ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತಂಗಿ ಬರೆದಿದ್ದಾಳೆ..

ಗೆಳೆಯರೇ, ನಾನು ಮುಂಬಯಿಯಲ್ಲಿ ಎಂ.ಎ. ಮಾಡುತ್ತಿದ್ದ ಸಂದರ್ಭದಲ್ಲಿ ಬರೆದ ಕವಿತೆ ಇದು. ಬಳಿಕ ನನ್ನ ಮೊದಲ ಕವನ ಸಂಕಲನ ‘ಪ್ರವಾದಿಯ ಕನಸು’ ಕೃತಿಯಲ್ಲಿ ಈ ಕವನ ಪ್ರಕಟಗೊಂಡಿತು. 1996ರಲ್ಲಿ ಈ ಕೃತಿಗೆ ‘ಮುದ್ದಣ ಕಾವ್ಯ ಪ್ರಶಸ್ತಿ’ಯೂ ದೊರಕಿತ್ತು. ನನ್ನ ತೀರಾ ಹಳೆಯ ಈ ಕವಿತೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು ಅನ್ನಿಸಿತು. ಹಂಚಿಕೊಂಡಿದ್ದೇನೆ. -ಬಿ ಎಂ ಬಷೀರ್ ಗುಜರಿ ಅಂಗಡಿ ನನ್ನ ಪುಟ್ಟ ತಂಗಿಗೀಗ ತಿಳಿದು ಹೋಗಿದೆ ನಾ ಕೊಟ್ಟ ನವಿಲು ಗರಿಗೆ ಎಂದೂ ಜೀವ ಬರುವುದಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾಳೆ ನಾನೀಗ ಬೆಳೆದಿದ್ದೇನೆ! ಹಾರಿ ಬಿಟ್ಟ ಗಾಳಿಪಟ ದೈತ್ಯ ವೃಕ್ಷದ ಎದೆಗೂಡೊಳಗೆ ಸಿಕ್ಕಿ ಹರಿದು ಚೆಲ್ಲಾಪಿಲ್ಲಿಯಾದ ಬಗೆ; ನಿನ್ನೆಯ ಮುಂಗಾರು ಮಳೆ ತಿಳಿಸಿ ಹೋಗಿದೆ… ನೀ ಕೊಟ್ಟ ಕಾಗದದ ದೋಣಿ ಅದರೊಳಗೇ ಕರಗಿ ಕಡಲ ಸೇರಿದೆ! – ತಿಳಿಸಿದ್ದಾಳೆ- ಏಳು ಕೋಟೆಯ ಒಳಗಿರುವ ಮಲ್ಲಿಗೆ ತೂಕದ ರಾಜಕುಮಾರಿ ಕುದುರೆಯೇರಿ ಬರುವ ರಾಜಕುವರನ ಕಾದು-ಸೋತು ತಾನೇ ಕೋಟೆಯೇರುವ ಹುನ್ನಾರ ನಡೆಸಿದ ಹೊಸ ಕಥೆ! ಪಶ್ಚಿಮದ ಗಾಳಿ ಅವಳ ಕೆನ್ನೆ ಸವರಿ ಉಸುರಿದ ಬಗೆ ತಿಳಿಸಿದ್ದಾಳೆ ಪತ್ರದಲ್ಲಿ…. – ನೀ ಮುತ್ತಿಕ್ಕಿದ ಹಾಲ್ಗೆನ್ನೆಯಲ್ಲೀಗ ಮೊಡವೆಯೆದ್ದು ಕೀವು ತುಂಬಿದೆ ಅದೀಗ ಒಡೆಯುವುದಕ್ಕೆ ಕಾದು ನಿಂತಿದೆ!]]>

‍ಲೇಖಕರು G

24 January, 2011

3 Comments

  1. ಈಶ್ವರ ಭಟ್

    ಬೆಳದಾಗ ಬಂದ ಹಿಂದಿನ ನೆನಪು.,ಚೆನ್ನಾಗಿದೆ

  2. guruve

    ಬಹಳ ಮುದ್ದಾಗಿದೆ ಕವನ..

  3. BALU

    nice one

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading