್ಟಿ

ಹೆಚ್ಚೇನಲ್ಲ….ಇಷ್ಟೇ..!

ಕ್ರೀಡೆಯ ಎದೆಯ ನೆಲ ಒದ್ದೆಯಾಯಿತು..!

ಗೆಳೆಯ….!

ವಿದಾಯ ಹೊಸದಲ್ಲ ನಿಜ….
ನಿನ್ನಂತೆ ನಡೆದವರೂ ವಿರಾಳತಿ
ವಿರಳ ಸಹಜ….!
ನಿನ್ನ ಕಂಗಳಲ್ಲಷ್ಟೇಯಲ್ಲ ಕಂಬನಿ…
ನೆರದವರ ಗಲ್ಲ ಸವರಿ ಜಾರಿದ್ದು
ಪನ್ನೀರ ಖನಿ…!

ಅಂಗಳದ ತುಂಬೆಲ್ಲ
ಹರಿಣದಂತೆ ಸಂಚರಿಸುವಾಗ….
ನಿನ್ನಿಂದ ಸೋತವರು….!
ಮದಿಸಿದ ಮದ್ದಾನೆಯಂತಿದ್ದ…
ನಿನ್ನ ಜೊತೆ ಕಾದಾಡಿ ಗೆದ್ದವರು….!
ಅತ್ತು ಹಗುರಾದರು….!

ಹೆಚ್ಚೇನಲ್ಲ…ಇಷ್ಟೇ…!

ಕ್ರೀಡೆಯ ನೆಲ ಒದ್ದೆಯಾಯಿತು…!

ಗೆಳೆಯ….!

ಹೊಸದಲ್ಲ ದಾಖಲೆಯ ಚರಿತೆ ….
ಅಳಿಸಿ ಹಾಕಲೂ ಬಹುದು..
ಇನ್ನ್ಯಾರೋ..!
ಇರುವವನು ನಿನ್ನಂತೆ ದಾಹ..!!
ಕ್ರೀಡೆ ಎಡೆಗೆ ವ್ಯಾಮೋಹ…!!

ಆದರೇನಂತೆ….!

ಗೆಳೆಯ…!!

ನೀನು ಟೆನಿಸ್ ಅಂಗಳದಲ್ಲಿ
ಸದಾ ಮಿನುಗುವ ದೃವ ತಾರೆ…!!
ಮತ್ತೆ -ಮತ್ತೆ ನೆನಪಿನಂಗಳದಲ್ಲಿ ಇರುವೆ ತೋಟದಲ್ಲಿಯ ಗುಲಾಬಿಯಂತೆ….!
“ರೋಜ “ರ್ ಎಂಬ ಕ್ರೀಡಾಂಗಣದ
ಜೀವ ತೊರೆ…!!

ಹೆಚ್ಚೇನು ಹೇಳಲಿ….!

ಗೆಳೆಯ…..

ಕ್ರೀಡೆಯ ಎದೆಯ ನೆಲ
ಒದ್ದೆಯಾಯಿತು….!!…ಅಷ್ಟೇ…!!

‍ಲೇಖಕರು Admin

28 September, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading