ದೇವರು!
ಕೇಶವರೆಡ್ಡಿ ಹಂದ್ರಾಳ
ಯಾರು ಬಂದದ್ದು ಮೆರವಣಿಗೆ ಮಧ್ಯರಾತ್ರಿಯಲಿ
ಮಲಗಿರಲು ಜಗವೆಲ್ಲ ಸುಖದ ಸುಪ್ಪತಿಗೆಯಲಿ
ಯಾರವನು ಭಾರತಾಂಬೆಯ ಮುದ್ದಿನ ಮುಕಟ ಮಣಿ
ಕಣಿ ಹೇಳುವವಳು ಮಲಗಿದ್ದಾಳೆ ಮಧ್ಯಾಹ್ನವೇ ಅರ್ಧ
ಬಾಟಲು ರಮ್ಮು ಎತ್ತಿ ನಂಜಿಕೊಂಡು ವಿದೇಶಿ ಕೋಳಿಯ
ಅರೆ ಬೆಂದ ತತ್ತಿ.
ಜೈ ಜವಾನೋ, ಜೈ ಕಿಸಾನೋ
ಕಿಸಕ್ಕನೆ ನಗುತ್ತಿದ್ದಾಳೆ ಭ್ರಾಂಡ್ ಅಂಬಾಸಿಡರ್
ಬೆಡಗಿ; ತುಟಿಯರಂಗನು ನುಂಗಿದೆ ಹನಿ ಹನಿ ಪೆಪ್ಸಿ.
ಅಹಾ! ಏನು ಆಟ, ಏನು ಮಾಟ
ಚಂದ್ರನ ಬೆಳಕಿಗೂ ನಿಲುಕದ ಲಲನೆಯರ ಮೈಮಾಟ
ಟಾಟ, ಅಂಬಾನಿ, ಮಲ್ಯಕೊನೆಯಿಲ್ಲದ ಲಿಸ್ಟು
ಕುಡಿದರೆ ಶಕ್ತಿ ಬರುವುದು ದಿನಕ್ಕೊಮ್ಮೆಯಾದರೂ ಬೂಸ್ಟು
ಸಿಂಹಾಸನದ ಮೇಲೆ ಕುಳಿತಿದ್ದಾನೆ ಭೂಪ… ಬಫೂನ
ಕನ್ನಡಿಯ ಮುಂದೆ ಕುಳಿತಿದ್ದಾಳೆ ರೇಖಾ….
ವರ್ಷ ಅರವತ್ತಾಗಿದ್ದರೂ ಹದಿನಾರರ ಮೇಕಪ್ಪು
ಕಾಮಟಿಪುರದ ಮುರುಕು ಮಂಚಗಳ
ಮೇಲೆ ಅಂಗಾತ ಬಿದ್ದ ಕನಸುಗಳು
ತೆಗೆದುಕೊಂಡು ಬಾ ಈ ದೇಶದ ದೇವರುಗಳ
ಲಿಸ್ಟು.
ಅರೆ, ಎಲ್ಲೂ ಕಾಣುತ್ತಿಲ್ಲ ಗಾಂಧಿ, ಅಂಬೇಡ್ಕರ
ಕನಿಷ್ಠ ಇಲ್ಲವಲ್ಲ ದೇಶಕಾಯುವ Warrior
ಅನ್ನ ಇಕ್ಕುವ Farmer
ತಿಂದಿದ್ದರೆ ತಾನೆ ಜಾಹೀರಾತಿನ ಲದ್ದಿ ಇವರೆಲ್ಲ
ಮಾಧ್ಯಮಗಳಲ್ಲಿ ಬೊಬ್ಬಿಡುತ್ತಿದೆ ಬ್ರೇಕಿಂಗ್ ನ್ಯೂಸು
ದೇವರು ರನ್ನು ಹೊಡೆದ….
ದೇವರು ಹೊನ್ನು ಹೊಡೆದ….
ದೇವರ ಬರ್ತಡೆ… ದೇಶಕ್ಕೆಲ್ಲ ಫೆಸ್ಟಿವಲ್ ಡೆ….
ದೇವರು ಪಾರ್ಲ್ ಮೆಂಟಿಗೂ ಬಂದದಾರಿ ಬಿಡಿ…
ಗಬ್ಬು ನಾರುತ್ತಿದೆ ಮುಂಬಿಯಿಯ ಕಡಲ ತೀರ
ಹೇತವರ್ಯಾರು….? ಸ್ಲಂಮಿನಜನರಲ್ಲವೆ….?
ಒಂದೊಂದು ರನ್ನಿಗೂ ಪುಡಿ ಪುಡಿ
ಕೋಕ, ಪೆಪ್ಸಿ, ಮಿರಿಂಡಾ ಬಾಟಲ್ಲು
ದೇಶದ ರೈತನಿಗೆ ಸಾಕೊಂದು ಟವಲ್ಲು
ಒರೆಸಿಕೊಳ್ಳಲು; ಜೊತೆಗೆ ಪುಟಗೋಸಿಯಾಗಿ ಬಳಸಿಕೊಳ್ಳಲು.






ಕೆಚ್ಚಿನ ಕವನ….
Sathya … salladavarige ella maryaade …
GOOD POEM,made us to ‘introspect’ ourselves. cosumerism creating ‘false gods’.It is unfortunate that our media is projecting them as real gods and our children are beleaving it as truth. Today children started beleaving that these ‘bogus gods’ are building our country,and they dont know the contribution of ‘farmers’in building this country.Any how ‘SATHYA’ is dying.