ಡಿ ಬಿ ರಜಿಯಾ
ಮೋಡಿ
ಹಗಲು ಕಂಡ
ಬಾವಿಗೆ
ಎಡವಿ ಬೀಳುವ
ನಾವು-
ನಾಯಕರ ಆಶ್ವಾಸನೆಯ
ಭರವಸೆಗೆ
ಆಹುತಿಯಾಗುವವರೆ
ಈ ಮೌನ ಮತ್ತೆ ಮತ್ತೆ ಮಾತಾಗಿದೆ- ಹೆಪ್ಪುಗಟ್ಟಿಕೊಂಡು ಭಾವದಲೆಯಲ್ಲಿ ಜೀವಸೆಲೆಯಾಗಿ-

ಯಕ್ಷ ಪ್ರಶ್ನೆ
ಮೂಗುತಿ
ಮೂಕ ಪ್ರಶ್ನೆಯಾಗಿತ್ತು
ಹೇಳಲಾಗದ
ನುಂಗಲಾಗದ
ನೂರೊಂದು ಪ್ರಶ್ನೆಯ
ಕಟಕಟೆಯ-
ಸನ್ನಿವೇಶದ
ಸಂಕೀರ್ಣಕ್ಕೆ
ತೆರೆದುಕೊಳ್ಳಲಾಗದೆ.






0 Comments