ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ತೆರೆದ ಫೇಸ್ ಬುಕ್ಕಿನ ಗೋಡೆಯ ಮೇಲೆ…’


ಎಚ್ ಕೆ ಶರತ್

ಎಂದೋ ಅಡ್ಡಾಡಿದ
ಕಾಲೇಜು ಕ್ಯಾಂಪಸ್ಸಿನ
ನೀಲಗಿರಿ ತೋಪಿನ ತುಂಬ
ಮರದ ನೆಂಟಸ್ತನಕ್ಕೆ ವಿದಾಯ ಹೇಳಿದ
ತರಗೆಲೆಗಳು

ತೆರೆದ ಫೇಸ್ ಬುಕ್ಕಿನ
ಗೋಡೆಯ ಮೇಲೆ
ಕ್ಲಾಸ್ ಮೇಟೊಬ್ಬಳು ಹಡೆದ
ಮುದ್ದಾದ ಮಗುವಿನ
ಚಿತ್ರಗಳು
 
ನಡೆದ ರಸ್ತೆಯ
ನಡುವಿನಲ್ಲಿ
ತೂತು ಬಿದ್ದ ವಿರಹದ ಬಲೂನು
ವಿಸರ್ಜಿಸಿ ಹೋದ
ಪ್ರೀತಿಯ ಬಿಸಿ ಉಸಿರು
 
ಉಕ್ಕುತ್ತಿರುವ
ಬಿಯರಿನ ನೊರೆಯ ಎದೆಯಲ್ಲಿ
ಅವಳ ಮುನಿಸಿನ ತೀವ್ರತೆ
ನಾಲಿಗೆಗೆ ವಗರೆಂದರೆ
ಅದೆಂಥದೋ ಆರ್ದತೆ
 
ಲೌಡು ಸ್ಪೀಕರಿನ ಒಡಲಿಂದ
ಬಂಡೆದ್ದು ಬರುತ್ತಿರುವ
ರಾಗಗಳ ಮೈ ಮೇಲೆ
ತರಚಿದ
ಗಾಯಗಳು
 
ಕಾಲೇಜು ಕ್ಯಾಂಪಸ್ಸು
ಫೇಸ್ ಬುಕ್ಕಿನ ಗೋಡೆ
ರಸ್ತೆಯ ನಡು
ಬಿಯರಿನ ನೊರೆ
ಲೌಡು ಸ್ಪೀಕರಿನ ಒಡಲು
ಯಾರದೋ ಗ್ರಹಿಕೆಗೆ ತಕ್ಕಂತೆ ಕುಣಿಯುತ್ತಿವೆ
ಅಥವಾ
ತಮ್ಮದೇ ತೆಕ್ಕೆಗೆ ನಮ್ಮನ್ನೆಳೆದುಕೊಂಡು ಕುಣಿಸುತ್ತಿವೆ

‍ಲೇಖಕರು avadhi

1 May, 2014

8 Comments

  1. mmshaik

    tumba chennaagide..

  2. ashwini rao.k.n.

    very nice saar..

  3. satish javaregowda

    Very nice sharat.keep it up.

  4. Anil Talikoti

    Good one

  5. hema

    nice poem

  6. Karki Krishnamurthy

    Ha..ha…eegashte kaalegu daati hora bandiddaare..! chenaagide kavana !

  7. sangeetha raviraj

    arthagarbitha kavite…
    nange thumba eshtavaythu…

  8. ಕುಸುಮಬಾಲೆ

    ಕತೆಯೊಳಗಳ ಉಪಕತೆಗಳಂತಾ ಕಟ್ಟುವಿಕೆ.ಕಸದ ತೊಟ್ಟಿಯೂ ಕಾವ್ಯವಾಗಬಲ್ಲುದು.ಕಾಣಬೇಕಷ್ಟೆ..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading