ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದೇವನೂರು ಕಂಡಂತೆ ಜಾತಿ ಗಣತಿ

ಜಾತಿ ಜನಗಣತಿ : ಯಾಕೆ ಹೀಗೂ ಯೋಚಿಸಬಾರದು?
ದೇವನೂರ ಮಹಾದೇವ
`ದೇಶ ಕಾಲ’ದ ಹೊಸ ಸಂಚಿಕೆಯಲ್ಲಿ – ಸಂಚಿಕೆ 23 ರಲ್ಲಿ – ಪ್ರಕಟವಾದ ಲೇಖನ
ಥ್ಯಾಂಕ್ಸ್ ವಿವೇಕ್ ಶಾನಬಾಗ್
ಭಾರತದ ಛಿದ್ರತೆಗೆ ಮುಖ್ಯ ಕಾರಣಗಳಲ್ಲೊಂದಾದ ಜಾತಿಗಳ ಜನಗಣತಿಗೆ ಚಚರ್ೆಯಾಗುತ್ತಿದೆ. ಹಾಗೂ ಇದು ಆತಂಕವನ್ನೂ ಹುಟ್ಟುಹಾಕಿದೆ. ಅಜರ್ಿಗಳಲ್ಲಿ ಜಾತಿಯ ಕಾಲಂ ಇಲ್ಲದಿದ್ದರೆ ಜಾತಿಯೂ ಇರುವುದಿಲ್ಲ ಎಂದು ಭಾರತದ ಮಧ್ಯಮವರ್ಗದ ಮನಸ್ಸು ಮುಗ್ಧವಾಗಿ ಹೇಳುತ್ತಿದೆ. ಈ ರೀತಿ ಹೇಳುವ ಮನಸ್ಸೇ ಯಾರಾದರೂ ಅಪರಿಚಿತರು ಭೇಟಿಯಾದಾಗ – ಇವರು ಯಾವ ಜನ, ಇವರದು ಯಾವ ಮತ, ಇವರು ಯಾವ ಜನಾಂಗ, ಇವರು ಯಾವ ಸಮಾಜ ಎಂಬುದೇ ಅವರಲ್ಲಿ ಮೊದಲು ಏಳುವ ಪ್ರಶ್ನೆಯಾಗಿರುತ್ತದೆ-
ಇಲ್ಲಿ ಜಾತಿಗೆ ಬಳಸುವ – ಜನ, ಮತ, ಜನಾಂಗ, ಸಮಾಜ- ಪದಗಳೇ ಈ ಮನುಷ್ಯರು ಪರಸ್ಪರ ಸಂಬಂಧ ಇಲ್ಲದವರು, ಬೇರೆ ಮನುಷ್ಯರು ಎಂಬಂತಿವೆ. ಒಂದೇ ಥರ ಇದ್ದರೂ ಒಂದೇ ಸ್ಥಿತಿಯಲ್ಲಿ ಇದ್ದರೂ ಬೇರೆ ಬೇರೆ ಜಾತಿಯಾಗಿದ್ದರೆ ಆ ಇಬ್ಬರ ನಡುವೆ ಉಂಟಾಗುವ ದೂರ ಅಳತೆಗೂ ಸಿಗದಷ್ಟು ದೂರವಾಗಿರುತ್ತದೆ. ಆದ್ದರಿಂದ ಛಿದ್ರವಾದ ಭಾರತವು ತನ್ನ ಜಾತಿಗಳ ಮನೋ ಭೂಪಟದ ದೂರ ಆಧರಿಸಿ ಐಕ್ಯತೆಯತ್ತ ಹೆಜ್ಜೆ ಇಡಬೇಕಾಗಿದೆ. ಇದು, ಜಾತಿಗಳು ಉಪಜಾತಿಗಳು ಹೇಗಿವೆ ಎಷ್ಟಿವೆ ಯಾವ ಸ್ಥಿತಿಯಲ್ಲಿವೆ ಯಾವ ಪ್ರಮಾಣದಲ್ಲಿವೆ ಎಂಬುದರ ಮಾಹಿತಿ ಆಧಾರಿಸಿಯೇ ನಡೆಯಬೇಕಾಗಿದೆ.
ಇದರ ಅಗತ್ಯವನ್ನು ಮನಗಾಣಿಸುವುದಕ್ಕೆ ನಾನು ಜನಸಂಖ್ಯಾ ತಜ್ಞರ ಅಥವಾ ಸಮಾಜಶಾಸ್ತ್ರಜ್ಞರ ಅಧ್ಯಯನಶೀಲತೆಯ ಪರಿಭಾಷೆಯಲ್ಲಿ ಹೇಳುವುದೂ ಇಲ್ಲ, ಅದು ನನಗೆ ಗೊತ್ತೂ ಇಲ್ಲ. ನಮ್ಮ ಕಣ್ಣೆದುರಿನ ಒಂದು ಉದಾಹರಣೆಯನ್ನಷ್ಟೇ ಮುಂದಿಡುವೆ: ಪರಿಶಿಷ್ಟಜಾತಿಗೆ ಸಂವಿಧಾನದತ್ತವಾಗಿ ಮೀಸಲಾತಿಯ ವಿಶೇಷ ಸೌಲಭ್ಯ ಪಡೆಯಲು ಅವಕಾಶವಾಗಿದೆ. ಕನರ್ಾಟಕದಲ್ಲಿ ಪರಿಶಿಷ್ಟ ಜಾತಿಯ ಒಳಗೇನೇ ನೂರೊಂದು ಉಪಜಾತಿಗಳಿವೆ. ಎಲ್ಲರಿಗೂ ಸೇರಿ 15% ಮೀಸಲಾತಿಯ ಅವಕಾಶವಿದೆ. ಪರಿಶಿಷ್ಟ ಜಾತಿಯ ಉಪಪಂಗಡಗಳು ಬಹುತೇಕ ಎಲ್ಲಾ ದೃಷ್ಟಿಯಿಂದಲೂ ಒಂದೇ ಸ್ಥಿತಿಯಲ್ಲಿವೆ.
ಈ ಪಂಗಡಗಳಲ್ಲೂ ದಿನದಿನಕ್ಕೆ ವಿದ್ಯಾವಂತರಾಗುತ್ತಾ ಉದ್ಯೋಗಸ್ಥರಾಗುತ್ತಾ ಇವರ ನಡುವೆ ಸಾಮರಸ್ಯ, ಸಹಬಾಳ್ವೆ ಹೆಚ್ಚಾಗಿ ಸಾಂಪ್ರದಾಯಿಕವಾಗಿಯೇ ಮದುವೆ ಜರುಗುವಷ್ಟು ಇವರ ನಡುವಿನ ಸಂಬಂಧ ಕುದುರಬೇಕಿತ್ತು. ಆದರೆ, ವಾಸ್ತವ ಇದಕ್ಕೆ ತದ್ವಿರುದ್ಧವಾಗಿದೆ. ಇಂದು ಪರಿಶಿಷ್ಟ ಜಾತಿಯ ಉಪಪಂಗಡಗಳ ನಡುವೆ ದ್ವೇಷ, ಅಸಹನೆ ದಿನ ದಿನಕ್ಕೂ ಉಲ್ಬಣಿಸುತ್ತಿವೆ.   ಪರಿಶಿಷ್ಟ ಜಾತಿಯ ಪ್ರತಿ ಪಂಗಡವೂ ತಮ್ಮ ತಮ್ಮ ಪಂಗಡದ ಜನಸಂಖ್ಯೆಯನ್ನು ಇರುವುದಕ್ಕಿಂತಲೂ ಎರಡು ಮೂರು ಪಟ್ಟು ಹೆಚ್ಚಿಸಿಕೊಂಡು ಈ ಭ್ರಮೆಯನ್ನು ಸ್ವಲ್ಪವೂ ಅನುಮಾನಿಸದೆ ನಂಬಿರುವುದೂ ಮುಖ್ಯ ಕಾರಣವಾಗಿದೆ.
ಪರಿಶಿಷ್ಟ ಜಾತಿಯ ಉಪಪಂಗಡಗಳ ಮುಖಂಡರಿಂದ ಅವರ ಜನಸಂಖ್ಯೆಯ ಪ್ರಮಾಣವನ್ನು ಕೇಳಿ ಆ ಜನಸಂಖ್ಯೆಯ ಅಂಕಿ ಅಂಶಗಳನ್ನು ಕೂಡಿದರೆ ಪರಿಶಿಷ್ಟ ಜಾತಿಯ ಈ ಭ್ರಮಾ ಜನಸಂಖ್ಯೆಯು ಕನರ್ಾಟಕದ ಇಡೀ ಜನಸಂಖ್ಯೆಯನ್ನು ಮೀರಿಸುತ್ತದೆ! ಈ ಭ್ರಮೆಯಿಂದಾಗಿ ಇಷ್ಟೊಂದು ಸಂಖ್ಯೆಯಲ್ಲಿದ್ದರೂ ತಮಗೆ ಸಿಕ್ಕಿರುವ ಸವಲತ್ತು ಅಷ್ಟೊಂದಿಲ್ಲ ಎಂಬ ಭಾವನೆ ಹುಟ್ಟಿಸಿ ಪರಸ್ಪರ ಕುದಿತಕ್ಕೆ ಇದೂ ಕಾರಣವಾಗಿದೆ. ಏನಾದರೂ ಉಪಪಂಗಡಗಳ ಜನಸಂಖ್ಯೆಯ ಮಾಹಿತಿ ಇದ್ದು ಜೊತೆಗೆ ಆ ಪಂಗಡಗಳ ಉದ್ಯೋಗಸ್ಥರ ಪ್ರಮಾಣದ ಮಾಹಿತಿ ಇದ್ದಿದ್ದರೆ ಬಹುಶಃ ಈ ದ್ವೇಷ, ಅಸಹನೆಗಳು ಇಷ್ಟೊಂದು ಇರುತ್ತಿರಲಿಲ್ಲವೇನೋ. ಬದಲಾಗಿ ಈ ವಾಸ್ತವಾಂಶ ಗೊತ್ತಿದ್ದರೆ ಪರಿಶಿಷ್ಟ ಜಾತಿಯಲ್ಲಿ ಕುಟುಂಬ ಭಾವನೆ ಉಂಟಾಗಬಹುದಾದ ಸಾಧ್ಯತೆಗಳೂ ಹೆಚ್ಚಿತ್ತು.
ಉಪಪಂಗಡಗಳ ನಡುವಿನ ಪ್ರಾತಿನಿಧಿಕತೆಯಲ್ಲಿ ಅಸಮತೋಲನವಿದ್ದಲ್ಲಿ ಅದನ್ನು ಸರಿಪಡಿಸಿ ನ್ಯಾಯ ಸಲ್ಲುವಂತಾಗುವ ‘ಬ್ಯಾಕ್ ಲಾಗ್’ ಅಥವಾ ಗ್ರಾಮೀಣ ಕೃಪಾಂಕದಂತೆ  ‘ಸಮತೋಲನ ಕೃಪಾಂಕ’ ಇತ್ಯಾದಿ ಉಪಾಯಗಳನ್ನು ಹುಡುಕಬಹುದಾಗಿತ್ತು. ಉಪಪಂಗಡಗಳ ನಡುವಿನ ಜನಸಂಖ್ಯೆಯ ಪ್ರಮಾಣ ತಿಳಿಯದ ಕಾರಣವಾಗಿ ಮಿತ್ರ ಗುಂಪುಗಳಾಗಬೇಕಾದ ಈ ಉಪಪಂಗಡಗಳು ಶತ್ರುಗುಂಪುಗಳಾಗುವ ದುರಂತ ವ್ಯಂಗ್ಯದಿಂದ ತಪ್ಪಿಸಿಕೊಳ್ಳಬಹುದಾಗಿತ್ತು.
ನಮ್ಮ ಕಣ್ಣೆದುರಿಗೆ ಪರಿಶಿಷ್ಟ ಜಾತಿಯ ಒಳ ಪಂಗಡಗಳ ಜನಸಂಖ್ಯೆಯ ಪ್ರಮಾಣ ತಿಳಿಯದೆ ಈ ಒಳಪಂಗಡಗಳು ಏಳಿಗೆ ಹೊಂದುವುದು ಇರಲಿ, ಪರಸ್ಪರ ಹೊಡೆದಾಡಿಕೊಂಡು ನಾಶವಾಗುತ್ತಿರುವ ಕಟು ವಾಸ್ತವ ಕಂಡೂ ಕೂಡ ಜಾತಿ ಜನಗಣತಿ ಬೇಡ ಎಂದರೆ ವಿಶೇಷ ಸವಲತ್ತುಗಳಿಗೆ ಅರ್ಹರಾದ ಹಿಂದುಳಿದ ವರ್ಗಗಳ ಜನಸಂಖ್ಯಾ ಪ್ರಮಾಣವನ್ನು ತಿಳಿಯದೆ ಮುಂದುವರೆದರೆ ಇಂದು ಪರಿಶಿಷ್ಟ ಜಾತಿಗಳು ಈಗ ಅನುಭವಿಸುತ್ತಿರುವ ಪರಸ್ಪರ ದ್ವೇಷ ಅಸೂಯೆಗಳು ಹಿಂದುಳಿದ ವರ್ಗಗಳಲ್ಲೂ ಉಲ್ಬಣಿಸುತ್ತವೆ. ಈ ಕಟು ವಾಸ್ತವವು ಜಾತಿ ಮಾತ್ರವಲ್ಲ, ಉಪಪಂಗಡಗಳ ಜನಸಂಖ್ಯಾ ಪ್ರಮಾಣವೂ ಬೇಕೆಂದು ಕೇಳುತ್ತಿದೆ.
ಭಾರತದ ಮನೋಭೂಪಟದಲ್ಲಿ ಜಾತಿ ಎಂದಾಕ್ಷಣ ಶ್ರೇಣಿಕೃತ ವ್ಯವಸ್ಥೆಯೇ ನಿಲ್ಲುವುದು. ಅದಕ್ಕಾಗಿ ಜಾತಿ ಎಂಬ ಪದ ಬಳಸುವುದನ್ನೇ ಬಿಟ್ಟು ನಾವು ನೋಡಬಹುದೇ? ಉದಾಹರಣೆಗೆ ‘ಕೀಳು ಜಾತಿ’ ಎಂಬುದಕ್ಕೆ ಪಯರ್ಾಯವಾಗಿ ‘ತಳಸಮುದಾಯ’ ಎಂಬ ಪರಿಕಲ್ಪನೆ ಇತ್ತೀಚೆಗಷ್ಟೇ ಚಾಲ್ತಿ ಮಾಡಿ ಈಗ ರೂಢಿಯೇ ಆಗಿಬಿಟ್ಟಿದೆ. ಈಗ ‘ಜಾತಿ’ಗೆ  ಬದಲಾಗಿ ಮೇಲು-ಕೀಳು ಸೋಂಕಿಲ್ಲದ ‘ಗುಂಪು’ ಪದ ಬಳಸಿ-ಬ್ರಾಹ್ಮಣ ಗುಂಪು, ಲಿಂಗಾಯತ ಗುಂಪು, ನಾಯಕ ಗುಂಪು, ದಲಿತರಲ್ಲೂ ಉಪಪಂಗಡಗಳ ಹೆಸರಿನೊಡನೆ ‘ಗುಂಪು’ ಸೇರಿಸಿ ಬಳಸಿದರೆ, ಹೀಗೆ ಶ್ರೇಣಿಯ ಸೋಂಕಿಲ್ಲದೆ ನೋಡುವುದರಿಂದಾಗಿ- ಒಂದೊಂದು ಗುಂಪು ಅಂದರೆ ಅದೊಂದು ಅನುಭವ ಸಮುದಾಯ, ಆ ಗುಂಪುಗಳ ಅನುಭವವೂ ಸಂಪತ್ತು, ಆ ಅನುಭವದಿಂದ ಪ್ರತಿ ಗುಂಪಿಗೂ ಅದರದ್ದೇ ಆದ ಬುದ್ಧಿಮತ್ತೆ, ಜಾಣ್ಮೆ, ಪ್ರತಿಭೆ ಇರುತ್ತದೆ, ಇದು ಅರಳಲು ಅವಕಾಶ ಕಲ್ಪಿಸಿಕೊಡುವುದರಲ್ಲೇ ಭಾರತದ ಬೆಳವಣಿಗೆ ಇದೆ, ಈ ಎಲ್ಲಾ ಗುಂಪುಗಳ ಪ್ರತಿಭಾವಂತರು ಎಲ್ಲಾ ಕ್ಷೇತ್ರಗಳಲ್ಲೂ ಪಾಲ್ಗೊಳ್ಳಬೇಕು, ಇದೇ ಭಾರತದ ನಿಜವಾದ ಸರ್ವತೋಮುಖ ಅಭಿವೃದ್ಧಿ ಎಂಬ ಈ ಅಭಿವೃದ್ಧಿಯ ಪರಿಕಲ್ಪನೆ ಬಂದರೆ ಮನುಷ್ಯ ಸಂಪತ್ತಾಗುತ್ತಾನೆ; ಕಸ ರಸವಾಗುತ್ತದೆ.
()

‍ಲೇಖಕರು avadhi

1 November, 2010

1

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

– ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು ನಡೆಸಿದ್ದೀರಿ. ಹೊಸಗನ್ನಡ ಕಾವ್ಯದ ಕೆ.ಎಸ್.ನ.,ಅಡಿಗ , ಬೇಂದ್ರೆ ಮುಂತಾದ ಕವಿಗಳ ಸಾಲುಗಳನ್ನು ಸಹ ನೀವು ತುಂಬಾ ಅರ್ಥ ಪೂರ್ಣವಾಗಿ ದುಡಿಸಿಕೊಂಡಿದ್ದಿರಿ. ಇದು ನನಗೆ […]

ನಗ್ತಾರೆ ರಾಮಯ್ಯ

ನಗ್ತಾರೆ ರಾಮಯ್ಯ

-ಸೂತ್ರಧಾರ ರಾಮಯ್ಯ ಮುನ್ ನಗೆ ನುಡಿ ಜೀವನವನ್ನು ವಿಕಟ ದೃಷ್ಟಿಯಿಂದ ನೋಡುವ , ಆಡುವ ಮಾತಿನಲ್ಲಿ ಗಾದೆಗಳನ್ನು ಬಳಸುತ್ತಾ ಶ್ಲೇಶಾರ್ಥಗಳನ್ನು ಹೊರಡಿಸುವ ಹವ್ಯಾಸ ನನಗೆ ಬುದ್ಧಿ ಬಂದಾಗಿನಿಂದ ಇದೆ. ಈ ಗೀಳು ನನಗೆ ಯಾವಾಗ, ಯಾರಿಂದ ಅಂಟಿಕೊಂಡು ಎಂದು ಒಮ್ಮೆ ಹಿಂದಿರುಗಿ […]

3 Comments

  1. kanam nagaraju

    jaati ganati beda enuvavaru nijavaagiyu jaati virodhigalaagiruvudilla. avaru anya jaati virodhigalaagiruttare.

  2. Mahesh

    ಸಾವಿರಾರು ವರ್ಷಗಳಿಂದ ನಡೆದು ಬಂದ ಜಾತಿ ಪದ್ದತಿ ಅಳಿಯಲು 100 ವರ್ಷಗಳಾದರೂ ಬೇಕು ಅಂದೆನಿಸುತ್ತದೆ

  3. ಹುಲಿಕುಂಟೆ ಮೂರ್ತಿ

    ಖಂಡಿತಾ ಉತ್ತಮ ಯೋಚನೆ..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading