ಜಯಶ್ರೀ ಬಿ ಕದ್ರಿ ಕಂಡಂತೆ ‘ಕೆಂಡದ ಬೆಳುದಿಂಗಳು’

ಜಯಶ್ರೀ ಬಿ ಕದ್ರಿ

ಹೊಸ ತಲೆಮಾರಿನ ಯುವ ಕತೆಗಾರ ಗುರುಪ್ರಸಾದ್ ಕಂಟಲಗೆರೆಯವರ ‘ಕೆಂಡದ ಬೆಳುದಿಂಗಳು’ ಕೃತಿ ಇತ್ತೀಚೆಗೆ ನನ್ನನ್ನು ಬಹುವಾಗಿ ಕಥಾ ಕಥಾ ಸಂಕಲನ. ಪ್ರಜಾವಾಣ ಕಥಾ ಸ್ಪರ್ಧೆ ಮೊದಲುಗೊಂಡು ಹಲವು ಪ್ರಶಸ್ತಿಗ:ಳಿಗೆ ಭಾಜನರಾದ ಈ ಯುವ ಕಥೆಗಾರರ ಕಥನ ಶೈಲಿ, ವಸ್ತು ವೈವಿಧ್ಯ, ನಿರೂಪಣೆ ಬೆರಗು ಹುಟ್ಟಿಸುವಂತದ್ದು. ದಲಿತ ಲೋಕದ ಅನಾವರಣವೇ ಆಗಿದ್ದರೂ ಈ ಕತೆಗಳು ತಮ್ಮ ನಿರೂಪಣೆಯ ತಾಜಾತನದಿಂದ, ಅಪ್ಪಟ ಪ್ರಾಮಾಣಿ ಕ ಅಭಿವ್ಯಕ್ತಿಯಿಂದ ಓದುಗರಿಗೆ ಆಪ್ತವಾಗುತ್ತವೆ. ಒಟ್ಟು ಹತ್ತು ಕತೆಗಳಿರುವ ಈ ಕಥಾ ಸಂಕಲನವನ್ನು ವಸ್ತು ನಿಷ್ಠವಾಗಿ ವಿಮರ್ಶಿಸುವ ಪ್ರಯತ್ನ ಇದು.

ತಲೆಮಾರುಗಳ ಸಂಘರ್ಷ, ವಿದ್ಯಾಭ್ಯಾಸ ಪಡೆದ ಯುವಕರ ಒಳತೋಟಿಗಳನ್ನು ಸ್ಪಷ್ಟವಾಗಿ ದಾಖಲಿಸುವ ಕತೆ ‘ಚಾಕರಿ’ ಹಳೆಯ ತಲೆಮಾರು ಕಂದಾಚಾರಗಳು, ಮೌಧ್ಯಗಳನ್ನು, (ಪರಂಪರೆಯಿ೦ದ, ಮೇಲ್ವರ್ಗದ ಜನರಿಂದ ರೂಪಿಸಲ್ಪಟ್ಟ) ಮೀರಲು ಭಯ ಪಡುತ್ತಿದ್ದರೆ ಹೊಸ ತಲೆಮಾರಿನ ಯುವ ಜನತೆ ತಮ್ಮ ಓದಿನಿಂದ, ಅದರಲ್ಲೂ ಅಂಬೇಡ್ಕರ್ ಚಿಂತನೆಗಳಿ೦ದ ತಮ್ಮ ಕೇರಿ ಉದ್ಧಾರವಾಗಬೇಕು, ಊರ ದೇವತೆ ತಮ್ಮ ‘ಹಟ್ಟಿ’ಗಳ ಸಮೀಪ ಬರಬೇಕು ಎಂದು ನಿರೀಕ್ಷಿಸುತ್ತದೆ ಹಾಗೂ ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗುತ್ತದೆ. ಈ ಕತೆಯಲ್ಲಿ ‘ಚಾಕರಿ’ ಮಾಡುವ ನರಸಣ್ಣನ ಕಾಲಿನ ಚಪ್ಪಲಿ ಆಕಸ್ಮಿಕವಾಗಿ ಊರಿನೊಳಗೆ ‘ಪರಿನೂಟ’ಕ್ಕೆ ಸಾರು ತಯಾರಿಸುತ್ತಿದ್ದ ಹಂಡೆಗೆ ಬಿದ್ದು ಆತನಿಗೆ ೨೦,೦೦೦೦ರೂ.

ದಂಡ ವಿಧಿಸಲಾಗುತ್ತದೆ. ಊರಿನ ಯುವಕರು ‘ಚಾಕರಿಯನ್ನು ಬಿಡುವುದಾದಲ್ಲಿ ಉಳಿಕೆ ಹಣ ಐದು ಸಾವಿರ ಕೊಡುವುದಾಗಿ ಹೇಳುತ್ತಾರೆ.ನರಸಣ್ನ ಒಪ್ಪುತ್ತಾನೆ; ಆದರೆ ಆತ ‘ಚಾಕರಿ’ಯನ್ನು ಬಿ|ಡಲೊಲ್ಲ. ಈ ಕತೆಯ ‘ಕ್ಲೈ ಮಾಕ್ಸ್’ ಅದ್ಭುತ. ‘ಬಸವಣ್ಣನ ಜಾತ್ರೆಲಿ ದೇವ್ರಿಗೆ ಮುಟ್ಟಾಗಿದ್ರಿಂದ, ಪುಣ್ಯವಾದ್ನೆ ಮಾಡುಕ್ಕೇಂತ ಗುಡಿ ಗೌಡ್ರು ತೀರ್ಮಾನಿಸವ್ರೆ’, ‘ಮನಿಗೊಂದಾಳಿನ೦ತೆ ಗುಡಿತಕೆ ರ‍್ರಪ್ಪೊ, ರ‍್ರಿ’ ಎಂದು ಕೂಗುತ್ತಿತ್ತು. ಆ ದನಿ ನಮ್ಮ ಕುಲ್ವಾಡಿ ನರಸಪುರದೆ ಆಗಿತ್ತು’- ಈ ಸಾಲುಗಳು ಅತ್ಯಂತ ಸಮರ್ಥವಾಗಿ ವಿಷಾದವನ್ನುಕ್ಕಿಸುತ್ತಲೇ ‘ಚಾಕರಿ’ಯ ಮನಸ್ಥಿತಿಗೆ ಒಗ್ಗಿ ಹೋದ ಜೀವಗಳು ಹೇಗೆ ತಮ್ಮ ಬಿದುಗಡೆಯ ದಾರಿಗಳು ಗೋಚರವಾದರೂ ಒಪ್ಪಿಕೊಳ್ಳುವುದುಲ್ಲ ಎಂದು ನಿಚ್ಚಳವಾಗಿ ಹೇಳುತ್ತದೆ.

ಕತೆ ಪ್ರಾರಂಭವಾಗುವುದು ಮಂಗನ ಹಳ್ಳಿ ಎಂಬಲ್ಲಿ. ‘ಊರೊಳ್ಳರಷ್ಟೇ ಮನೆಗಳು ಹಟ್ಟಿಗರವೂ ಅದವೆ. ದೇಶದ ಎಲ್ಲೆಡೆ ಇದ್ದಂತೆ ಇಲ್ಲೂ ಹೊಲೆ ಮಾದಿಗರನ್ನು ದುಡಿಮೆಗಲ್ಲದೆ ಇನ್ನಾವುದಕ್ಕೆ ಬಿಟ್ಟುಕೊಳ್ಳುವುದಿಲ್ಲ’ ಅಸ್ಪöÈಶ್ಯತೆ ದಟ್ಟವಾಗಿರುವ ಊರು ಅದು. ಈ ಕತೆಯಲ್ಲಿನ ಬಂಡಾಯದ ಕಿದಿ ಹತ್ತಿಕೊಳ್ಳುವುದು ಹಾಸ್ಟೆಲ್ ನಲ್ಲಿದ್ದು ಓದುತ್ತಿರುವ ಯುವಕರ ಮೂಲಕ. ಬಸವೇಶ್ವರ ಜಾತ್ರೆಯಲ್ಲಿ ಹೇಗಾದರೂ ಮಾಡಿ ದೇವರು ‘ನಮ್ಮಟ್ಟಿ ಒಳಗೆ ಬರಂಗೆ ಮಾಡ್ಬೇಕು ಕಳ್ಳ’ ಎನ್ನುವುದು ಅವರ ಆಸೆ. ನರಸಣ್ಣನ ‘ಚಾಕರಿ’ ಮನಸ್ಥಿತಿಯಿಂದ ಕೊನೆಗೂ ಅದು ಈಡೇರುವುದಿಲ್ಲ.

ಇನ್ನು ಕಂಟಲಗೆರೆ ಅವರ ಕತೆಗಳಲ್ಲಿನ ಅತಿ ಮುಖ್ಯ ಶಕ್ತಿ ಅವುಗಳ ಕಥನ ಶೈಲಿ. ಕೌತುಕವನ್ನು ಕೊನೆಯ ತನಕ ಉಳಿಸಿಕೊಂಡು ಹೋಗುವ ವಿಧ. ‘ಇವ ನಮ್ಮವ’ ಕತೆಯಲ್ಲಿನ ಉದ್ಯೋಗಶ್ಥ ದಂಪತಿಗಳ ಕತೆಯಲ್ಲಿ ‘ಸಾವಿತ್ರಿ’ ಎನ್ನುವ ಹೆಣ್ಣು ಮಗಳು ಕೆಳವರ್ಗದವರೆಂದು ಅವರಿಗೆ ಮನೆಕೆಲಸದವರೂ ಸಿಗಲಾರದ ಪರಿಸ್ಥಿತಿ. ಸಮಾಜದಲ್ಲಿ ಇನ್ನೂ ಬೇರೂರಿರುವ ಜಾತಿ ಪದ್ಧತಿ, ವಿದ್ಯಾಭ್ಯಾಸದಿಂದಲೂ, ಉದ್ಯೋಗದಿಂದಲೂ ಕೂಡ ಅವನ್ನು ಸರಿ ಪದಿಸಲಾಗದ ಅಸಹಾಯಕತೆಯ ದಟ್ಟ ನಿರೂಪಣೆ ಈ ಕತೆಯಲ್ಲಿದೆ.

ಈ ಕತೆಗಳಲ್ಲಿನ ಇನ್ನೊಂದು ಅಂಶ ನಗರ ಪ್ರಜ್ನೆ ಹಾಗೂ ಹಳ್ಳಿ ಮೂಲಗಳ ನಡುವಣ ಸಂಘರ್ಷ. ಹಳ್ಳಿಗಳ ಜಾತೀಯತೆಯನ್ನು ತೊಡೆದು ಹಾಕಾಲಾಗದಿದ್ದರೂ ನಗರಗಳಲ್ಲಿ ಅಸ್ಪೃಶ್ಯತೆಯ ಛಾಯೆ ಕಡಿಮೆ ಇರುವುದು, ಆರ್ಥಿಕ ಸ್ವಾತಂತ್ರ್ಯ ಕೊಡುವ ‘ಸಮಾನತೆಗೆ ಅವಕಾಶ ಇರುವುದು ಹೌದಾದರೂ ಒಂದು ಬಗೆಯ ಆತಂಕದಿ೦ದಲೋ, ಸಾಮಾಜಿಕ ವ್ಯವಸ್ಥೆಯಲ್ಲಿ ತಮ್ಮದಲ್ಲದ ತಪ್ಪಿಗೆ ಜೀವ ಹಿಡಿಯಾಗಿಸಿಕೊಳ್ಳುವ ಸಂದರ್ಭಗಳು ಇಲ್ಲಿನ ಪಾತ್ರಗಳಿಗೆ ಆಗಾಗ ಎದುರಾಗುತ್ತಿರುತ್ತವೆ.

‘ನೌಕರಸ್ಥ ಒಂದು ಕುಟುಂಬ ಸುಭಿಕ್ಶವಾಗಿದ್ದರೆ ಸಾಕೆ ತಮ್ಮ ಪರಂಪರೆ, ಸಂಸ್ಕೃತಿ, ಬದುಕು ಬವಣೆಗಳ ಕಡೆಗೆ ಬೆಳಕು ಚೆಲ್ಲುವ ಹಲವು ಕುರುಹುಗಳು, ಗುಡಿಸಲುಗಳ ರೂಪದಲ್ಲಿ, ಬಾಡು ಸಿಗಿಯುವ, ಹಿತ್ತಲಿನ ರೂಪದಲ್ಲಿ, ಉದ್ಯೋಗ ಮಾಡುವ ಸಾಮಗ್ರಿ ರೂಪದಲ್ಲಿ ಸುತ್ತಲೂ ಹರಡಿತ್ತು ‘ (ಕಥೆ: ಪ್ರತಿಮೆ ತೆರವು) ಹೀಗೆ ಗುರುಪ್ರಸಾದ್ ಅವರ ಕತೆಗಳಲ್ಲಿ ದಲಿತ ಸಮುದಾಯದ ದಟ್ಟ ವಿವರಗಳಿವೆ. ಸಿಡಿ, ತೇರು, ಬಾಯಿ ಬೀಗ, ಗಾಳಿ ಬಿಡಿಸುವುದು ಇತ್ಯಾದಿ ಆಚರಣೆಗಳ ವಿವರಗಳು, ಚಪ್ಪಲಿ ಹೊಲಿಯುವವರ ಕತೆ, ಪಂಚರ್ ಹಾಕುವವರ ಕತೆ, ಕುರಿ ಕಾಯುವವರ ಕತೆ,.. ಹೀಗೆ ಕಂಟಲಗೆರೆ ಅವರ ಕತೆಗಳ ಹರಹು ದೊಡ್ಡದು. ಸಾಮಾಜಿಕ ಸ್ಥಿತ್ಯಂತರಗಳನ್ನೂ ಇವು ದಾಖಲಿಸುತ್ತವೆ.

ಪುಟ್ಟ ಹೋಬಳಿಯೊಂದು ಉತ್ತರ ಬಾರತದವರ ಅತಿಕ್ರಮಣದಿಂದ ಹೇಗೆ ತನ್ನ ಚಹರೆಯನ್ನೇ ಬದಲಾಯಿಸ್ಕೊಳ್ಳುತ್ತದೆ, ಅಲ್ಲಿನ ಮೂಲ ನಿವಾಸಿಗಳು ತಮ್ಮ ಆದಾಯ ಮೂಲವನ್ನೇ ಕಳೆದುಕೊಳ್ಳುತ್ತಾರೆ ಎಂದು ಹೇಳುವ ಕತೆ ‘ಬೇರಿಗಂಟಿದ ಮರ’. ಇಲ್ಲಿನ ಕಾರಜ್ಜ ಭಾರತದ ಅನೇಕ ನಿಸ್ಸಹಾಯಕ ಬೀದಿ ವ್ಯಾಪಾರಿಗಳ ಪ್ರತೀಕವೇ ಆಗಿದ್ದಾನೆ.

ಇವಲ್ಲದೆ ಇನ್ನೊಂದು ಕುತೂಹಲಕಾರಿ ವಿಷಯ ಗ್ರಾಮ್ಯ ಆಡು ಭಾಷೆಯಲ್ಲಿ ಇಂಗ್ಲಿಷ್ ಬಳಕೆಯಾಗುವ ವಿಧ. ಅಪ್ಪನ ‘ಇಂಷಿಲ್’, ಪಿಡಬ್ಲಿಯೋಡಿ, ಆ೦ಟಿಚಾರ್ಜಿಗೆ, ರೆಡ್ ಹ್ಯಾಂಡಾಗೆ, ಪಂಪು ಮೋಟ್ರು, ಸಪರೇಟಾಗಿ, ‘ಏರ್ಪಿನ್ನ ಬಾಚಾಣ್ಗೆ ಮಾರಾರು’..

ಹೀಗೆ. ಅದೇ ರೀತಿ ತುಮಕೂರು ಸೀಮೆಯ ಆಡು ಮಾತಿನ ಪದಗಳು ಒಂದು ರೀತಿಯ ರಮ್ಯ ಮೋಹಕತೆಯಿಂದ ಬಳಕೆಯಾಗಿವೆ- ‘ಇದೇನಿಂಗಾತು’, ‘ಕಾಡಂದಿ’, ‘ಅದುನ್ನ’, ‘ಯತ್ತಗ್ಲುದೋ ಗಾಳಿ ಮೆಟ್ಕಣಕೆ ಶುರುವಾಗಿ’, ‘ತಾತುನ ಕಾಲ್ದಿಂದ್ಲೂ’, ‘ಮಂಗ್ಳಾರ’.. ಹೀಗೆ.

ಇಲ್ಲಿನ ಕತೆಗಳಲ್ಲಿ ಬರುವ ಯುವಕರು ಸ್ಕೂಲು, ಕಾಲೇಜುನ, ಆಧುನಿಕ ವಿದ್ಯಾಭ್ಯಾಸದ ಪ್ರಭಾವಕ್ಕೆ ಒಳಗಾದವರು. ತಮ್ಮ ಸಾಂಸ್ಕೃತಿಕ ಹಿನ್ನೆಲೆ, ಕೌಟುಂಬಿಕ ಕಟ್ಟುಪಾಡುಗಳು, ಅವಕ್ಕೂ ಮೀರಿದ ಸಾಮಾಜಿಕ ಅಸಮಾನತೆಯನ್ನು ಪ್ರಶ್ನಿಸುತ್ತಲೇ ತಮ್ಮ ಗೊಂದಲಗಳನ್ನು ನಿವಾರಿಸಿಕೊಳ್ಳುವ ಪ್ರಯತ್ನದಲ್ಲಿರುತ್ತಾರೆ.

‘ಎರಡನೆ ಹೆಂಡ್ತಿ’ ಲೇಖಕರ ಸಂವೇದನಾ ಶೀಲತೆಯನ್ನು, ಹೆಣ್ಣು ಜೀವಗಳ ಬಗ್ಗೆ ಅವರ ಕಳಕಳಿಯನ್ನು ಬಿಂಬಿಸುವ ಕತೆ. ಹಿರಿ ವಯಸ್ಸಿನ ಗಂಡ೦ದಿರನ್ನು ಕಟ್ಟಿಕೊಳ್ಳಬೇಕಾಗಿ ಬರುವ ಎಳೆ ವಯಸ್ಸಿನ ಹೆಣ್ನು ಮಕ್ಕಳ ಶೋಕವನ್ನು, ಅಸಹಾಯಕತೆಯನ್ನು ಈ ಕತೆ ಮನಸ್ಸಿಗೆ ತಾಕುವಂತೆ ಚಿತ್ರಿಸುತ್ತದೆ. ಲಕ್ಕಮ್ಮ ತನ್ನ ಹೆಣ್ಣು ಮಕ್ಕಳಾದರೂ ಈ ಯಾತನೆ, ಮೂದಲಿಕೆ, ಅವಮಾನದಿಂದ ಮುಕ್ತರಾಗಬೇಕೆಂದು ಹಂಬಲಿಸುತ್ತಾಳೆ. ಹಾಗಿದ್ದರೂ ತನ್ನ ಮಗಳಿಗೂ ಇಂತಹುದೇ ಸಂಬ೦ಧಗಳು ಬಂದು ಸುತ್ತಿಕೊಳ್ಳುವುದನ್ನು ನೋಡುವ ಸಂಕಟ ಆಕೆಯದು. ” ಶವರ್ ಮನೆ’ ಸೇರಿದಂತೆ ಇಲ್ಲಿನ ಎಲ್ಲ ಕತೆಗಳು ದಲಿತ ಲೋಕಕ್ಕೆ ಸಂಬAಧಿಸದವೇ ಆಗಿದ್ದು ಒಬ್ಬೊಬ್ಬರಿಗೂ ಒಂದೊ೦ದು ಬಗೆಯ ಸಂಕಟ-ಸಮಾಧಾನವಿದೆ.

“ಪ್ರಸ್ತುತ ಸಂಕಲನದ ಎಲ್ಲಾ ಕಥೆಗಳಲ್ಲಿ ಬರುವ ಪಾತ್ರಗಳು ಈ ಲೋಕ ನಿರ್ಮಿಸಿದ ಬಂಧನಕಾರಿ ವ್ಯವಸ್ಥೆಗಳಿಂದ ಬಿಡುಗಡೆಗೆ ಹಂಬಲಿಸಿ ಆಕಾಶಕ್ಕೆ ಚಾಚಿವೆ. ಆದರೆ ಅಸ್ಪೃಶ್ಯರೆಂದು ಕರೆಸಿಕೊಳ್ಳುವ ಇವರ ಕೈಗಳು ಮುಟ್ಟಲಾರದ ಆಕಾಶಕ್ಕೆ ಚಾಚಿದಾಗಲೂ ಬರಿ ಗೈ ಮಾತ್ರ( ಹಿನ್ನುಡಿ: ಗೋವಿಂದ ರಾಜು ಕಲ್ಲೂರು)

ಇನ್ನು ಈ ಕೃತಿಯನ್ನು ಕೈಗೆತ್ತಿಕೊಂಡಾಗಲೇ ಮೊತ್ತ ಮೊದಲು ಆಕರ್ಷಿಸಿದ್ದು ಈ ಕೃತಿಯ ಶೀರ್ಷಿಕೆ , ‘ಕೆಂಡದ ಬೆಳುದಿಂಗಳು’ ಇಂಗ್ಲಿಷ್ ನಲ್ಲಿ Oxymoron ಅಂತಾರಲ್ಲ ಹಾಗೆ ವೈರುಧ್ಯಗಳೊಂದಿಗೆ ಸೆಣಸುವ, ಬೆಂಗಾಡಿನಲ್ಲಿ ನೀರು ಅರಸುವ, ಬಿಸಿಲ ಬೇಗೆಯಲ್ಲಿ ತಂಗಾಳಿಗೆ ಹಂಬಲಿಸುವ ಇಲ್ಲಿನ ಕತೆಗಳು ಅನಾವರಣಗೊಳ್ಳುತ್ತವೆ. ಒಂದು ರೀತಿಯ ನಿರ್ಲಿಪ್ತಿಯಿಂದ ನಿರೂಪಣೆಗೊಳ್ಳುವ ಈ ಕಥನಗಳಿಗೆ ಕನ್ನಡ ಕಥಾ ಲೋಕದಲ್ಲಿ ತಮ್ಮದೇ ಅನನ್ಯ ಸ್ಥಾನವಿದೆ.

‍ಲೇಖಕರು Admin

January 15, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: