ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಯಶ್ರೀ ಬಿ ಕದ್ರಿ ಕವಿತೆ- ಬೆಳಕೇ ಬಾ…

ಜಯಶ್ರೀ ಬಿ ಕದ್ರಿ

ಒಳ ಮನೆಯ ಬೆಳಕಿಗೂ
ಒಳ ಮನದ ಬೆಳಕಿಗೂ
ಕತ್ತಲೆಯನೋಡಿಸುವ
ಕಾಯಕ

ಸೊಡರ ಕಾಡುವ ಗಾಳಿ
ಆರಿ ಹೋಗುವ ತೈಲ
ಪೊರೆವ ಕೈಗಳು ಬೇಕು
ಕಿರು ಹಣತೆಗೆ

ಭಾವ ದೀಪ್ತಿಯ ಬೆಲಕು
ಚಿತ್ತ ಕೋಶದ ತುಂಬ
ಬೆಳಕಿನಲೆಗಳನು
ತುಂಬಿಕೋ ಮನವೆ

ಕತ್ತಲೆಯ ಕಾವಳದಿ
ಕಂಗೆಡುವಾ ಕನಸ
ಕಾಪಿಡುವ ಕಾಯಕವ
ಮುನ್ನಡೆಸು ಬೆಳಕೆ

‍ಲೇಖಕರು Admin

26 October, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading