
ಡಿ. ರವಿವರ್ಮ
ಗೆಳತೀ
ಇನ್ನಾದರೂ ಮರೆತುಬಿಡು ,
ನಿನ್ನ ಛಪ್ಪನ್ನಾರು ಚಿಂತೆಗಳ,
ಕಳಚಿಬಿಡು ನಿನ್ನ ಹತ್ತಾರು ಮುಖವಾಡಗಳ ,
ಈ ಹುಣ್ಣಿಮೆ ಚಂದ್ರನ ಬೆಳದಿಂಗಳ ಬೆಳಕಲ್ಲಿ
ನಮ್ಮ ಗಂಟು ಮುಖಗಳ, ಗಂಟು ಮನಸ್ಸುಗಳ,
ಬಿಚ್ಚಿ, ತೆರೆದಿಟ್ಟು, ದಿಲ್ ಸೆ ಮಾತನಾಡೋಣ.
ಓ ಸೂರ್ಯ ಪ್ರಭುವೇ ನೀನೊಂದು ದಿನ ವಿರಮಿಸು ಎಂದು ಬೇಡುವೆ
ಈ ಹುಣ್ಣಿಮೆಯ ಚಂದ್ರನಿಂದು ನಮಗಾಗಿ
ನಮ್ಮೊಡನೆಯೇ ಇರಲಿ
ಈ ಸುಧೀರ್ಘ ಸುಂದರ ರಾತ್ರಿಯಿಡೀ
ಬೆಳದಿಂಗಳನ್ನೇ ಹಾಸಿಕೊಳ್ಳೋಣ
ಬೆಳದಿಂಗಳನ್ನೇ ಹೊದ್ದುಕೊಳ್ಳೋಣ
ಇಲ್ಲಿ ನಮ್ಮಿರ್ವರ ಮದ್ಯೆ
ಮಾತಿರಲಿ, ಮನದಾಳದ ಹಾಡಿರಲಿ
ಮುಕ್ತ ಮಾತು ,ಹಾಡಿನ ಜೊತೆ
ಮೌನವು ಇರಲಿ ,ಮೈತುನವೂ ಇರಲಿ

ಈ ರಾತ್ರಿಯ ಮಾತು, ಮಂಥನ, ಮೈಥುನ, ಮೌನ
ಬರಲಿರುವ ದಿನಗಳಿಗೆ ಹೊಸ ಸ್ಫೂರ್ತಿ ನೀಡಲಿ
ಹೊಸ ಸ್ಪೂರ್ತಿಯ ಹೊಸ ಹುರುಪು ಹೊಸ ಕನಸಿನೊಂದಿಗೆ
ಹೊಸ ಹಾಡ ಕಟ್ಟೋಣ, ಹೊಸ ಹಾಡ ಹಾಡೋಣ
ಹೊಸ ಹಾಡ ಹಾಡುತ್ತಾ ಹೊಸ ದಿಕ್ಕಿನೆಡೆಗೆ ಹೊಸ ಹೆಜ್ಜೆ ಹಾಕೋಣ






0 Comments