ಟಿ ಎನ್ ಸೀತಾರಾಂ ಅವರ ‘ಮಹಾಪರ್ವ’ ಧಾರಾವಾಹಿ ಅಂಗವಿಕಲರನ್ನು ಕುರಿತು ಕೊಡುತ್ತಿರುವ ಸಂದೇಶ ಸರಿಯಾದುದಲ್ಲ ಎಂದು ತೇಜಸ್ವಿನಿ ಹೆಗಡೆ ಅವರು ಟಿಎನ್‌ಎಸ್ ಅವರಿಗೆ ಒಂದು ಪತ್ರ ಬರೆದಿದ್ದರು. ಅದನ್ನು ‘ಅವಧಿ’ಯಲ್ಲಿ ಪ್ರಕಟಿಸಿದ್ದವು. (ಅದನ್ನು ಓದಲು ಇಲ್ಲಿ ಕ್ಲಿಕ್ಕಿಸಿ).
ಆ ಪತ್ರಕ್ಕೆ ಸೀತಾರಾಂ ಅವರು ನೀಡಿರುವ ಉತ್ತರ ಇಲ್ಲಿದೆ :

ತೇಜಸ್ವಿನಿ ಹೆಗಡೆ ಅವರಿಗೆ ನಮಸ್ಕಾರ
ಬ್ಲಾಗ್ ನಲ್ಲಿ ನಿಮ್ಮ ಲೇಖನ ಓದಿದೆ
ನಿಮ್ಮ ಅಭಿಪ್ರಾಯ ಖಂಡಿತ ಸ್ವಾಗತಾರ್ಹ
ಕಥೆ ಮುಗಿಯುವವರೆಗೆ ಕಾದು ನೋಡಿದರೆ ಒಳ್ಳೆಯದು ಎಂದು ನನ್ನ ಅಭಿಪ್ರಾಯ
ಅಸಹಾಯಕರು ಯಾವುದೋ ನಿರ್ಣಾಯಕ ಕ್ಷಣದಲ್ಲಿ ಜಯ ಸಾಧಿಸುವುದು ನನ್ನ ಕಥೆಯ ರೀತಿ. ಇದೇ ರೀತಿ ಅಸಹಾಯಕರಾಗಿದ್ದ
ನನ್ನ ಹತ್ತಿರದ ವ್ಯಕ್ತಿಯೊಬ್ಬರು ಅನುಕಂಪ ಬಯಸುತ್ತಿದ್ದುದು ನನಗೆ ಗೊತ್ತು
ಅವರು ಅದನ್ನು ಮೀರಿ ನಿಂತ ಕ್ಷಣದ ಚಿತ್ರಣ ನನ್ನ ಕಥೆ
ನಿಮ್ಮ ಬಗ್ಗೆ ನನಗೆ ಅಪಾರ ಗೌರವ ಇದೆ. ನಿಮ್ಮ ಅಭಿಪ್ರಾಯ ಅತ್ಯಂತ ಪ್ರಾಮಾಣಿಕ ಎಂದು ನನಗೆ ಗೊತ್ತು
ನನಗೆ ಸಮಾಜಕ್ಕೆ ತಪ್ಪು ಸಂದೇಶ ಕೊಡುವ ಅಸೂಕ್ಷ್ಮ ಮನಸಾಗಲಿ, ಅಂತಹ ಅಗತ್ಯವಾಗಲಿ ನನಗೆ ಇಲ್ಲ
ನಮಸ್ಕಾರ





ನನಗೆ ಸಮಾಜಕ್ಕೆ ತಪ್ಪು ಸಂದೇಶ ಕೊಡುವ ಅಸೂಕ್ಷ್ಮ ಮನಸಾಗಲಿ, ಅಂತಹ ಅಗತ್ಯವಾಗಲಿ ನನಗೆ ಇಲ್ಲ..nice sir…
ಸೀತಾರಾಂ ರವರೇ,ಮಹಾಪರ್ವ ಧಾರಾವಾಹಿಯಲ್ಲಿ ಮುಂದೆ ಮಂದಾಕಿನಿಯ ಪಾತ್ರ ಒಳ್ಳೆಯ ತಿರುವು ಪಡೆಯುತ್ತದೆ ಎಂಬುದು ಸ್ವಾಗತಾರ್ಹ.ಆದರೆ ಇಂದು ಅಂಗವಿಕಲರು ಅನುಕಂಪ ನಿರೀಕ್ಷಿಸುವ ಸ್ಥಿತಿಯಲ್ಲಿ ಅವರನ್ನು ಇಟ್ಟದ್ದೂ ಕೂಡ ಅವರನ್ನು ಅಸಹಾಯಕರನ್ನಾಗಿ ಮಾಡಿದ ಸಮಾಜವೇ. ಅವರು ಅಂಗವಿಕಲರಾದದ್ದು ಬಹಳವಾಗಿ ಇಡೀ ಮಾನವ ದೈಹಿಕ ಹಾಗು ಸಮಾಜ ರಚನೆಯ ಪ್ರಶ್ನೆಯಾದರೂ ಹಿಂದಿನ ಜನ್ಮದ ಪಾಪ ಪುಣ್ಯ ಇತ್ಯಾದಿ ಕಲ್ಪನೆಗಳಿಂದ ಅವರನ್ನೇ ಹೊಣೆಯಾಗಿ ಮಾಡಿದ , ಅವರಿಗೆ ಬೇಕಾದ ಅವಕಾಶ ನೀಡದ ಸಮಾಜವೇ. ತೇಜಸ್ವಿನಿಯವರು ಹಿಂದಿನ ಬರೆಹವೊಂದರ ಲಿಂಕ್ ಕೊಟ್ಟಿದ್ದಾರೆ. ಯಾರ ಬಗ್ಗೆ ಅನುಕಂಪ ಪಡಬೇಕು. ಆ ಅಮಾನವೀಯ ಡಾಕ್ಟರನ ಬಗ್ಗೆಯೋ, ಅಂಗವಿಕಲರ ಬಗ್ಗೆಯೋ ? ” ಅನುಕಂಪ ಬೇಡ ಅವಕಾಶ ಕೊಡಿ ” ಇದು ಅಂಗವಿಕಲರ ಒಕ್ಕೊರಲ ಕೂಗು.ಅಂಗವಿಕಲರ ಬಗ್ಗೆ ಚಿತ್ರಿಸುವಾಗ್ಗೆಲ್ಲಾ ಈ ಭಾವನೆ ಮೂಡುವಂತಿರಬೇಕು ಎಂದು ನಮ್ಮ ನಿರೀಕ್ಷೆ.
very gud devolopment, nice of u sir
. ನಿಮ್ಮ ಅಭಿಪ್ರಾಯ ಅತ್ಯಂತ ಪ್ರಾಮಾಣಿಕ ಎಂದು ನನಗೆ ಗೊತ್ತು
ನನಗೆ ಸಮಾಜಕ್ಕೆ ತಪ್ಪು ಸಂದೇಶ ಕೊಡುವ ಅಸೂಕ್ಷ್ಮ ಮನಸಾಗಲಿ, ಅಂತಹ ಅಗತ್ಯವಾಗಲಿ ನನಗೆ ಇಲ್ಲ
nimma spandana manobhava nanage istavaaytu….
ಸೀತರಾಮ್ರವರಲ್ಲಿ ಒಂದು ನಮ್ರ ಮನವಿ.
ವಿಖಲ ಚೇತನರ ಸಮಸ್ಯೆಗಳ ಬಗ್ಗೆ
ಹಾಗೂ ೧೯೯೫ ರಲ್ಲಿ ಜಾರಿಗೊಂಡರು ಇಂದಿಗೂ ಪೂರ್ಣ ಪ್ರಮಾಣದಲ್ಲಿ ಜಾರಿಗೊಳ್ಲದ “ಅಂಗವಿಖಲ ವ್ಯಕ್ತಿಗಳ (ಸಮಾನ ಅವಕಾಶಗಳು, ಹಕ್ಕುಗಳ ಸಂರಕ್ಷಣೆ ಹಾಗೂ ಪೂರ್ಣ ಭಾಗವಹಿಸುವಿಕೆ) ಅಧಿನಿಯಮ” ಕುರಿತಂತೆ ಬೆಳಕು ಚೆಲ್ಲುವಿರಾ?
ವಿಖಲ ಚೇತನ ಸಮುದಾಯ ಒಂದು ಅತ್ಯಂತ ಅಲ್ಪಸಂಖ್ಯಾತ ಹಾಗೂ ಅತೀ ಹೆಚ್ಚು ಸೋಶಣೆಗೊಳಪಡುತ್ತಿರುವ ವರ್ಗವಾಗಿದ್ದು,
ಬಹಳಷ್ಟು ಸಂಘಸಂಸ್ತೆಗಳು ಆರ್ಥಿಕ ಸ್ವಾರ್ತಸಾಧನೆಗಾಗಿ ಇವರನ್ನು ಬಳಸಿಕೊಳ್ಳುತ್ತಿವೆ.ಮತ್ತೋಂದು ಆಘಾತಕಾರಿ ಬೆಳವಣಿಗೆ ಎಂದರೆ, ಇಂತಹ ಶೋಶಕ ಸಂಸ್ತೆಗಳಲ್ಲಿ ಅನೇಕವು ಅಂಗವಿಖಲ ವ್ಯಕ್ತಿಗಳಿಂದಲೇ ನಡೆಸಲ್ಪಡುತ್ತಿದ್ದು, ಹೊರ ಜಗತ್ತಿಗೆ ಅದ್ಬುತವೆಂಬಂತೆ ತಂಮನ್ನು ಪ್ರಚಾರಪಡಿಸಿಕೊಳ್ಳುತ್ತಿವೆ.
ಇದಕ್ಕೆ ಕಾರಣ, ವಿದೇಶಗಳಿಂದ ಹಾಗೂ ಕಾರ್ಪುರೇಟ್ ಕಂಪನಿಗಳ ತೆರಿಗೆ ಗಳ್ಳತನದ ಯತ್ನದ ಫಲವಾಗಿ ಹರಿದು ಬರುವ ಹಣಕಾಸು.
ವಿಚಿತ್ರವೆಂದರೆ, ಇಂತಹ ಸಂಸ್ತೆಗಳು ಕೇದ್ರಿಕೃತಗೊಂಡಿರುವುದು ರಾಜ್ಯದ ಬೆಂಗಳುರು ಹಾಗೂ ಈ ತರಹದ ಮಹಾ ನಗರಿಗಳಲ್ಲೇ.
ಇಷ್ಟೇ ಅಲ್ಲದೆ, ಸರಕಾರದ ವಿವಿದ ಇಲಾಖೆಗಳಲ್ಲಿ ಸಾಶನಬದ್ದ ಮೀಸಲಾತಿಯು ದೊರೆಯುತ್ತಿಲ್ಲ.
ಸಂಕ್ಷೀಪ್ತವಾಗಿ ಹೇಳುವುದಾದರೆ, ಸರಕಾರ ಹಾಗೂ ಸರಕಾರೇತರ ಸಂಸ್ತೆಗಳು ಬಹುದೊಡ್ಡ ಶೋಶಕ ಶಕ್ತಿಗಳಾಗಿವೆ.
ಈ ಅಂಶಗಳನ್ನು ತಮ್ಮ ಧಾರಾವಾಹಿಯಲ್ಲಿ ತೋರಿಸಿದಲ್ಲಿ
ಹೆಚ್ಚು ಜನರನ್ನು ತಲುಪಲು ಹಾಗೂ ಜಾಗೃತಿ ಮೂಡಿಸಲು ನೆರವಾಗುತ್ತದೆ.