ದೀಪಾ ಗೋನಾಳ
ನೀನು ಕುಡಿಸಿದ್ದು ಅದಾವ ಮಧು ಹೇಳಬಾರದೆ ಸಾಕಿ
ನಶೆಯ ಸುಳಿಯಲಿ ಸಿಲುಕಿಹೆನು ಬಿಡಿಸಬಾರದೆ ಸಾಕಿ
ಬೆಳಗಾಗುತ್ತಲೇ ಎತ್ತಿದ್ದೆನೊಂದು ತುಸುನಡುಸಣ್ಣ ಲೋಟ
ಅಷ್ಟೇ,ನೆನಪಿರುವುದು ಅಲ್ಲಿಂದಾಚೆ ಕರೆತರಬಾರದೆ ಸಾಕಿ
ಮತ್ತು ಮುತ್ತು ಎಂದು ಏನೇನೊ ಬಡಬಡಿಸುತ್ತಿದ್ದಾರೆ ಸುತ್ತೆಲ್ಲ ಮಧುವಿಲಾಸದಲ್ಲಿ
ನಾನೆಲ್ಲಿದ್ದೇನೆ ಒಂದೇ ಒಂದು ಸಲ ಹುಡುಕಿಕೊಡಬಾರದೆ ಸಾಕಿ

ಅಮಲಿನ ಘಮಲಿನ ದುಂಡುಮಲ್ಲಿಗೆ ಮಾಲೆ ಮುಂಗೈ ಸುತ್ತಿದ್ದೆ ನಿಜ
ಈಗ ಗಾಳಿಯ ಘಮದಲಿ ಒಂದಾಗಿದ್ದೇನೆ ಲೋಕ ಇದ ತಿಳಿಯಬಾರದೆ ಸಾಕಿ
ಗವ್ವೆನ್ನುವ ಕತ್ತಲಕೋಣೆ ಒಳ ನುಗ್ಗಿದ್ದೆ ನಿಜ ಒಪ್ಪುವೆ ತಿಳಿ’ದೀಪ’ ತುಂಬಿದೆ
ಈಗಲ್ಲಿ ಈ ಬೆಳಕಲ್ಲೆ ಬದುಕಲು ಬಿಡಬಾರದೆ ಸಾಕಿ






0 Comments