ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತುಳಸಿಗೀಗ ಹೊಸ ಅಂಗಳದ ಸಂಭ್ರಮ

ಪ್ರೇಮ ಟಿ.ಎಮ್.ಆರ್

ಅಲ್ಲಿ ತುಳಸಿ ಸೊರಗುತ್ತಿರಬಹುದೇ?
ನಾನಿಲ್ಲದೇ
ಇಲ್ಲಿ ನಾನೂ
ಎಷ್ಟೊಂದು ನೆನಪುಗಳು
ಕೆತ್ತಿದ ಕಲ್ಲಿನ
ಚೌಕದೊಳಗೆ ಇಷ್ಟೇ
ಇಷ್ಟು ಬೆಳೆದ ನಾನು ಅವಳು
ಇಲ್ಲಿ ನಾನೂ ಚಚ್ಚೌಕದೊಳಗೇ
ಸುತ್ತುತ್ತೇನೆ

ಏಳೆಂದರೆ ಏಳುತ್ತ
ಕೂರೆಂದರೆ ಕೂರುತ್ತ
ಬೆಳೆವ ತುಳಸಿಯ ಬುಡದಲ್ಲಿ
ಸಿಡಿದ ಕಂಬನಿ ತೊಡೆದ ಬೆವರು

ಅಜ್ಜಿಯದು ಅಮ್ಮನದು
ನನ್ನದೂ
ಉಪ್ಪುಪ್ಪು
ತುಳಸಿಯಿದೆ ದೂರ ನಿಲ್ಲು
ಅಂದವರೆಲ್ಲ ಚಿಲಕ ಬಿಗಿದು
ಹೊದ್ದುಮಲಗಿದರೆ
ಹೊಸಿಲಾಚೆ ಹಾಸಿಕೊಂಡವಳಿಗಾಗಿ
ಸುಯ್ಯುತ್ತಿದ್ದವಳು
ತುಳಸಿ ಮಾತ್ರ
ತುಳಸಿಗೀಗ ಹೊಸ
ಅಂಗಳದ ಸಂಭ್ರಮ
ಹೊಸಮಣ್ಣಿನ ಘಮ
ಅಂದುಕೊಳ್ಳುತ್ತಾರೆ
ನೆಟ್ಟವರು
ತುಳಸಿ ಸೊರಗುತ್ತಿದೆ
ಮಣ್ಣ ಕೊಡವಿಕೊಂಡು
ನಾನು ಸೊರಗುತ್ತೇನೆ
ನೆನಪುಗಳ ಹರವಿಕೊಂಡು

‍ಲೇಖಕರು avadhi

20 June, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading