ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದಮ್ಮಯ್ಯ ನಿನಗೆ, ವಾಪಸ್ ಕೊಟ್ಟುಬಿಡು..

ಗೀರ್ವಾಣಿ

flute3ರಾಧೆ, ರಾಧೆಗೊಬ್ಬ ಶ್ಯಾಮ,
ಶ್ಯಾಮನಿಗೊಂದು ಕೊಳಲು.

ಆ ಕೊಳಲೀಗ ಬೇಡ
ಕೊಟ್ಟುಬಿಡು ಶ್ಯಾಮ
ಬಿದಿರ ಮೆಳೆಗೆ !

ನಾ ಬಂದಾಯಿತಲ್ಲ !

ಮರಳಿಸಿ ಬಿಡು ನೀ ನುಡಿಸಿದ
ಜನ್ಮಾಂತರದ ನಾದಗಳನ್ನು,
ಎದೆ ಸೇರಿದ ಹಾಡುಗಳನ್ನು,
ಇನ್ನಿಲ್ಲದಂತೆ ಕಾಡಿದ ರಾಗಗಳನ್ನು
ಪಾಪ ! ನೊಂದುಕೊಂಡಾವು ಬಿದಿರ ಮೆಳೆಗಳು.

ಪಾಪದ ಬಿದಿರು ಇದು,
ಒಂದೇ ಸಮ ತುಯ್ಯುತಿದೆ ಮೋಹನಾ
ನೀನೂದಿದ ಉಸಿರಿಗೆ .
ದಮ್ಮಯ್ಯ ನಿನಗೆ, ವಾಪಸ್ ಕೊಟ್ಟುಬಿಡು
ಕೊಳಲನ್ನ ಬಿದಿರ ಮೆಳೆಗೆ
ನಾನೇ ವೀಣೆಯಾಗುವೆ ನಿನ್ನ ಬೆರಳಿಗೆ !!!

‍ಲೇಖಕರು Admin

22 November, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading