ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೀವದ ಎರಕ

ನಾ ದಿವಾಕರ

ಸವೆದ ಹಾದಿಯ ಮರೆ
ಪೊರೆದ ದಾದಿಯ ತೊರೆ
ಎರೆದ ಹಾಲನು ಸವಿದು
ವಿಷ ಒಸರುವೆಯೇಕೆ ಮಗೂ;

ಒಡಲ ವಾತ್ಸಲ್ಯವ ತ್ಯಜಿಸು
ಮಡಿಲ ಒಲುಮೆಯ ಅಳಿಸು
ಜೋಗುಳದ ಸಿಹಿಯುಂಡು
ಧ್ವನಿ ಮರೆವೆಯೇಕೆ ಮಗೂ;

ತುತ್ತುಣಿಸಿದ ಕೈಗಳ ಎತ್ತೊಗೆ
ನೊಗಹೊತ್ತ ಹೆಗಲನು ಕಿತ್ತೊಗೆ
ಎದೆಯಂಗಳದಿ ಸಿರಿ ಕಂಡು
ಬೆನ್ನಲಿ ಇರಿವೆಯೇಕೆ ಮಗೂ;

ಭಾವ ದೀಪ್ತಿಯ ನಂದಿಸು
ಜೀವ ನಾಡಿಯ ಬಂಧಿಸು
ಹಾಸುಗಲ್ಲುಗಳ ಮೇಲ್ನಡೆದು
ಮುಳ್ಳಾಗುವೆಯೇಕೆ ಮಗೂ;

ಸಿಹಿ ನೆನಪುಗಳ ಸುಟ್ಟುಬಿಡು
ಸವಿ ಹೆಜ್ಜೆಗಳ ಹೊಸಕಿಬಿಡು
ಭಾವಧಾರೆಯಲಿ ಮೊಳೆತು
ಜೀವ ಚಿವುಟುವೆಯೇಕೆ ಮಗೂ!

‍ಲೇಖಕರು Avadhi

4 March, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading