ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತಂಗಾಳಿಯಂತೆ ಅಪ್ಪಿಕೊಳ್ಳುವ ನಿನ್ನ ನೆನಪುಗಳು……

ವೀರಣ್ಣ ಮಂಠಾಳಕರ್

ತೆರೆಯ ಮರೆಯಲ್ಲಿ ಸರಿದು ಹೋಗಬೇಡ ನಿನ್ನ ಪ್ರೀತಿಯ ಹೊರತು ಏನಿಲ್ಲ ಈ ಜಗದಲ್ಲಿ
ಜೊತೆಗೂಡಿ ಮಾತನ್ನಾಡಬೇಕು ಮನದ ದುಃಖವವನ್ನೆಲ್ಲ ಕಳೆದುಕೊಳ್ಳಬೇಕು ನಿನ್ನೆದುರಲ್ಲಿ
 
ಎಷ್ಟೋ ದಿನಗಳಿಂದ ನನ್ನ ನೆನಪುಗಳೇ ಇಲ್ಲದ ಊರೊಳಗೆ ಎಲ್ಲಿ ಕಾಣೆಯಾಗಿದ್ದೆ ಸಖಿ
ನಿನ್ನ ನೆನಪುಗಳ ನೆಲೆಯಲ್ಲಿ ಹಗಲಿರುಳು ಕಾಡಿದ ಕನವರಿಕೆ ಮರೆಯಾಗಲಿಲ್ಲ ಮನಸ್ಸಲ್ಲಿ

ನಿನ್ನೆ ಮೊನ್ನೆಯಷ್ಟೇ ನಡೆದು ಹೋಗಿದ್ದು ಹೊಂಗನಸಿನ ಒಂಟಿ ಪಯಣದ ಜೀವನಕ್ಕೆ ನೀನು
ಜೊತೆಗೂಡಿ ಸಾಗಬೇಕು ನಿನ್ನೊಲವು, ಹರಿದ ಬದುಕಿನ ಕೌದಿಗೆ ತೇಪೆ ಹಚ್ಚಬೇಕು ನೆನಪುಗಳಲ್ಲಿ
 
ನಿನ್ನ ಪ್ರೀತಿಯ ಹೊರತಾಗಿ ಬರುವ ಸಂಭ್ರಮಗಳೆಲ್ಲವೂ ಬಿರುಗಾಳಿಯಲ್ಲಿ ಒಂದಾಗಿ ಹೋಗಲಿ
ತಂಗಾಳಿಯಂತೆ ಅಪ್ಪಿಕೊಳ್ಳುವ ನಿನ್ನಾ ನೆನಪುಗಳು ತುಟಿಯ ಚುಂಬನದಷ್ಟೇ ಸದಾ ಹಸಿರಾಗಿರಲಿ
 
ಏನುಂಟು ಏನಿಲ್ಲ ಈ ಕ್ಷಣಿಕ ಬದುಕಿನ ಉಸಿರಾಟದಲ್ಲಿ ಪ್ರೀತಿಗೊಂದು ಅರ್ಥ ಕೊಡಬೇಕು
ನಿನ್ನೊಳಗೆ ನಾನಿಲ್ಲ, ನನ್ನೊಳಗೆ ನೀನಿರುವಾಗ ಸಿಗದ ಪದಗಳೆಲ್ಲ ಅಡಗಿ ಕುಳಿತಿವೆ ಕವಿತೆಯಲ್ಲಿ
 
ಹೇಗೆ ಹೇಳಲಿ ನಿನ್ನ ಹೇಳಲಾಗದ ಸತ್ಯವನ್ನು ಬಚ್ಚಿಟ್ಟುಕೊಳ್ಳಬೇಡ ‘ವೀರ’ ಎಂದು ಕೇಳಬೇಡ
ನಿಜವನ್ನೆಲ್ಲ ಹೇಳಿಬಿಟ್ಟರೆ ನಿನ್ನಿಂದ ಸಿಗುವ ಪ್ರೀತಿಯೂ ಸಿಗದಿರುವಾಗ ಎಲ್ಲಿ ಹುಡುಕಲಿ ಈ ಜಗದಲ್ಲಿ
 

‍ಲೇಖಕರು G

30 April, 2015

2 Comments

  1. mmshaik

    nice poem..

  2. Rohini Satya

    Harida badukina koudige tepe hachha beku…salu chennagide sir!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading